Operation Ganga Team : 'ಆಪರೇಷನ್ ಗಂಗಾ' ತಂಡದಲ್ಲಿ 24 ಸಚಿವರು, 80 ವಿಮಾನಗಳು! ಹೇಗಿದೆ ಟೀಂ ವರ್ಕ್?

ಈ ಮಿಷನ್‌ನ ಮೇಲ್ವಿಚಾರಣೆಗೆ ಸರ್ಕಾರವು ಎರಡು ಡಜನ್‌ಗಿಂತಲೂ ಹೆಚ್ಚು ಸಚಿವರನ್ನು ಸಹ ನಿಯೋಜಿಸಿದೆ ಎಂದು ಮೂಲಗಳು ಗುರುವಾರ ಎಎನ್‌ಐಗೆ ತಿಳಿಸಿವೆ.

Written by - Channabasava A Kashinakunti | Last Updated : Mar 3, 2022, 08:25 PM IST
  • ಇನ್ನೂ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಅನೇಕ ಭಾರತೀಯರು
  • ಭಾರತ ಸರ್ಕಾರ ನಡೆಸುತ್ತಿದೆ 'ಆಪರೇಷನ್ ಗಂಗಾ'
  • ಈ ಕಾರ್ಯಾಚರಣೆಯಲ್ಲಿ ಹಲವು ಕೇಂದ್ರ ಸಚಿವರು ಭಾಗಿ
Operation Ganga Team : 'ಆಪರೇಷನ್ ಗಂಗಾ' ತಂಡದಲ್ಲಿ 24 ಸಚಿವರು, 80 ವಿಮಾನಗಳು! ಹೇಗಿದೆ ಟೀಂ ವರ್ಕ್? title=

ನವದೆಹಲಿ : ರಷ್ಯಾದ ದಾಳಿಯಿಂದ ಇನ್ನೂ ಅನೇಕ ಭಾರತೀಯ ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ನರೇಂದ್ರ ಮೋದಿ ಸರ್ಕಾರವು 'ಆಪರೇಷನ್ ಗಂಗಾ'(Operation Ganga) ಅಡಿಯಲ್ಲಿ 80 ವಿಮಾನಗಳನ್ನು ನಿಯೋಜಿಸಿದೆ. ಈ ಮಿಷನ್‌ನ ಮೇಲ್ವಿಚಾರಣೆಗೆ ಸರ್ಕಾರವು ಎರಡು ಡಜನ್‌ಗಿಂತಲೂ ಹೆಚ್ಚು ಸಚಿವರನ್ನು ಸಹ ನಿಯೋಜಿಸಿದೆ ಎಂದು ಮೂಲಗಳು ಗುರುವಾರ ಎಎನ್‌ಐಗೆ ತಿಳಿಸಿವೆ.

ಈ ರೀತಿ ಕೆಲಸ ಮಾಡುತ್ತೆ ತಂಡ 'ಆಪರೇಷನ್ ಗಂಗಾ'

ಉಕ್ರೇನ್‌(Ukraine)ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಚುರುಕುಗೊಳಿಸಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ. ಹೆಚ್ಚು ಹೆಚ್ಚು ಭಾರತೀಯರನ್ನು ಕರೆತರಲು ಎಲ್ಲಾ ವಿಮಾನಗಳು ಓಡಾಡುತ್ತಿವೆ. ಮಾರ್ಚ್ 10 ರ ವೇಳೆಗೆ, ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಒಟ್ಟು 80 ವಿಮಾನಗಳನ್ನು ನಿಯೋಜಿಸಲು ಯೋಜಿಸಲಾಗಿದೆ. ಈ ವಿಮಾನಗಳು ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್, ವಿಸ್ತಾರಾ, ಗೋ ಏರ್ ಮತ್ತು ಏರ್ ಫೋರ್ಸ್‌ಗೆ ಸೇರಿವೆ. ಮೂಲಗಳ ಪ್ರಕಾರ, ಏರ್ ಇಂಡಿಯಾದ 14, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 8, ಇಂಡಿಗೋದ 7, ಸ್ಪೈಸ್‌ಜೆಟ್‌ನ 1, ವಿಸ್ತಾರಾದ 3 ಮತ್ತು ಭಾರತೀಯ ವಾಯುಪಡೆಯ 2 ವಿಮಾನಗಳು ಸೇರಿದಂತೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 35 ಸ್ಥಳಾಂತರಿಸುವಿಕೆಯನ್ನು ಯೋಜಿಸಲಾಗಿದೆ.

ಇದನ್ನೂ ಓದಿ : ವಾರಣಾಸಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಬುಡಾಪೆಸ್ಟ್‌ನಿಂದ 28 ವಿಮಾನಗಳು ಹೊರಡಲಿವೆ

ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಒಟ್ಟು 28 ವಿಮಾನಗಳು(Airplane) ಟೇಕ್ ಆಫ್ ಆಗಲಿವೆ. ಈ 28 ರಲ್ಲಿ 15 ವಿಮಾನಗಳು ಗೋ ಏರ್‌ನಿಂದ, 9 ಇಂಡಿಗೋದಿಂದ, 2 ಏರ್ ಇಂಡಿಯಾದಿಂದ, 1 ಭಾರತೀಯ ವಾಯುಪಡೆಯಿಂದ ಮತ್ತು 1 ಸ್ಪೈಸ್‌ಜೆಟ್‌ನಿಂದ. ಪೋಲೆಂಡ್‌ನ ರ್ಜೆಜೊದಿಂದ ಒಟ್ಟು ಒಂಬತ್ತು ವಿಮಾನಗಳನ್ನು ನಿಗದಿಪಡಿಸಲಾಗಿದೆ, ಇದರಲ್ಲಿ ಇಂಡಿಗೋದಿಂದ 8 ವಿಮಾನಗಳು ಮತ್ತು ಭಾರತೀಯ ವಾಯುಪಡೆಯಿಂದ 1 ವಿಮಾನಗಳು ಸೇರಿವೆ, ಆದರೆ 5 ವಿಮಾನಗಳು ರೊಮೇನಿಯಾದ ಸುಸೇವಾದಿಂದ ಮತ್ತು 3 ವಿಮಾನಗಳು ಸ್ಲೋವಾಕಿಯಾದ ಕೊಸಿಸಿಸ್‌ನಿಂದ ಟೇಕ್ ಆಫ್ ಆಗಲಿವೆ. ಬುಡಾಪೆಸ್ಟ್, ಬುಕಾರೆಸ್ಟ್ ಮತ್ತು ರ್ಜೆಜೊ, ಸುಸೇವಾ ಮತ್ತು ಕೊಸಿಸ್‌ನಿಂದ ಟೇಕ್ ಆಫ್ ಆಗಲಿರುವ ಈ 80 ವಿಮಾನಗಳಲ್ಲಿ ಸುಮಾರು 17,000 ಮಂದಿ ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ 24 ವಿಮಾನಗಳು ಭಾರತಕ್ಕೆ ಬಂದಿವೆ

‘ಆಪರೇಷನ್ ಗಂಗಾ’(Operation Ganga) ಅಡಿಯಲ್ಲಿ ಮಾರ್ಚ್ 2 ರವರೆಗೆ ಒಟ್ಟು 24 ವಿಮಾನಗಳು ಭಾರತಕ್ಕೆ ಬಂದಿವೆ. ಉಕ್ರೇನ್‌ನಿಂದ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರ ಫೆಬ್ರವರಿ 26 ರಂದು 'ಆಪರೇಷನ್ ಗಂಗಾ' ಆರಂಭಿಸಿತು. ಫೆಬ್ರವರಿ 26 ರಂದು ಭಾರತೀಯರನ್ನು ಹೊತ್ತ ಮೊದಲ ವಿಮಾನವು ಮುಂಬೈಗೆ ಬಂದಿಳಿದಿತ್ತು, ಅದನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸ್ವೀಕರಿಸಿದರು. ಪ್ರಧಾನಿಯವರು ನಾಲ್ವರು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರನ್ನು ಭಾರತೀಯರ ಸ್ಥಳಾಂತರದ ಮೇಲ್ವಿಚಾರಣೆಗಾಗಿ ಹಂಗೇರಿ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ಗೆ ಕಳುಹಿಸಿದ್ದಾರೆ. ಹಂಗೇರಿ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ಬರುವ ಭಾರತೀಯರನ್ನು ಆಪರೇಷನ್ ಗಂಗಾ ಅಡಿಯಲ್ಲಿ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸರಾಗವಾಗಿ ಸ್ಥಳಾಂತರಿಸುವ ಮೇಲ್ವಿಚಾರಣೆ ಮತ್ತು ಭಾರತೀಯರನ್ನು ಬರಮಾಡಿಕೊಳ್ಳುವ ಜವಾಬ್ದಾರಿಯನ್ನು ಮೋದಿ ಸರ್ಕಾರವು ಮಂತ್ರಿಗಳಿಗೆ ನೀಡಿದೆ.

ಇದನ್ನೂ ಓದಿ : ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ

ಸಚಿವರು ಅಧಿಕಾರಗಳ ತಂಡ 

ಸಚಿವರಾದ ಜಿತೇಂದ್ರ ಸಿಂಗ್(Jitendra Singh), ಮುಖ್ತಾರ್ ಅಬ್ಬಾಸ್ ನಖ್ವಿ, ರಾವ್ ಇಂದರ್‌ಜಿತ್ ಸಿಂಗ್, ನಾರಾಯಣ ರಾಣೆ, ಜಿ ಕಿಶನ್ ರೆಡ್ಡಿ, ಕೈಲಾಶ್ ಚೌಧರಿ, ಪುರುಷೋತ್ತಮ್ ರೂಪಾಲಾ, ಭಗವಂತ ಖೂಬಾ, ವೀರೇಂದ್ರ ಕುಮಾರ್, ಮೀನಾಕ್ಷಿ ಲೇಖಿ, ವಿ. ಮುರಳೀಧರನ್, ಭಗವತ್ ಕರದ್, ನಿಸಿತ್ ಪ್ರಮಾಣಿಕ್, ಶಂತನು ಸಾಹಿ ಠಾಕುರ್ , ದರ್ಶನ್ ಜರ್ದೋಶ್, ದೇವುಸಿನ್ಹ್ ಚೌಹಾಣ್, ಭಾರತಿ ಪ್ರವೀಣ್ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ಭಾನು ಪ್ರತಾಪ್ ಸಿಂಗ್ ವರ್ಮಾ, ಸುಭಾಷ್ ಸರ್ಕಾರ್, ಕಪಿಲ್ ಪಾಟೀಲ್ ಅವರಿಗೆ ಉಕ್ರೇನ್‌ನ ನೆರೆಯ ದೇಶಗಳಿಂದ ಭಾರತೀಯರನ್ನು ಕರೆದೊಯ್ಯುವ ಕಾರ್ಯವನ್ನು ನಿಯೋಜಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News