Crime News: ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆಗೈದು ನೇಣಿಗೆ ಶರಣಾದ ಮಹಿಳೆ, ಪತಿ ಹೇಳಿದ್ದೇನು?
Suicide Case - ಅಸ್ಸಾಂನ (Assam) ಹೈಲಕಂಡಿ (Hailakandi) ಜಿಲ್ಲೆಯಲ್ಲಿ 25 ವರ್ಷದ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ಲಾಲಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಾಪುರ ಪ್ರದೇಶದ ನಿವಾಸಿ ಮಲಯ್ ದಾಸ್ ಅವರ ಮನೆಯಿಂದ ಪೊಲೀಸರು ಒಟ್ಟು ಮೂರು ಶವಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Suicide Case - ಅಸ್ಸಾಂನ (Assam) ಹೈಲಕಂಡಿ (Hailakandi) ಜಿಲ್ಲೆಯಲ್ಲಿ 25 ವರ್ಷದ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ಲಾಲಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಾಪುರ ಪ್ರದೇಶದ ನಿವಾಸಿ ಮಲಯ್ ದಾಸ್ ಅವರ ಮನೆಯಿಂದ ಪೊಲೀಸರು ಒಟ್ಟು ಮೂರು ಶವಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ, ರಿಂಪಿ ದಾಸ್ (Rimpi Das) ಎಂದು ಗುರುತಿಸಲಾದ 25 ವರ್ಷದ ಮಹಿಳೆ ಗೃಹಿಣಿಯಾಗಿದ್ದು. ಅವರು ಕೆಲವು ವರ್ಷಗಳ ಹಿಂದೆ ಮಲಯ ದಾಸ್ (Malaydas) ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗುವಿಗೆ ನಾಲ್ಕು ವರ್ಷ ಮತ್ತು ಕಿರಿಯ ಮಗುವಿಗೆ ಎರಡು ವರ್ಷವಯಸ್ಸಾಗಿತ್ತು.
ನೇಣು ಬಿಗಿದ ಶವಗಳನ್ನು (Crime News) ಹೊರತೆಗೆದ ನಂತರ, ಪೋಲಿಸ್ ಅಧಿಕಾರಿಗಳು ಅವುಗಳನ್ನು ಹೈಲಕಂಡಿ ಸಿವಿಲ್ ಆಸ್ಪತ್ರೆಗೆ, ನಂತರ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕುಟುಂಬ ಸದಸ್ಯರ ಪ್ರಕಾರ, ರಿಂಪಿ ದಾಸ್ ಮತ್ತು ಅವರ ಪತಿ ನಡುವೆ ಕೆಲವು ಮನಸ್ತಾಪಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಲಯ್ ದಾಸ್ ಅವರು ವೃತ್ತಿಯಲ್ಲಿ ಬಡಿಗನಾಗಿದ್ದಾನೆ ಮತ್ತು ಸ್ಥಳೀಯ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಾನೆ. ಬುಧವಾರ ಬೆಳಗ್ಗೆ ಪತ್ನಿಯೊಂದಿಗೆ ತೀವ್ರ ಜಗಳವಾಗಿತ್ತು ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ-ವಿದ್ಯಾಸಿರಿ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ತಾಯಿ ತನ್ನ ಮಗುವನ್ನು ಹೇಗೆ ಹತ್ಯೆಗೈಯಲು ಸಾಧ್ಯ? ಪ್ರಶ್ನಿಸಿದ ಪತಿ
ಘಟನೆಯ ಕುರಿತು ಕಣ್ಣೀರು ಸುರಿಸುತ್ತ ಮಾತನಾಡಿರುವ ಮಲಯ್, "ಮಕ್ಕಳನ್ನು ನೋದುಕೊಳ್ಳುವ ವಿಧಾನಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳವಾಗಿದೆ. ಆದರೆ, ಇದು ಬಹುತೇಕ ಎಲ್ಲ ಮನೆಯಲ್ಲೂ ಸಾಮಾನ್ಯವಾಗಿರುತ್ತದೆ. ಈ ವಿಷಯವನ್ನು ದೊಡ್ಡದಾಗಿಸಿ ಅವಳು ಎರಡು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಈ ಭೂಮಿಯಲ್ಲಿ ಓರ್ವ ತಾಯಿ ತನ್ನ ಮಕ್ಕಳನ್ನು ಹೇಗೆ ಹತ್ಯೆಗೈಯಲು ಸಾಧ್ಯ' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ-Operation Ganga Team : 'ಆಪರೇಷನ್ ಗಂಗಾ' ತಂಡದಲ್ಲಿ 24 ಸಚಿವರು, 80 ವಿಮಾನಗಳು! ಹೇಗಿದೆ ಟೀಂ ವರ್ಕ್?
ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಜಗಳ ನಡೆದಿತ್ತು
ರಿಂಪಿ ತಿಳಿಯದೆ ತನ್ನ 2 ವರ್ಷದ ಮಗಳನ್ನು ನೆಲದ ಮೇಲೆ ಬೀಳುವಂಥ ಜಾಗದಲ್ಲಿ ಹಾಕಿದ್ದರಿಂದ ಸಮಸ್ಯೆ ಶುರುವಾಗಿದೆ ಎಂದು ಮಲಯ ದಾಸ್ ಕುಟುಂಬಸ್ಥರು ಹೇಳುತ್ತಾರೆ. ಇದನ್ನು ನೋಡಿದ ಮಲಯ್ ರಿಂಪಿಯನ್ನು ಬೇಜವಾಬ್ದಾರಿ ಎಂದು ನಿಂದಿಸುತ್ತಾನೆ ಮತ್ತು ಅವರು ಜಗಳವಾಡುತ್ತಾರೆ. ಈ ಕುರಿತು ಮಾಹಿತಿ ನೀಡಿದ ಕುಟುಂಬ ಸದಸ್ಯರೊಬ್ಬರು, “ವಿವಾದವು ತುಂಬಾ ತಾರಕಕ್ಕೇರಿದ ಕಾರಣ, ನೆರೆಹೊರೆಯವರು ಮಧ್ಯಪ್ರವೇಶಿಸಬೇಕಾಯಿತು. ಮಲ್ಯ ಕೆಲಸಕ್ಕಾಗಿ ಮನೆಯಿಂದ ಹೊರಟುಹೋದನು ಮತ್ತು ರಿಂಪಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಹೊರಟು ಹೋಗುವುದಾಗಿ ಬೆದರಿಕೆ ಹಾಕಿದಳು. ಆದರೆ ನಂತರ ಅವಳು ಸ್ವತಃ ಮನೆಯಲ್ಲಿ ಬಂಧಿಯಾಗಿದ್ದಳು ಮತ್ತು ಇದೀಗ ಶವವಾಗಿ ಹೊರ ಬಂದಿರುವುದು ದುಃಖಕರ ವಿಷಯ" ಎಂದು ಹೇಳಿದ್ದಾರೆ.
ಇದನ್ನೂ ಓದಿ-ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.