ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೂರ್ ಜಿಲ್ಲೆಯ ಸಾಂಗ್ಲಾ ಕಣಿವೆಯಲ್ಲಿ ಕಳೆದ 2 ದಿನಗಳ ಹಿಂದೆ ಭೀಕರ ಭೂಕುಸಿತ ಸಂಭವಿಸಿತ್ತು. ಈ ವೇಳೆ ಪರ್ವತದ ಮೇಲಿಂದ ದೊಡ್ಡ ದೊಡ್ಡ ಬಂಡೆಗಳು ಕೆಳಕ್ಕೆ ಉರುಳಿಬಿದ್ದು 9 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಇದರ ಭಯಾಯಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ದುರ್ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ 34 ವರ್ಷದ ದೀಪಾ ಶರ್ಮಾ ದುರಂತ ಅಂತ್ಯ ಕಂಡಿದ್ದಾರೆ.
ಹೌದು, ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಇಟ್ಟುಕೊಂಡಿದ್ದ ದೀಪಾ ಶರ್ಮಾ(Deepa Sharma) ಸಣ್ಣ ವಯಸ್ಸಿನಲ್ಲಿಯೇ ಇಹಲೋಕ ತ್ಯೆಜಿಸಿದ್ದಾರೆ. ತಮ್ಮ ಸಾವಿನ ಕೆಲ ನಿಮಿಷಗಳ ಹಿಂದಷ್ಟೇ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕೃತಿ ಕುರಿತು ಹಾಕಿರುವ ಪೋಸ್ಟ್ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.
ಇದನ್ನೂ ಓದಿ: Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ
Standing at the last point of India where civilians are allowed. Beyond this point around 80 kms ahead we have border with Tibet whom china has occupied illegally. pic.twitter.com/lQX6Ma41mG
— Dr.Deepa Sharma (@deepadoc) July 25, 2021
ದೀಪಾ ಶರ್ಮಾ ಅವರು ಹಿಮಾಚಲ ಪ್ರದೇಶ(Himachal Pradesh)ದ ಪ್ರವಾಸ ಕೈಗೊಂಡಿದ್ದರು. ಬೆಟ್ಟ-ಗುಡ್ಡಗಳ ನಡುವೆ ನಿಂತಿರುವ ಫೋಟೋಗಳನ್ನು ಅವರು ಟ್ವೀಟ್ ಮಾಡಿದ್ದರು. ‘ದೇಶದ ನಾಗರಿಕರ ಸಂಚಾರಕ್ಕೆ ಅವಕಾಶವಿರುವ ಭಾರತದ ಕೊನೆಯ ಪ್ರದೇಶದಲ್ಲಿ ನಾನು ನಿಂತಿದ್ದೇನೆ. ಈ ಬೆಟ್ಟದ ಆಚೆಗೆ ಸುಮಾರು 80 ಕಿ.ಮೀ ಮುಂದೆ ಸಾಗಿದರೆ ಚೀನಾ ಆಕ್ರಮಿತ ಟೆಬೆಟ್ ಗಡಿ ತಲುಪುತ್ತೇವೆ’ ಅಂತಾ ಕ್ಯಾಪ್ಶನ್ ನೀಡಿದ್ದರು.
Life is nothing without mother nature. ❤️ pic.twitter.com/5URLVYJ6oJ
— Dr.Deepa Sharma (@deepadoc) July 24, 2021
ಅವರ ಮತ್ತೊಂದು ಪೋಸ್ಟ್ ಪ್ರತಿಯೊಬ್ಬರ ಗಮನ ಸೆಳೆದಿದ್ದು, ನೋಡಿದ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ. ಸುಂದರ, ರಮಣೀಯ ಪ್ರಕೃತಿಯ ಜೊತೆ ತೆಗೆಸಿಕೊಂಡ ಫೋಟೋ ಜೊತೆಗೆ ದೀಪಾ ಶರ್ಮಾ, ‘Life is nothing without mother nature’ (ಪೃಕೃತಿಯಿಲ್ಲದೇ ಜೀವನವಿಲ್ಲ) ಎಂದು ಬರೆದುಕೊಂಡಿದ್ದರು. ಪ್ರಕೃತಿಯನ್ನು ತುಂಬಾ ಪ್ರೀತಿಸುತ್ತಿದ್ದ ದೀಪಾ ಶರ್ಮಾ ಅವರು ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ATM usage to salary ಆಗಸ್ಟ್‌ನಿಂದ ನಿಮ್ಮ ಪಾಕೆಟ್ ಮೇಲೆ ಪರಿಣಾಮ ಬೀರಲಿರುವ ವಿಷಯಗಳಿವು
ಭೂಕುಸಿತ ಸಂಭವಿಸಿದ ದಿನ ಅವರು ಕ್ಯಾಮೆರಾವನ್ನು ಹಿಡಿದು ಪ್ರಕೃತಿಯ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ದೊಡ್ಡ ಕಲ್ಲು ಬಂಡೆಯೊಂದು ಬಂದು ಅಪ್ಪಳಿಸಿದ ಪರಿಣಾಮ ದೀಪಾ ಶರ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕೃತಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಅವರ ಸಾವಿಗೆ ನೆಟಿಜನ್ ಗಳು ಕಂಬನಿ ಮಿಡಿದಿದ್ದಾರೆ.
ಸಾಂಗ್ಲಾ ಕಣಿವೆ(Sangla Valley) ಭೂಕುಸಿತ ದುರ್ಘಟನೆಯಲ್ಲಿ ದೀಪಾ ಶರ್ಮಾ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದರು. ಬಂಡೆ ಬಿದ್ದ ಪರಿಣಾಮ ಬಟ್ಸೆರಿ ಸೇತುವೆ ಮುರಿದು ಬಿದ್ದಿದ್ದು, ಅನೇಕ ವಾಹನಗಳು ಜಖಂಗೊಂಡಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.