Vaccination For Children : ಮುಂದಿನ ತಿಂಗಳಿಂದ ಮಕ್ಕಳಿಗೆ ಕೊರೋನಾ ವ್ಯಾಕ್ಸಿನೇಷನ್ : ಕೇಂದ್ರ ಆರೋಗ್ಯ ಸಚಿವ
ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಆರೋಗ್ಯ ಸಚಿವರು ಈ ವಿಷಯ ತಿಳಿಸಿದ್ದಾರೆ.
ನವದೆಹಲಿ : ನಾವು ಮುಂದಿನ ತಿಂಗಳಿನಿಂದ ಮಕ್ಕಳಿಗೆ ಕೋವಿಡ್ -19 ಲಸಿಕೆ ಹಾಕಲು ಪ್ರಾರಂಭ ಮಾಡುತ್ತೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಭಾಗವಹಿಸಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಆರೋಗ್ಯ ಸಚಿವರು ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಕೃತಿಯಿಲ್ಲದೆ ಏನೂ ಇಲ್ಲವೆಂದಿದ್ದವಳೇ ಪ್ರಕೃತಿ ವಿಕೋಪಕ್ಕೆ ಬಲಿಯಾದಳು..!
ಮೊದಲ ಅಥವಾ ಎರಡನೆಯ ಮೂರನೇ ಅಲೆಗೆ ಹೋಲಿಸಿದರೆ ಮಕ್ಕಳ ಮೇಲೆ ಸಂಭವನೀಯ ಕೋವಿಡ್ ಮೂರನೇ ಅಲೆ(corona third wave) ಪ್ರಭಾವವು ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಇದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ ಎಷ್ಟು ಬೇಗ ಆಗುತ್ತೆ ಎಷ್ಟು ಬೇಗ ಮಕ್ಕಳಿಗೆ ಲಸಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Randeep Guleria) ತಿಳಿಸಿದ್ದಾರೆ. ಇದು ಶಾಲೆಗಳನ್ನು ಪುನರಾರಂಭಿಸಲು ಮತ್ತು ಅವರಿಗೆ ಹೊರಾಂಗಣ ಚಟುವಟಿಕೆಗಳನ್ನು ಪುನರಾರಂಭಿಸಲು ದಾರಿ ಮಾಡಿಕೊಡುತ್ತದೆ ಎಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ : Adulterated Milk : ಮಾರುಕಟ್ಟೆಗೆ ಬಂದಿದೆ ನಕಲಿ ಹಾಲು : ಕ್ರಮಕ್ಕೆ ಮುಂದಾದ FDA
ಮಕ್ಕಳಿಗಾಗಿ ಕೋವಿಡ್ ಲಸಿಕೆ ಬಗ್ಗೆ ಮಾತನಾಡಿದ ಅವರು, ಭಾರತ್ ಬಯೋಟೆಕ್(Bharat Biotech's)ನ ಕೋವಿಡ್ -19 ಲಸಿಕೆ ಮಕ್ಕಳ ಮೇಲೆ ಪ್ರಯೋಗಗಳು ನಡೆಯುತ್ತಿವೆ ಮತ್ತು ಸೆಪ್ಟೆಂಬರ್ ವೇಳೆಗೆ ಫಲಿತಾಂಶ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ವಾರ ಅಥವಾ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆಗಳು ಲಭ್ಯವಿರಬೇಕು ಎಂದು ತಿಳಿಸಿದ್ದಾರೆ.
ಲಸಿಕೆಗಳ ಪ್ರಯೋಗಗಳನ್ನು(Trials ) ಮಕ್ಕಳ ವಯಸ್ಸಿನ ಪ್ರಕಾರ ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಪ್ರಯೋಗವನ್ನು 12 ರಿಂದ 18 ವರ್ಷ ವಯಸ್ಸಿನವರ ಮೇಲೆ ಮತ್ತು ನಂತರ 6 ರಿಂದ 12 ವರ್ಷದೊಳಗಿನವರು ಮೇಲೆ ಇದರ ನಂತರ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.