ಬೆಂಗಳೂರು: ಕಳ್ಳರು ಚಾಪೆ ಕೆಳಗೆ ತೂರಿದ್ರೆ, ಖಾಕಿ ಪಡೆ ರಂಗೋಲಿ ಕೆಳಗೆ ನುಸುಳಿ ಖದೀಮರ ಹೆಡೆಮುರಿ ಕಟ್ಟುತ್ತದೆ. ಹೀಗೆ ಸಿಲಿಕಾನ್ ಸಿಟಿಯಲ್ಲಿ ಓವರ್ ಸ್ಮಾರ್ಟ್ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಪೊಲೀಸರು(Bengaluru Police) ಮತ್ತೊಮ್ಮೆ ಕಳ್ಳ-ಪೊಲೀಸ್ ಆಟದಲ್ಲಿ ಗೆದ್ದಿದ್ದಾರೆ.
ಅಂದಹಾಗೆ ಸುಬ್ರಮಣ್ಯಪುರ ಠಾಣಾ(Subramanyapura Police Station) ವ್ಯಾಪ್ತಿಯಲ್ಲಿ ಈ ಕಳ್ಳ-ಪೊಲೀಸ್ ಆಟ ನಡೆದಿದೆ. ಫೆಬ್ರವರಿ 8ರ ಮಧ್ಯರಾತ್ರಿ ಆರೋಪಿ ಕಾರ್ತಿಕ್ ಅಲಿಯಾಸ್ ಕಾಟು ಎಂಬಾತ ನಂದಿನಿ ಪಾರ್ಲರ್(Nandini Milk Parlour) ದೋಚಿದ್ದ. ಈತನಿಗೆ ಮತ್ತೊಬ್ಬ ಚೋರನೂ ಸಾಥ್ ನೀಡಿದ್ದ. ನಂದಿನಿ ಪಾರ್ಲರ್ ಶೆಟರ್ ಬೀಗ ಹೊಡೆದು ಕಳ್ಳಬೆಕ್ಕಿನಂತೆ ಒಳನುಗ್ಗಿ ಇಬ್ಬರೂ ಸೇರಿ ಹಣ ದೋಚಿ ಎಸ್ಕೇಪ್ ಆಗಿದ್ದರು. ಈ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಇದನ್ನೂ ಓದಿ: ಕಾಂಗ್ರೆಸನ್ನು ಶಾಶ್ವತ ನಿದ್ರೆಗೆ ಕಳುಹಿಸಲು ಜನರು ಸಜ್ಜಾಗಿದ್ದಾರೆ: ನಳೀನ್ ಕುಮಾರ್ ಕಟೀಲ್
ಪಕ್ಕದ ಮನೆಯಲ್ಲೇ ಮಾಲೀಕ..!
ನಂದಿನ ಪಾರ್ಲರ್(Nandini Milk Parlour)ನ ಡ್ರಾದಲ್ಲಿದ್ದ ಸುಮಾರು 40 ಸಾವಿರ ರೂ. ಹಣ ದೋಚಿ ಕಳ್ಳರ ಗ್ಯಾಂಗ್ ಹೊರಬಂದಿತ್ತು. ಮಧ್ಯರಾತ್ರಿ ಶಬ್ದ ಕೇಳಿ ಪಕ್ಕದ ಮನೆಯಲ್ಲೇ ವಾಸವಿದ್ದ ಮಾಲೀಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಬರುವುದರೊಳಗೆ ಕಳ್ಳರ ಗ್ಯಾಂಗ್ ಸ್ಥಳದಿಂದಲೇ ಎಸ್ಕೇಪ್ ಆಗಿತ್ತು.
ಆದರೆ ಕಳ್ಳರ ಬೈಕ್ ಹಿಂದೆಯೇ ಫಿಲ್ಮ್ ಸ್ಟೈಲ್ನಲ್ಲಿ ಪೊಲೀಸರು ಚೇಸ್ ಮಾಡಿದ್ದರು. ಪರಾರಿಯಾಗಿದ್ದ ಖತರ್ನಾಕ್ ಆರೋಪಿ ಕಾರ್ತಿಕ್ ಅಲಿಯಾಸ್ ಕಾಟುನ ಖೆಡ್ಡಾಗೆ ಕೆಡವಿದ್ದಾರೆ. ಸಿಸಿಟಿವಿ ದೃಶ್ಯ(CCTV Footage) ಪರಿಶೀಲಿಸಿ ಕೇವಲ ಎರಡೇ ಗಂಟೆಯಲ್ಲಿ ಆರೋಪಿಯನ್ನು ಬೆಂಗಳೂರು ಪೊಲೀಸರು ಅಂದರ್ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ: ಬಿಜೆಪಿ
ಆರೋಪಿ ಕಾರ್ತಿಕ್ ಅಲಿಯಾಸ್ ಕಾಟು ಅಣ್ಣಾ ಕೂಡ ರೌಡಿಶೀಟರ್(Rowdy Sheeter) ಆಗಿದ್ದು, ಈತನಿಗೆ ಇನ್ನೂ 24 ವರ್ಷ. ಈ ವಯಸ್ಸಿಗೆ ಕಾಟು ಖತರ್ನಾಕ್ ಆಟಗಳನ್ನು ಆಡುತ್ತಿದ್ದು, ಆರೋಪಿ ಕಾರ್ತಿಕ್ ಅಲಿಯಾಸ್ ಕಾಟು ಬಂಧನದ ಬಳಿಕ ಬರೋಬ್ಬರಿ 9 ಪ್ರಕರಣಗಳು ಬೆಳಕಿಗೆ ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.