ಮುಂಬೈ : ಪಾನೀಯ ಗ್ಲಾಸ್ ಫುಲ್ ಹಾಲಿನ ಜಾಹೀರಾತನ್ನು ನೋಡಿದರೆ ದೇಹವು ಸದೃಢವಾಗಿರಲು ಪ್ರತಿದಿನ 1 ಲೋಟ ಹಾಲನ್ನು ಕುಡಿದು ಫಿಟ್ ಆಗಿರಲು ಕನಸು ಕಾಣುತ್ತಿವೆ. ಆದ್ರೆ, ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಕಲಬೆರಕೆಯ ಹಾಲು ಪತ್ತೆಯಾಗಿದೆ. ಹೌದು, ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ, ದೇಶದ ಹಾಲಿನ ಗುಣಮಟ್ಟ ಪ್ರಶ್ನಾರ್ಹವಾಗಿದೆ.
ಮುಂಬೈನ ಆಹಾರ ಮತ್ತು ಔಷಧ ಆಡಳಿತ (FDA) ತಂಡವು ಕಲಬೆರಕೆ ಹಾಲಿನ ದಂಧೆ ಪತ್ತೆ ಹಚ್ಚಿದೆ. ಈ ಸಮಯದಲ್ಲಿ, ತಂಡವು ಮೂಲ ಪ್ಯಾಕೆಟ್‌ನಲ್ಲಿ ನಕಲಿ ಹಾಲನ್ನು ತುಂಬುವ ಕಲಬೆರಕೆ ಹಾಲನ್ನು ತಯಾರಿಸುವ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ : SC Notice To Centre: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಶುಲ್ಕದ ಮಾನದಂಡಗಳ ಕುರಿತು ಕೇಂದ್ರಕ್ಕೆ ಸುಪ್ರೀಂ ನೋಟೀಸ್
ಈಗ ಮೂಲ ಪ್ಯಾಕೆಟ್‌ನಲ್ಲಿ ನಕಲಿ ಹಾಲು :
ಪ್ರತಿದಿನ ನಿಮ್ಮ ಮನೆಗೆ ಬರುವ ಹಾಲು(Milk) ಶುದ್ಧವಾಗಿದೆ ಮತ್ತು ಅದರಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂಎಂಬುದು ನಿಮಗೆ ಗೊತ್ತೆ? ಎಫ್‌ಡಿಎ ಪತ್ತೆ ಹಚ್ಚಿದ ಪ್ರಕಾರ ಮುಂಬೈನಲ್ಲಿ ಕಲಬೆರಕೆಯ ಹಾಲು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಸಿಗುವ ಹಾಲಿನ ಪ್ಯಾಕೆಟ್ ನಿಜವಾದ್ದೆ ಆದರೆ ಹಾಲು ಕಲಬೆರಕೆಯಾಗಿರುತ್ತದೆ. ಇದಕ್ಕಾಗಿ, ಬ್ರಾಂಡ್ ಕಂಪನಿಯ ಪ್ಯಾಕೆಟ್‌ನಿಂದ ಹಾಲನ್ನು ಮೊದಲು ಹೊರತೆಗೆಯಲಾಗುತ್ತದೆ ಮತ್ತು ನಂತರ ನೈಜ ಹಾಲಿಗೆ ನೀರನ್ನು ಬೆರಸಲಾಗುತ್ತದೆ. ಇದರ ನಂತರ, ಈ ಪ್ಯಾಕೆಟ್‌ಗಳಲ್ಲಿ ನಕಲಿ ಹಾಲು ಅಥವಾ ಕಲಬೆರಕೆ ಹಾಲನ್ನು ತುಂಬಿಸಲಾಗುತ್ತದೆ.
ನಕಲಿ ಹಾಲಿನ ವಿರುದ್ಧ FDA ಕ್ರಮ ತೆಗೆದುಕೊಳ್ಳುತ್ತಿದೆ :
ಎಫ್‌ಡಿಎ ಈಗ ಹಾಲು ಕಲಬೆರಕೆ(Adulterated Milk) ಮಾಡುವ ಗ್ಯಾಂಗ್‌ಗಳನ್ನು ಹಿಡಿಯಲು ಪ್ರಾರಂಭಿಸಿದೆ. ಇತ್ತೀಚೆಗೆ, ದೂರಿನ ಮೇರೆಗೆ, ತಂಡವು ಮಹಾರಾಷ್ಟ್ರದ ಮಲಾದ್‌ನ ಕೊಳೆಗೇರಿ ಪ್ರದೇಶದ ಮೇಲೆ ದಾಳಿ ಮಾಡುವ ಮೂಲಕ ಮನೆಯೊಂದರಿಂದ 88 ಲೀಟರ್ ಕಲಬೆರಕೆ ಹಾಲನ್ನು ಪತ್ತೆ ಹಚ್ಚಿದೆ. ಇದರ ನಂತರ ಗೌಡಿ ಪ್ರದೇಶದಲ್ಲಿ ಎರಡನೇ ದಾಳಿ ಮಾಡಲಾಗಿದೆ.
ಆದರೆ, ಇಲ್ಲಿ ಸಿಕ್ಕಿಬಿದ್ದ ಹಾಲಿನ ಮಾದರಿಯನ್ನು ಪರೀಕ್ಷೆಗೆ(Test) ಕಳುಹಿಸಲಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ, ಎಫ್‌ಡಿಎ 16 ಸ್ಥಳಗಳಲ್ಲಿ ದಾಳಿ ನಡೆಸಿ ಬ್ರಾಂಡ್ ಹಾಲಿನಲ್ಲಿ ನೀರು ಬೆರೆಸುವ ವಿಷಯದ ಬಗ್ಗೆ ತನಿಖೆ ನಡೆಸಿದೆ. ಈ ಎಲ್ಲಾ ಸ್ಥಳಗಳಲ್ಲಿ, ಹಾಲಿನ ಚೀಲವನ್ನು ಕತ್ತರಿಸಿ ಅದರಲ್ಲಿ ನೀರು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಎಫ್‌ಡಿಎ ದಾಳಿ ವೇಳೆ ನೀರು ಬೆರೆಸಿದ 2,318 ಲೀಟರ್ ಹಾಲು ವಶಕ್ಕೆ ಪಡೆದು ಚರಂಡಿಗೆ ಶುರಿಯಲಾಗಿದೆ.
ಇದನ್ನೂ ಓದಿ : Indian Railways: ಆನ್‌ಲೈನ್ ಟಿಕೆಟ್‌ಗಳಿಗಾಗಿ IRCTC ಹೊಸ ನಿಯಮ ನಿಮಗೂ ತಿಳಿದಿರಲಿ
ಪರೀಕ್ಷೆಯ ನಂತರ ಮಾತ್ರ ಹಾಲು ಖರೀದಿಸಿ :
ಕಲಬೆರಕೆ ಹಾಲಿನ ವಿರುದ್ಧ ಎಫ್‌ಡಿಎ(Food and Drug Administration) ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಆದ್ರೂ, ಕೆಲ ಗ್ಯಾಂಗ್ ಗಳು ಕಲಬೆರಕೆ ಹಾಲನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡವುತ್ತಿವೆ ಮತ್ತು ಕಲಬೆರಕೆಯ ಹಾಲು ಮಾರಾಟ ಮಾಡುವ ಗ್ಯಾಂಗ್ ಗಳನ್ನ ಸಂಪೂರ್ಣ ಮಟ್ಟಾ ಹಾಕಲು ಆಗಿಲ್ಲ. ಹೀಗಾಗಿ ಎಫ್‌ಡಿಎ ಈ ದಂದೆ ಕೋರರನ್ನ ಮಟ್ಟಾ ಹಾಕಲು ಜನರ ಸಹಕಾರವೂ ಬಹಳ ಮುಖ್ಯ, ಇದಕ್ಕಾಗಿ ಕಂಪ್ಲೇಂಟ್ ಮತ್ತು ಟೋಲ್ ಫ್ರೀ ಸಂಖ್ಯೆಯನ್ನು ಸಹ ನೀಡಿದೆ. ಆದ್ದರಿಂದ, ನೀವು ಸಹ ನಿಮ್ಮ ಕಡೆಯಿಂದ ಸಹಾಯ ಮಾಡಿ ಮತ್ತು ಪರೀಕ್ಷಿಸಿದ ನಂತರವೇ ಹಾಲು ಖರೀದಿಸಿ ಎಂದು ಹೇಳಲಾಗುತ್ತಿದೆ.
ಕಲಬೆರಕೆಯ ಹಾಲನ್ನು ಹೇಗೆ ಪತ್ತೆ ಹಚ್ಚಬೇಕು?
ಹಾಲನ್ನು ಹೆಚ್ಚಾಗಿ ಪಿಷ್ಟದಿಂದ ಕಲಬೆರಕೆ ಮಾಡಲಾಗುತ್ತದೆ, ಇದರಿಂದ ಹಾಲನ್ನು ಗಟ್ಟಿಯಾಗಿಸುತ್ತದೆ. ಇದನ್ನು ಗುರುತಿಸಲು, 2 ಪಾತ್ರೆಗಳಲ್ಲಿ ಹಾಲನ್ನು ಸ್ವಲ್ಪಮಟ್ಟಿಗೆ ಕುದಿಸಿ. ಕುದ್ದ ನಂತರ ಹಾಲಿಗೆ ಸ್ವಲ್ಪ ಅಯೋಡಿನ್(Audione) ಸೇರಿಸಿ. ಅಯೋಡಿನ್ ಇಲ್ಲದಿದ್ದರೆ ಅಯೋಡಿಕರಿಸಿದ ಉಪ್ಪನ್ನು ಸೇರಿಸಿ. ಬಣ್ಣ ಬದಲಾಗದಿದ್ದರೆ ಹಾಲು ಶುದ್ಧವಾಗಿರುತ್ತದೆ ಮತ್ತು ಹಾಲು ನೀಲಿ ಬಣ್ಣವನ್ನು ಹೊಂದಿದ್ದರೆ ಪಿಷ್ಟವು ಕಂಡುಬರುತ್ತದೆ.
ಹಾಲಿನಲ್ಲಿ ನೀರನ್ನು ಗುರುತಿಸುವುದು ಹೇಗೆ?
ಹಾಲಿನಲ್ಲಿ ನೀರು(Water) ಬೆರೆಸಿದ ಪ್ರಕರಣಗಳೂ ನಡೆದಿವೆ. ನೀರು ಬೆರೆಸಿದ ಹಾಲು ಕಂಡುಹಿಡಿಯಲು, ನಯವಾದ ಪ್ಲೇಟ್ ಅಥವಾ ಹಾಳೆಯ ಮೇಲೆ ಕೆಲವು ಹನಿ ಹಾಲನ್ನು ಬಿಡಿ. ಈ ಹಾಲು ಯಾವುದೇ ಗುರುತು ಬಿಡದೆ ಹಾಲು ವೇಗವಾಗಿ ಹರಿಯುತ್ತಿದ್ದರೆ, ಅದು ಕಲಬೆರಕೆ ಹಾಲು. ಅದು ನಿಧಾನವಾಗಿ ಹರಿಯುತ್ತಿದ್ದರೆ ಮತ್ತು ಬಿಳಿ ಕಲೆಗಳನ್ನು ಬಿಟ್ಟರೆ ಅದು ಶುದ್ಧವಾದ ಹಾಲು ಆಗಿರುತ್ತದೆ.
ಇದನ್ನೂ ಓದಿ : Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ
ಕಲಬೆರಕೆಯ ಹಾಲಿನ ಪರಿಣಾಮಗಳು :
ಕಲಬೆರಕೆ ಹಾಲನ್ನು ಕುಡಿಯುವುದರಿಂದ ಆರೋಗ್ಯ(Health)ಕ್ಕೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಇವುಗಳಲ್ಲಿ ಹೊಟ್ಟೆ ಉಬ್ಬರ, ಹೊಟ್ಟೆ ಕೆಡುವುದು ಮತ್ತು ಡಿಸ್ಪೆಪ್ಸಿಯಾ, ಮಲಬದ್ಧತೆ ಮತ್ತು ಕಾಲರಾ, ಅಲರ್ಜಿ, ಟೈಫಾಯಿಡ್, ಕಾಮಾಲೆ, ಹುಣ್ಣು ಮತ್ತು ಅತಿಸಾರ ಸೇರಿವೆ. ಕಲಬೆರಕೆ ಹಾಲು ಚಿಕ್ಕ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.