Tomato Price Rise: ಟೊಮೆಟೊ ಬೆಲೆ ದುಪ್ಪಟ್ಟು, ಈರುಳ್ಳಿ ಬೆಲೆಯಲ್ಲೂ ಆಗಲಿದೆ ಏರಿಕೆ ಕಾರಣ ಏನು ಗೊತ್ತಾ ?

ಈ ದಿನಗಳಲ್ಲಿ ಟೊಮೆಟೊ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 20-35 ರೂ.ಯಾಗಿದೆ. ಆಗಸ್ಟ್ ನಲ್ಲಿ, ಹೆಚ್ಚಿದ ಉತ್ಪಾದನೆಯಿಂದಾಗಿ ಟೊಮೆಟೊ ಬೆಲೆಗಳು ಗಣನೀಯವಾಗಿ ಕುಸಿದಿದ್ದವು.

Written by - Ranjitha R K | Last Updated : Oct 1, 2021, 01:31 PM IST
  • ಟೊಮೆಟೊ ದರ 17 ಪಟ್ಟು ಹೆಚ್ಚಾಗಿದೆ
  • ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆ
  • ಈರುಳ್ಳಿ ಬೆಲೆಯಲ್ಲಿಯೂ ಏರಿಕೆ
Tomato Price Rise:  ಟೊಮೆಟೊ ಬೆಲೆ ದುಪ್ಪಟ್ಟು, ಈರುಳ್ಳಿ ಬೆಲೆಯಲ್ಲೂ ಆಗಲಿದೆ ಏರಿಕೆ ಕಾರಣ ಏನು ಗೊತ್ತಾ ? title=
ಟೊಮೆಟೊ ದರದಲ್ಲಿ ಏರಿಕೆ (file photo)

ನವದೆಹಲಿ : Tomato and Onion price Rise : ಸಾಮಾನ್ಯವಾಗಿ ಎಲ್ಲಾ ಅಡುಗೆಗೆ ಟೊಮೆಟೊ ಬೇಕೆ ಬೇಕು.  ಟೊಮೆಟೊ  ಇಲ್ಲದೆ ಅಡುಗೆ ಅಪೂರ್ಣ ಎಂದೇ ಹೇಳಬಹುದು. ಕೆಲವೇ ವಾರಗಳ ಹಿಂದೆ ಟೊಮೆಟೊ ಬೆಲೆ (Tomato price) ತೀವ್ರವಾಗಿ ಕುಸಿದಿಟ್ಟು.  ರೈತರು ಉತ್ಪಾದನಾ ವೆಚ್ಚವನ್ನು ಸಹ ಪೂರೈಸಲು ಸಾಧ್ಯವಾಗಿರಲಿಲ್ಲ. ಇದಾದ ನಂತರ, ಬೇಸರಗೊಂಡು   ರೈತರು ಟೊಮೆಟೊ ಬೆಳೆಯನ್ನು ರಸ್ತೆಗೆ ಎಸೆಯಲು ಆರಂಭಿಸಿದ್ದರು. ಆದರೆ ಈಗ ಮತ್ತೊಮ್ಮೆ ಇದ್ದಕ್ಕಿದ್ದಂತೆ ಟೊಮೆಟೊ ದರಗಳಲ್ಲಿ (Tomato  rate hike) ಏರಿಕೆ ಕಾಣುತ್ತಿವೆ. 

ಈ ದಿನಗಳಲ್ಲಿ ಟೊಮೆಟೊ ಬೆಲೆ (Tomato  rate hike) ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 20-35 ರೂ.ಯಾಗಿದೆ. ಆಗಸ್ಟ್ ನಲ್ಲಿ, ಹೆಚ್ಚಿದ ಉತ್ಪಾದನೆಯಿಂದಾಗಿ ಟೊಮೆಟೊ ಬೆಲೆಗಳು ಗಣನೀಯವಾಗಿ ಕುಸಿದಿದ್ದವು. ಇದರಿಂದಾಗಿ ಅನೇಕ ರೈತರು ಟೊಮೆಟೊ (Tomato) ಬೆಳೆಯನ್ನು ರಸ್ತೆಗೆ ಎಸೆಯಬೇಕಾಯಿತು. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಟೊಮೆಟೊ ಬೆಲೆ 35 ರೂ.ಯನ್ನು ತಲುಪಿದೆ. ಕಳೆದ 6 ತಿಂಗಳಲ್ಲಿ ಅತಿ ಹೆಚ್ಚು ಎನ್ನಲಾಗಿದೆ.  

ಇದನ್ನೂ ಓದಿ : Indian Army Recruitment 2021: ಭಾರತೀಯ ಸೇನೆಯಲ್ಲಿ ಪರೀಕ್ಷೆ ಇಲ್ಲದೆ ಅಧಿಕಾರಿ ಆಗುವ ಸುವರ್ಣಾವಕಾಶ, ಶೀಘ್ರದಲ್ಲೇ ಅರ್ಜಿ ಸಲ್ಲಿಸಿ

ಬೆಲೆ ಏರಿಕೆಗೆ ಕಾರಣ : 
ಕಳೆದ ಒಂದೂವರೆ ವರ್ಷಗಳಿಂದ, ಕರೋನಾದಿಂದಾಗಿ (Coronavirus) ದೇಶಾದ್ಯಂತ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಮುಚ್ಚಿದ್ದವು ಅಥವಾ ಅಲ್ಲಿಗೆ ಕೆಲವೇ ಜನರು ಬರುತ್ತಿದ್ದರು. ಆದರೆ, ಈಗ ಕರೋನಾದ ಸುಧಾರಣೆಯ ಪರಿಸ್ಥಿತಿಗಳ ನಡುವೆ, ಜನರು ಮತ್ತೆ ರೆಸ್ಟೋರೆಂಟ್‌ಗಳಲ್ಲಿ ತಿನ್ನಲು ಆರಂಭಿಸಿದ್ದಾರೆ. ಈ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಟೊಮೆಟೊಗಳಿಗೆ ಬೇಡಿಕೆ ಹೆಚ್ಚಾಗಿದೆ. ಟೊಮೆಟೊ ಕೃಷಿ ಸೀಸನ್ ಬರಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಅಂದರೆ, ಟೊಮೆಟೊ ಬೆಲೆಗಳು ಈಗ ಮತ್ತಷ್ಟು ಹೆಚ್ಚಾಗಬಹುದು.

ಟೊಮೆಟೊ ಜೊತೆ ಈರುಳ್ಳಿ ಬೆಲೆ ಕೂಡಾ ಹೆಚ್ಚಾಗಬಹುದು :
ಟೊಮೆಟೊ ಜೊತೆಗೆ ಈರುಳ್ಳಿ ದರ ಕೂಡ ಹೆಚ್ಚಾಗಬಹುದು. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಯೂ (Onion rate) ಹೆಚ್ಚಾಗುವ ನಿರೀಕ್ಷೆಯಿದೆ. ದೇಶದ ರಾಜಧಾನಿ ದೆಹಲಿಯಲ್ಲಿ (Delhi) ಈರುಳ್ಳಿ ಬೆಲೆ ಕಳೆದ ವಾರ  ಪ್ರತಿ ಕೆಜಿಗೆ 55 ರಿಂದ 60 ರೂ.ವರೆಗೆ ತಲುಪಿತ್ತು.  . ತಜ್ಞರ  ಪ್ರಕಾರ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದು. ಆಶ್ಚರ್ಯಕರ ಸಂಗತಿಯೆಂದರೆ ಈರುಳ್ಳಿಯ ರಫ್ತನ್ನು ಸರ್ಕಾರ ನಿಷೇಧಿಸಿದ್ದರೂ, ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ : Changes From 1st October: ಇಂದಿನಿಂದ ಬದಲಾಗಿವೆ ಹಣಕ್ಕೆ ಸಂಬಂಧಿಸಿದ ಅನೇಕ ದೊಡ್ಡ ನಿಯಮಗಳು! ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News