Covid 19 XE Variant symptoms: ಕೊರೊನಾ ವೈರಸ್‌ನ ಹೊಸ ರೂಪಾಂತರ ಎಕ್ಸ್ಇ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಅದೇ ಸಮಯದಲ್ಲಿ, ಈ ರೂಪಾಂತರದ ರೋಗಿಗಳು ನಮ್ಮ ದೇಶದ ಗುಜರಾತ್ ಮತ್ತು ಮುಂಬೈನಲ್ಲಿಯೂ ಕಂಡುಬಂದಿದ್ದಾರೆ. ಮುಂಬೈನಲ್ಲಿ ಮತ್ತೆ ಎಕ್ಸ್ಇ  ವೇರಿಯಂಟ್ ಸೋಂಕಿತ ವ್ಯಕ್ತಿ ಪತ್ತೆಯಾಗಿರುವುದಾಗಿ ಬಿಎಂಸಿ ಹೇಳಿಕೊಂಡಿದೆ. ಗುಜರಾತ್‌ನಲ್ಲಿಯೂ ಸಹ ಓರ್ವ ವ್ಯಕ್ತಿಯಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಕೋವಿಡ್ 19 ರ ಎಕ್ಸ್ಇ ರೂಪಾಂತರದ ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿವೆ. ಏಕೆಂದರೆ ಇಲ್ಲಿಯವರೆಗೆ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಈ ರೂಪಾಂತರವು ಬಹಳ ವೇಗವಾಗಿ ಹರಡುತ್ತದೆ. ಅದಕ್ಕಾಗಿಯೇ ಜನರು ಇದನ್ನು ದೇಶದಲ್ಲಿ ಕರೋನಾ ನಾಲ್ಕನೇ ತರಂಗದ ನಾಕ್ ಎಂದು ಪರಿಗಣಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ರೂಪಾಂತರ ಹೇಗಿದೆ?
ಕೊರೊನಾ ವೈರಸ್‌ನ ಹೊಸ ರೂಪಾಂತರ ಎಕ್ಸ್ಇ ಎಂಬುದು ಓಮಿಕ್ರಾನ್‌ನ 2 ಉಪವಿಭಾಗಗಳ BA.1 ಮತ್ತು BA.2 ರ ಮರುಸಂಯೋಜಕ ತಳಿಯಾಗಿದೆ. ಅದರ ವರದಿಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಈ ರೂಪಾಂತರವನ್ನು ಕರೋನಾದ BA.2 ರೂಪಾಂತರಕ್ಕಿಂತ 10 ಪ್ರತಿಶತ ಹೆಚ್ಚು ಸಾಂಕ್ರಾಮಿಕ ಎಂದು ವಿವರಿಸಿದೆ. ಆದರೆ ಎಕ್ಸ್‌ಇ ರೂಪಾಂತರವು ಸ್ವಲ್ಪ ಹಗುರವಾಗಿ ಕಾಣುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಈ ವೈರಸ್ ಅನ್ನು ತಪ್ಪಿಸಲು, ಅದರ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


ಇದನ್ನೂ ಓದಿ- ಕೊರೊನಾ 4ನೇ ಅಲೆ ಸಂಭವ!; ಆರೋಗ್ಯ ಇಲಾಖೆಯಿಂದ ತುರ್ತು ಸಭೆ


ಕೊರೊನಾ ವೈರಸ್‌ನ ಹೊಸ ರೂಪಾಂತರ ಎಕ್ಸ್ಇ ಯ ಲಕ್ಷಣಗಳು ಯಾವುವು?
ವೈದ್ಯರ ಪ್ರಕಾರ, ಎಕ್ಸ್ಇ ರೂಪಾಂತರವು ಓಮಿಕ್ರಾನ್‌ ರೂಪಾಂತರದ ಎಲ್ಲಾ ರೋಗಲಕ್ಷಣಗಳನ್ನು ಹೋಲುತ್ತವೆ. ಇದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ ಮತ್ತು ತುಂಬಾ ತೀವ್ರವಾಗಿರುವುದಿಲ್ಲ. ಎಕ್ಸ್ಇ  ರೂಪಾಂತರವು ಸುಮಾರು 3 ತಿಂಗಳುಗಳ ಹಿಂದೆ ಪತ್ತೆಯಾಗಿದೆ. ಆದಾಗ್ಯೂ, ಇದು   ಓಮಿಕ್ರಾನ್‌ ರೂಪಾಂತರದಂತೆ ಪ್ರಪಂಚದಾದ್ಯಂತ ಇನ್ನೂ ಹರಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಕೆಲವು ತಜ್ಞರ ಪ್ರಕಾರ, 'ಎಕ್ಸ್‌ಇ ರೂಪಾಂತರದ ರೋಗಲಕ್ಷಣಗಳು ಓಮಿಕ್ರಾನ್ ರೂಪಾಂತರಕ್ಕಿಂತ ಭಿನ್ನವಾಗಿವೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.' 


ಇದನ್ನೂ ಓದಿ- Mumbaiನ ಸಾಂತಾಕ್ರೂಸ್ ನಲ್ಲಿ Corona XE ವೇರಿಯಂಟ್ ನ ಎರಡನೇ ಪ್ರಕರಣ ಪತ್ತೆ


ಆದಾಗ್ಯೂ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು- 
ಆಯಾಸ, ಆಲಸ್ಯ, ಜ್ವರ, ತಲೆನೋವು, ಮೈ ಕೈ ನೋವು, ಇದ್ದಕ್ಕಿದ್ದಂತೆ ಹೃದಯದ ಬಡಿತ ಹೆಚ್ಚಾಗುವುದು ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷಿಸದಿರುವುದು ಒಳಿತು ಎಂದು ವೈದ್ಯರು ಸಲಹೆ ನೀಡುತ್ತಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.