ನವದೆಹಲಿ: Covid-19 Variant B.1.617 - ಕೊರೊನಾ ವೈರಸ್ ನ  ಬಿ .1.617 ಸ್ಟ್ರೆನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಉಲ್ಲೇಖಿಸಿ ಮಾಡಲಾಗಿರುವ ಮಾಧ್ಯಮ ವರದಿಗಳನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ. ಈ ರೀತಿಯ ವರದಿಗಳಲ್ಲಿ ಯಾವುದೇ ತಥ್ಯ ಇಲ್ಲ ಎಂದು ಸರ್ಕಾರ ಹೇಳಿದೆ. ಈ ವರದಿಗಳಲ್ಲಿ 'WHO ಕೊರೊನಾ ಇಂಡಿಯನ್ ವೇರಿಯಂಟ್ ವಿಶ್ವಕ್ಕೆ ಅಪಾಯ ಎನ್ನುವ ಮಾತುಗಳನ್ನು ಹೇಳಲಾಗಿದೆ'.


COMMERCIAL BREAK
SCROLL TO CONTINUE READING

ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ WHO "ವಿಶ್ವ ಆರೋಗ್ಯ ಸಂಸ್ಥೆ ವೈರಸ್ ನ ಯಾವುದೇ ವೇರಿಯಂಟ್ ಅನ್ನು ದೇಶಗಳ ಹೆಸರಿನ ಆಧಾರದ ಮೇಲೆ ವರದಿ ಮಾಡುವುದಿಲ್ಲ. ಸಂಘಟನೆ ವೈರಸ್ ನ ರೂಪಾಂತರವನ್ನು ಅವುಗಳ ವೈಜ್ಞಾನಿಕ ಹೆಸರಿನ ಆಧಾರದ ಮೇಲೆ ಸಾಂಧರ್ಭಿಸುತ್ತದೆ ಹಾಗೂ ಇತರ ಎಲ್ಲ ಜನರೂ ಕೂಡ ಹಾಗೆಯೇ ಮಾಡಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸುತ್ತದೆ' ಎಂದಿದೆ.  ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, 'WHO ತನ್ನ 32 ಪುಟಗಳ ವರದಿಯಲ್ಲಿ B.1.617 ವೇರಿಯಂಟ್ ಅನ್ನು ಭಾರತೀಯ ರೂಪಾಂತರಿ (Indian Variant) ಎಂಬ ಶಬ್ದಗಳ ಬಳಕೆ ಎಲ್ಲಿಯೂ ಮಾಡಿಲ್ಲ. ಅಷ್ಟೇ ಅಲ್ಲ ನಿಜ ಹೇಳುವುದಾದರೆ ವರದಿಯಲ್ಲಿ 'Indian' ಎಂಬ ಪದ ಪಳಕೆ ಎಲ್ಲಿಯೂ ಉಪಯೋಗಿಸಲಾಗಿಲ್ಲ' ಎಂಬ ಸ್ಪಷ್ಟೀಕರಣ ನೀಡಿದೆ.


B.1.617 ಸ್ಟ್ರೆನ್ ಗಳಿಗೆ ಇಂಡಿಯನ್ ವೇರಿಯಂಟ್ ಎನ್ನಲಾಗಿತ್ತು
ಈ ಕುರಿತು ಹೇಳಿಕೆ ಬುಧವಾರ ಹೇಳಿಕೆ ನೀಡಿರುವ ಸರ್ಕಾರ ಹಲವು ಮಾಧ್ಯಮ ವರದಿಗಳು WHO ವತಿಯಿಂದ ಕೊರೊನಾ ವೈರಸ್ (Coronavirus)ನ B.1.617 ಸ್ಟ್ರೆನ್ (B.1.617 Strain) ಒಂದು ಜಾಗತಿಕ ಚಿಂತೆ ಎಂಬ ವರದಿಯನ್ನು ಬಿತ್ತರಿಸಿವೆ. ಇವುಗಳಲ್ಲಿ ಕೆಲ ವರದಿಗಳಲ್ಲಿ ಈ ಸ್ಟ್ರೆನ್ ಅನ್ನು 'ಇಂಡಿಯನ್ ವೇರಿಯಂಟ್ (Indian Variant) ಎಂದು ಹೇಳಲಾಗಿದೆ. ಈ ರೀತಿಯ ವರದಿಗಾರಿಕೆ ಯಾವುದೇ ಆಧಾರಗಳಿಲ್ಲದೆ ನಡೆಸಲಾಗಿದೆ ಎಂದು ಸರ್ಕಾರ ಹೇಳಿದೆ.


WHO ಕೊರೊನಾ ವೈರಸ್ ನ B.1.617 ಸ್ಟ್ರೆನ್ ಅನ್ನು 'ಇಂಡಿಯನ್ ವೇರಿಯಂಟ್' ಎಂದು ಹೇಳಿ ಇದು ಜಾಗತಿಕ ಅಪಾಯಕ್ಕೆ ಕಾರಣ ಎಂಬ ವರದಿಗಳ ಹಿನ್ನೆಲೆ ಸರ್ಕಾರ ಈ ಸ್ಪಷ್ಟೀಕರಣ ನೀಡಿದೆ. ವೈರಸ್ ನ ಈ ಸ್ಟ್ರೆನ್ ಕಳೆದ ವರ್ಷ ಭಾರತದಲ್ಲಿ ಪತ್ತೆಯಾಗಿತ್ತು ಹಾಗೂ ಬಳಿಕ ಇದು ವಿಶ್ವದ 44 ದೇಶಗಳಿಗೆ ಹರಡಿದೆ ಎಂದೂ ಕೂಡ ಈ ವರದಿಗಳಲ್ಲಿ ಹೇಳಲಾಗಿದೆ.


ಇದನ್ನೂ ಓದಿ- Corona ಸಂಕಷ್ಟದ ನಡುವೆಯೇ ಜನರ ಪ್ರಾಣ ತೆಗೆಯುತ್ತಿದೆ Black Fungus


ವೈರಸ್ ಕುರಿತು WHO ಜಾರಿಗೊಳಿಸಿತ್ತು ವರದಿ 
ಮಂಗಳವಾರ WHO ಕೊರೊನಾ ವೈರಸ್ ನ B.1.617 ಸ್ಟ್ರೆನ್ ಕುರಿತು ವರದಿ ಬಿಡುಗಡೆ ಮಾಡಿತ್ತು. ವರದಿಯಲ್ಲಿ ಈ ಸ್ಟ್ರೆನ್ ಮೊದಲಿನ ಹೋಲಿಕೆಯಲ್ಲಿ ಭಾರಿ ಸಾಂಕ್ರಾಮಿಕ ಹಾಗೂ ಮಾರಕವಾಗಿದೆ ಎಂದಿತ್ತು. ಈ ಸ್ಟ್ರೆನ್ ಕೊರೊನಾ ವ್ಯಾಕ್ಸಿನ್ ವಿರುದ್ಧ ಕೂಡ ಪ್ರತಿರಕ್ಷಣಾ ಕ್ಷಮತೆಯನ್ನು ಪಡೆದುಕೊಂಡಿದೆ. ಈ ಸ್ಟ್ರೆನ್ ವಿಶ್ವದ ಹಲವು ದೇಶಗಳಲ್ಲಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.


ಇದನ್ನೂ ಓದಿ-Heart Attack In Covid-19: ಕರೋನಾ ರೋಗಿಗಳು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ


ಎರಡನೆಯ ಅಲೆಯ ಹಿಂದೆ ಈ ಸ್ಟ್ರೆನ್ ಕೈವಾಡ 
ವರದಿಗಳ ಪ್ರಕಾರ ಕೊರೊನಾ ವೈರಸ್ ನ ಈ ಸ್ಟ್ರೆನ್ ಅಕ್ಟೋಬರ್ 2020ರಲ್ಲಿ ಭಾರತದಲ್ಲಿ ವರದಿಯಾಗಿತ್ತು. ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ಹಾಗೂ ಹೆಚ್ಚಾಗುತ್ತಿರುವ ಸಾವುಗಳ ಸಂಖ್ಯೆ ಹಾಗೂ ಮತ್ತೊಂದು ವೇರಿಯಂಟ್ B.1.1.7ನ ಪಾತ್ರವನ್ನು ಪ್ರಶ್ನಿಸಿದೆ.


ಇದನ್ನೂ ಓದಿ- Right Way To Drink Water - ನೀವೂ ಕೂಡ ಬಾಟಲಿ ಮೂಲಕ ನೀರನ್ನು ಕುಡಿಯುತ್ತೀರಾ? ಹಾಗಾದ್ರೆ ಈ ಲೇಖನ ಓದಲು ಮರೆಯಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.