Cyclone Shaheen: ಗುಲಾಬ್ ನಂತರ, ಈಗ ಶಾಹೀನ್ ಚಂಡಮಾರುತದ ಭೀತಿ
Cyclone Shaheen: ಗುಜರಾತ್‌ನಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಗಾಳಿಯು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 60-150 ಕಿಮೀ ವೇಗದಲ್ಲಿ ಚಲಿಸಬಹುದು.
Cyclone Shaheen:ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಇತ್ತೀಚಿನ ಬುಲೆಟಿನ್ ನಲ್ಲಿ ಶಾಹೀನ್ ಚಂಡಮಾರುತದಿಂದಾಗಿ ಭಾರತದಾದ್ಯಂತ ಏಳು ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ, ಇದು ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಗುಲಾಬ್ ಚಂಡಮಾರುತದ ನಂತರ , ಈಗ ಶಾಹೀನ್ ಚಂಡಮಾರುತದ ಭೀತಿ ಉಂಟಾಗಿದೆ.ಗುಜರಾತ್ ಕರಾವಳಿಗೆ ಶಾಹೀನ್ ಚಂಡಮಾರುತ (Cyclone Shaheen) ಅಪ್ಪಳಿಸುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತವು ಈಶಾನ್ಯ ಅರಬ್ಬಿ ಸಮುದ್ರ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ತೀವ್ರಗೊಂಡಿದೆ ಎಂದು ವರದಿಯಾಗಿದೆ.
ಚಂಡಮಾರುತದ ಬಿಕ್ಕಟ್ಟಿನ ದೃಷ್ಟಿಯಿಂದ, ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ಗುಜರಾತ್ ಸರ್ಕಾರ ಈ ಕುರಿತಂತೆ ಅಧಿಕಾರಿಗಳು ಮತ್ತು NDRF ತಂಡದೊಂದಿಗೆ ಸಭೆ ನಡೆಸಿದೇ. ಅದೇ ಸಮಯದಲ್ಲಿ, ಹವಾಮಾನ ಇಲಾಖೆ ಕೂಡ ಗುಜರಾತ್‌ನಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಗಾಳಿಯು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 60-150 ಕಿಮೀ ವೇಗದಲ್ಲಿ ಚಲಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೀಡಿತ ಪ್ರದೇಶಗಳಲ್ಲಿ ಅಲರ್ಟ್:
ಗುಜರಾತ್ (Gujarat) ಕರಾವಳಿಗೆ ಶಾಹೀನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂದು ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಆಡಳಿತವನ್ನು ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಅದೇ ಸಮಯದಲ್ಲಿ, NDRF ಮತ್ತು SDRF ತಂಡಗಳು 17 ಜಿಲ್ಲೆಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ. ಮೀನುಗಾರರು ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದೇ ಸಮಯದಲ್ಲಿ, ಅಕ್ಟೋಬರ್ 2 ರವರೆಗೆ ಮೀನುಗಾರಿಕೆ ಮತ್ತು ಯಾವುದೇ ರೀತಿಯ ಸಮುದ್ರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಶಾಹೀನ್ ಚಂಡಮಾರುತದ ಹಿನ್ನಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಅಮ್ರೇಲಿ, ಭಾವನಗರ, ರಾಜ್‌ಕೋಟ್, ಆನಂದ್ ಮತ್ತು ಭರೂಚ್ ಮತ್ತು ಸೌರಾಷ್ಟ್ರದ ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ, ಚಂಡಮಾರುತವು ವಾಯುವ್ಯದಲ್ಲಿರುವ ಪಾಕಿಸ್ತಾನ-ಮಕ್ರಾನ್ ಕರಾವಳಿಯ ಕಡೆಗೆ ಚಲಿಸುವ ಮತ್ತು ಭಾರತೀಯ ಕರಾವಳಿಯಿಂದ ದೂರ ಹೋಗುವ ಸಾಧ್ಯತೆಯಿದೆ. ಈ ಚಂಡಮಾರುತವು ಅರೇಬಿಯನ್ ಸಮುದ್ರದಲ್ಲಿ ಕ್ರಮೇಣ ಪಶ್ಚಿಮಕ್ಕೆ ಚಲಿಸುತ್ತದೆ ಎಂದು ತಿಳಿದುಬಂದಿದೆ. ಇದು ಪಾಕಿಸ್ತಾನದ ಕರಾವಳಿಗೆ ಸಮಾನಾಂತರವಾಗಿ ಇರಾನ್‌ನ ಗಡಿ ಪ್ರದೇಶವನ್ನು ತಲುಪುತ್ತದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ- Tomato Price Rise: ಟೊಮೆಟೊ ಬೆಲೆ ದುಪ್ಪಟ್ಟು, ಈರುಳ್ಳಿ ಬೆಲೆಯಲ್ಲೂ ಆಗಲಿದೆ ಏರಿಕೆ ಕಾರಣ ಏನು ಗೊತ್ತಾ ?
ಶಾಹೀನ್ ಚಂಡಮಾರುತ ಸಮೀಪಿಸುತ್ತಿರುವ ಕಾರಣ ಭಾರೀ ಮಳೆಯಾಗುವ ರಾಜ್ಯಗಳಿಗೆ ಇತ್ತೀಚಿನ IMD ಎಚ್ಚರಿಕೆಗಳು ಇಲ್ಲಿವೆ:
1. ಅಕ್ಟೋಬರ್ 1 ಮತ್ತು 2 ರಂದು ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು IMD ಬುಲೆಟಿನ್ ಮುನ್ಸೂಚನೆ ನೀಡಿದೆ.
2. ಅಕ್ಟೋಬರ್ 1 ರಿಂದ ಭಾರತದಲ್ಲಿ ಮಳೆ ಚಟುವಟಿಕೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ, ಆ ಮೂಲಕ ತಮಿಳುನಾಡು, ಕೇರಳ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಅಕ್ಟೋಬರ್ 1 ರಿಂದ 4 ರ ನಡುವೆ ಭಾರೀ ಮಳೆಯಾಗಲಿದೆ. ಅಕ್ಟೋಬರ್ 2 ಮತ್ತು 4 ರ ನಡುವೆ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತದೆ.
3. ಮುಂದಿನ 12 ಗಂಟೆಗಳಲ್ಲಿ ಈಶಾನ್ಯ ಅರಬ್ಬಿ ಸಮುದ್ರ ಹಾಗೂ ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಐಎಂಡಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ 4 ರ ಮುಂಜಾನೆಯವರೆಗೆ ಉತ್ತರ ಮತ್ತು ಪಕ್ಕದ ಮಧ್ಯ ಅರಬ್ಬಿ ಸಮುದ್ರ, ಪಾಕಿಸ್ತಾನ-ಮಕ್ರಾನ್ ಕರಾವಳಿಯಲ್ಲಿ ಮತ್ತು ಓಮನ್ ಕೊಲ್ಲಿಯಲ್ಲಿರುವ ಮೀನುಗಾರರಿಗೆ ಅದೇ ಎಚ್ಚರಿಕೆಯನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.