ನವದೆಹಲಿ: ಕೊರೋನಾ ವೈರಸ್​ ಹರಡುವುದನ್ನು ತಡೆಯಲೆಂದು ತರಲಾದ ಲಾಕ್​ಡೌನ್ (Lockdown)​ ಅನ್ನು ಮೇ 3ರ ಬಳಿಕ ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ಕೂಲಂಕಶವಾಗಿ ಚರ್ಚಿಸಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಜಾಗತಿಕ ಪಿಡುಗಾಗಿರುವ‌ ಕರೋನಾವೈರಸ್ (Coronavirus)  ಭಾರತದಲ್ಲಿ ಕಂಡುಬಂದ ಬಳಿಕ ಸೋಂಕು ಹರಡುವಿಕೆ ತಡೆಗಟ್ಟುವ ಬಗ್ಗೆ, ಅದಕ್ಕೆಂದೇ ಲಾಕ್​ಡೌನ್ ಜಾರಿಗೊಳಿಸುವ ಬಗ್ಗೆ ಮತ್ತು  ಲಾಕ್​ಡೌನ್ ಅನ್ನು ವಿಸ್ತರಿಸುವ ಬಗ್ಗೆ  ಪ್ರಧಾನಿ ಮೋದಿ ಈಗಾಗಲೇ ಮೂರು ಬಾರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಇಂದು ಬೆಳಗ್ಗೆ 10ಗಂಟೆಗೆ ನಾಲ್ಕನೇ ವಿಡೀಯೋ ಕಾನ್ಫರೆನ್ಸ್ ನಡೆಯಲಿದೆ.


ಸಭೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಕೊರೋನಾ ಕೋವಿಡ್-19 (Covid-19) ಸೋಂಕು ಹರಡುವಿಕೆ ಪ್ರಮಾಣ ಹೇಗೇಗಿದೆ? ಕೊರೋನಾ ತಡೆಗಟ್ಟಲು ಏನೇನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? ಈ ಹಂತದಲ್ಲಿ ಲಾಕ್​ಡೌನ್ ಅನ್ನು ಮುಂದುವರೆಸಬೇಕೋ ಅಥವಾ ತೆರವುಗೊಳಿಸಬೇಕೋ? ಈಗಾಗಲೇ ಗುರುತಿಸಲ್ಪಟ್ಟಿರುವ ಹಸಿರು, ಹಳದಿ ಮತ್ತು ಕೆಂಪು ವಲಯಗಳಲ್ಲಿ ಅಲ್ಲಿನ ಪರಿಸ್ಥಿತಿಗಳಿಗನುಗುಣವಾಗಿ ವಿನಾಯಿತಿ ನೀಡಬೇಕೋ? ಬೇಡವೋ? ಅಂತರರಾಜ್ಯ ಸಾಗಾಣೆಗೆ ಅವಕಾಶ ನೀಡಬೇಕೋ? ಬೇಡವೋ ಎಂಬ ಹತ್ತು ಹಲವು ವಿಷಯಗಳು ಚರ್ಚೆ ಆಗಲಿವೆ. ಕಳೆದ ಬಾರಿಯಂತೆ ಈ ಸಲವೂ ಸುದೀರ್ಘ ಚರ್ಚೆಯಾಗುವ ಸಂಭವವಿದೆ.


ದೇಶಾದ್ಯಂತ ಷರತ್ತಿನೊಂದಿಗೆ Liquor shops ಕೂಡ ತೆರೆಯಲಿದೆಯೇ? ಅದರ ಸತ್ಯಾಸತ್ಯತೆ ಇಲ್ಲಿದೆ


ಕೇಂದ್ರದ ಹಣಕಾಸು ಇಲಾಖೆಯ ಕಾರ್ಯಪಡೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು, ‌ಆರ್ಥಿಕ ಕ್ಷೇತ್ರದ ತಜ್ಞರು, ಉದ್ಯಮ ಕ್ಷೇತ್ರದವರು ದೇಶದ ಆರ್ಥಿಕತೆಯ ದೃಷ್ಟಿಯಿಂದ ಲಾಕ್​ಡೌನ್ ಅನ್ನು ಮುಕ್ತಾಯಗೊಳಿಸಬೇಕು. ಮೇ 3ಕ್ಕೆ 40 ದಿನ ಆಗಲಿದ್ದು ಇದಕ್ಕಿಂತ ಹೆಚ್ಚು ದಿನ ದೇಶವನ್ನು ಸ್ಥಗಿತಗೊಳಿಸುವುದು ಸೂಕ್ತವಾದ ಕ್ರಮವಲ್ಲ ಎಂದು ಸಲಹೆ ನೀಡಿದ್ದಾರೆ.


ಆದರೆ ಲಾಕ್​ಡೌನ್ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಆದುದರಿಂದ ಲಾಕ್​ಡೌನ್ ಅನ್ನು ವಿಸ್ತರಿಸುವುದೇ ಸೂಕ್ತ ಎಂದು ದೆಹಲಿ, ಪಂಜಾಬ್​, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ರಾಜ್ಯಗಳು ಅಭಿಪ್ರಾಯ ಮಂಡಿಸುವ ಸಾಧ್ಯತೆ ಇದೆ.


PF ಮುಂಗಡ ಹಣ ವಿತ್ ಡ್ರಾ ಮಾಡುವ ಮುನ್ನ ಅದರ ಲಾಭ-ನಷ್ಟದ ಬಗ್ಗೆ ತಿಳಿಯಿರಿ


ಹೀಗೆ ಎರಡೂ ರೀತಿಯ ಸಲಹೆ-ಶಿಫಾರಸ್ಸುಗಳು ಬರುತ್ತಿದ್ದು ಅಂತಿಮವಾಗಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಿಂದೆ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದಲ್ಲಿ ಮತ್ತು ಆನಂತರ ಏಪ್ರಿಲ್ 14ರಿಂದ ಮೇ 3ರವರೆಗೆ ಎರಡನೇ ಹಂತದಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಮಧ್ಯೆ ಏಪ್ರಿಲ್ 20ರಿಂದ ಹಸಿರು ವಲಯಗಳಲ್ಲಿ ಲಾಕ್​ಡೌನಿನ ಕೆಲ ನಿಯಮಗಳನ್ನು ಸಡಿಲಿಸಲಾಗಿತ್ತು‌‌. ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಜೊತೆಗೆ ಕೈಗಾರಿಕೆಗಳಿಗೂ ವಿನಾಯಿತಿ ನೀಡಲಾಗಿತ್ತು.