Covid-19 ವಿರುದ್ಧದ ಹೋರಾಟಕ್ಕೆ Lockdown ಅವಶ್ಯಕ, ಆದರೆ ಪ್ಲಾನ್ ಮಾಡಬೇಕಿತ್ತು!

COVID-19 ವಿರುದ್ಧ ಹೋರಾಡಲು ನಿರಂತರ ಮತ್ತು ವಿಶ್ವಾಸಾರ್ಹ ಪರೀಕ್ಷೆಗೆ ಪರ್ಯಾಯ ಮಾರ್ಗಗಳಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

Last Updated : Apr 2, 2020, 01:58 PM IST
Covid-19 ವಿರುದ್ಧದ ಹೋರಾಟಕ್ಕೆ Lockdown ಅವಶ್ಯಕ, ಆದರೆ ಪ್ಲಾನ್ ಮಾಡಬೇಕಿತ್ತು! title=
File Image

ನವದೆಹಲಿ: ಮಾರಣಾಂತಿಕ ಕರೋನವೈರಸ್ (Coronavirus) ಮತ್ತಷ್ಟು ಹರಡದಂತೆ ನಿಗಾ ವಹಿಸಲು ಲಾಕ್‌ಡೌನ್ (Lockdown) ಅಗತ್ಯವಿದ್ದರೂ, ಮುಂದಾಲೋಚನೆ ಇಲ್ಲದ ಅನುಷ್ಠಾನವು ಲಕ್ಷಾಂತರ ವಲಸೆ ಕಾರ್ಮಿಕರಿಗೆ ಅವ್ಯವಸ್ಥೆ ಮತ್ತು ನೋವನ್ನು ಉಂಟುಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಗುರುವಾರ (ಏಪ್ರಿಲ್ 2, 2020) ಹೇಳಿದೆ. 

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಉದ್ದೇಶಿಸಿ ಮಾತನಾಡುವಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia gandhi) ಆರೋಗ್ಯ ಕಾರ್ಯಕರ್ತರಿಗೆ 'ಹಜ್ಮತ್ ಸೂಟ್ (hazmat suits) ಮತ್ತು ಎನ್ -95 ಮಾಸ್ಕ್' ನಂತಹ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದರು.

"COVID-19 ವಿರುದ್ಧ ಹೋರಾಡಲು, ನಿರಂತರ ಮತ್ತು ವಿಶ್ವಾಸಾರ್ಹ ಪರೀಕ್ಷೆಗೆ ಯಾವುದೇ ಪರ್ಯಾಯಗಳಿಲ್ಲ. ನಮ್ಮ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ಬೆಂಬಲ ಬೇಕು. ವೈಯಕ್ತಿಕ ರಕ್ಷಣಾ ಸಾಧನಗಳಾದ ಹಜ್ಮತ್ ಸೂಟ್, N-95 ಮಾಸ್ಕ್ ಗಳನ್ನು ಅವರಿಗೆ ಒದಗಿಸಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

COVID-19 ಏಕಾಏಕಿ ಉಂಟಾಗುವ ಸವಾಲುಗಳನ್ನು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಗುರುವಾರ ಸಭೆ ಸೇರಿತು ಎಂದು ಮಾಹಿತಿ ನೀಡಿದ ಸೋನಿಯಾ ಗಾಂಧಿ, "ಕರೋನವೈರಸ್ ಲಾಕ್‌ಡೌನ್‌ನಿಂದ ಉಂಟಾಗಿರುವ ಈ ಬಿಕ್ಕಟ್ಟನ್ನು ನಿರ್ವಹಿಸಲು ಸರ್ಕಾರವು ಸಮಗ್ರ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ," ಎಂದು ಹೇಳಿದರು.

ಅಭೂತಪೂರ್ವ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟಿನ ಮಧ್ಯೆ ನಾವು ಇಂದು ಸಭೆ ಸೇರಿದ್ದವು. ನಮ್ಮ ಮುಂದಿರುವ ಸವಾಲಿನ ಪ್ರಮಾಣವು ಬೆದರಿಸುತ್ತಿದೆ ಆದರೆ ಅದನ್ನು ನಿವಾರಿಸುವ ನಮ್ಮ ಸಂಕಲ್ಪವು ಹೆಚ್ಚಿರಬೇಕು ಎಂದು ಅವರು ಕರೆ ನೀಡಿದರು.

ಸಿಡಬ್ಲ್ಯುಸಿ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ಡಾ.ಮನ್ಮೋಹನ್ ಸಿಂಗ್ (Dr Manmohan singh), ಕೋವಿಡ್ -19 ರ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ಪಕ್ಷವು "ರಾಷ್ಟ್ರದೊಂದಿಗೆ ಒಂದಾಗಿದೆ" ಎಂದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಎ.ಕೆ.ಆಂಟನಿ, ವಯನಾಡ್ ಸಂಸದ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟಿಯನ್ ಅಮರಿಂದರ್ ಸಿಂಗ್ ಕೂಡ ಸಿಡಬ್ಲ್ಯುಸಿ ಸಭೆಯಲ್ಲಿಭಾಗವಹಿಸಿದ್ದರು. ಆಹಾರ, ಔಷಧಿ ಮತ್ತು ಕರೋನಾ ತಡೆಗಟ್ಟುವ ಕ್ರಮಗಳು ಸೇರಿದಂತೆ ಪಂಜಾಬ್‌ನಲ್ಲಿ COVID-19 ವಿರುದ್ಧ ಹೋರಾಡಲು ಕೈಗೊಂಡ ಸಿದ್ಧತೆಗಳು ಮತ್ತು ಕ್ರಮಗಳ ಬಗ್ಗೆ ಸಿಂಗ್ ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದರು.

ಸಂಘಟನೆಗಳು ಮತ್ತು ಪಂಜಾಬ್ ಪೊಲೀಸರ ಪ್ರಯತ್ನವನ್ನೂ ಅವರು ಶ್ಲಾಘಿಸಿದರು. ಕೊರೊನಾವೈರಸ್ ಭೀತಿಯ ವಿರುದ್ಧದ ಹೋರಾಟಕ್ಕೆ ಕೇಂದ್ರವು ರಾಜ್ಯದ 5,000 ಕೋಟಿ ರೂ.ಗಳ ಪಾಲನ್ನು ಬಿಡುಗಡೆ ಮಾಡದಿರುವುದು ಅಡ್ಡಿಯಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು. ಜೊತೆಗೆ ಈ ವಿಷಯವನ್ನು ಹಣಕಾಸು ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದರು.

ಏತನ್ಮಧ್ಯೆ, ಆರೋಗ್ಯ ಸಮಸ್ಯೆಗಳಿಂದಾಗಿ ವೈರಸ್ ಸೋಂಕಿಗೆ ಹೆಚ್ಚು ಅಪಾಯದಲ್ಲಿರುವವರಿಗೆ ಎಲ್ಲಾ ರಾಜ್ಯ ಸರ್ಕಾರಗಳು ವಿಶೇಷ ಸಲಹೆಯನ್ನು ನೀಡಬೇಕಾಗಿದೆ ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದರು. "ಕರೋನವೈರಸ್ ವಿಶೇಷವಾಗಿ ವಯಸ್ಸಾದ ವ್ಯಕ್ತಿಗಳು, ಶ್ವಾಸಕೋಶದ ಕಾಯಿಲೆ ಇರುವವರು, ಮಧುಮೇಹಿಗಳು, ಹೃದ್ರೋಗ ಹೊಂದಿರುವ ವ್ಯಕ್ತಿಗಳ ಮೇಲೆ ಆಕ್ರಮಣ ಮಾಡುತ್ತದೆ, ಅವರನ್ನು ಹೆಚ್ಚು ದುರ್ಬಲರನ್ನಾಗಿ ಮಾಡುತ್ತದೆ. ಎಲ್ಲಾ ರಾಜ್ಯ ಸರ್ಕಾರಗಳು ಈ ವರ್ಗಗಳಿಗೆ ವಿಶೇಷ ಸಲಹೆಯನ್ನು ನೀಡಬೇಕು ಮತ್ತು ಕಾಳಜಿ ವಹಿಸಬೇಕು" ಎಂದು ರಾಹುಲ್ ಗಾಂಧಿ (Rahul Gandhi) ಮನವಿ ಮಾಡಿದರು.

Trending News