ಕೊರೊನಾವೈರಸ್ ಪ್ರಕರಣ ಮತ್ತೆ ಹೆಚ್ಚುತ್ತಿರುವುದೇಕೆ ಗೊತ್ತೇ?
ಮದುವೆಯಂತಹ ಕಾರ್ಯಕ್ರಮಗಳು ಕೊರೊನಾ ವೈರಸ್ ಪ್ರಕರಣಗಳು ತೀವ್ರ ರೀತಿಯಲ್ಲಿ ಹೆಚ್ಚಳವಾಗುವುದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರದ ಸಮಿತಿಯೊಂದು ಹೇಳಿದೆ.
ನವದೆಹಲಿ: ಮದುವೆಯಂತಹ ಕಾರ್ಯಕ್ರಮಗಳು ಕೊರೊನಾ ವೈರಸ್ ಪ್ರಕರಣಗಳು ತೀವ್ರ ರೀತಿಯಲ್ಲಿ ಹೆಚ್ಚಳವಾಗುವುದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರದ ಸಮಿತಿಯೊಂದು ಹೇಳಿದೆ.
ಇಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಕೊರೊನಾ ಮಾರ್ಗಸೂಚಿಗಳು ಪಾಲಿಸುವುದರಲ್ಲಿ ಜನರು ವಿಫಲರಾಗುತ್ತಿದ್ದಾರೆ.ಈಗ ಇಂತಹ ಸಾಮೂಹಿಕ ಸಭೆಗಳನ್ನು ತಪ್ಪಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ ಮುಂಬೈನಲ್ಲಿ 3,062 ಕೊರೊನಾ ಪ್ರಕರಣಗಳು ದಾಖಲು
ನ್ಯೂಸ್ 18 ರ ವರದಿಯ ಪ್ರಕಾರ, ಪಂಜಾಬ್‌ನ ರಾಜ್ಯ ಅಧಿಕಾರಿಗಳು ಕನಿಷ್ಠ 30 ಸೂಪರ್-ಸ್ಪ್ರೆಡರ್ ನಿದರ್ಶನಗಳನ್ನು ಕಂಡುಕೊಂಡಿದ್ದಾರೆ, ಒಂದೇ ಘಟನೆಯಿಂದ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ದೆಹಲಿಯಲ್ಲಿಯೂ ಸಹ, ನಗರದಲ್ಲಿ ಇತ್ತೀಚೆಗೆ COVID-19 ಪ್ರಕರಣಗಳು ಹೆಚ್ಚಾಗಲು ಮದುವೆಗಳು, ಸಾಮಾಜಿಕ ಪ್ರವಾಸಗಳು ಮತ್ತು ದೊಡ್ಡ ಕೂಟಗಳು ಕಾರಣವಾಗಿವೆ.
ಏತನ್ಮಧ್ಯೆ, ಭಾರತವು ಒಂದು ದಿನದಲ್ಲಿ 40,953 ಹೊಸ ಸೋಂಕುಗಳನ್ನು ವರದಿ ಮಾಡಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ, ಇದು ಸುಮಾರು 111 ದಿನಗಳಲ್ಲಿ ಒಂದೇ ದಿನದ ಗರಿಷ್ಟ ಏರಿಕೆಯಾಗಿದೆ. ನವೆಂಬರ್ 29 ರಂದು, 24 ಗಂಟೆಗಳ ಅವಧಿಯಲ್ಲಿ ಒಟ್ಟು 41,810 ಹೊಸ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Covid 2nd wave ನಿಯಂತ್ರಿಸಲು ಪೂರ್ವಸಿದ್ಧತೆ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಒಟ್ಟು ಮೊತ್ತ ಈಗ 1,15,55,284 ಆಗಿದೆ. ಶುಕ್ರವಾರ, 39,726 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಹಿಂದಿನ ದಿನ 35,871 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಭಾರತ ಕೇವಲ ಮೂರು ದಿನಗಳಲ್ಲಿ ಒಂದು ಲಕ್ಷ ಪ್ರಕರಣಗಳನ್ನು ದಾಖಲಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.