ಕೇರಳ ಕರಾವಳಿಯಿಂದ ಕೇವಲ 40 ಕಿ.ಮೀ ದೂರದಲ್ಲಿ Cyclone Burevi, 4 ಜಿಲ್ಲೆಗಳಿಗೆ IMD ರೆಡ್ ಅಲರ್ಟ್
26 ಪರಿಹಾರ ತಂಡಗಳನ್ನು ತಮಿಳುನಾಡು ಮತ್ತು ಕೇರಳದಲ್ಲಿ ನಿಯೋಜಿಸಲಾಗಿದೆ ಮತ್ತು ಪುದುಚೇರಿಯಲ್ಲಿ ಒಂದು ಮೀಸಲು ತಂಡ ಇದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. 175 ಕುಟುಂಬಗಳಿಂದ ಸುಮಾರು 700 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ತಿರುವನಂತಪುರಂ: ಸೈಕ್ಲೋನಿಕ್ ಸ್ಟಾರ್ಮ್ ಬುರೆವಿ ಕೇರಳಕ್ಕೆ ಬಹಳ ಹತ್ತಿರದಲ್ಲಿದೆ. ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿರುವ ಭಾರತ ಹವಾಮಾನ ಇಲಾಖೆ (IMD) ಬುಲೆಟಿನ್ ಪ್ರಕಾರ, ಮುಂದಿನ ಮೂರು ಗಂಟೆಗಳಲ್ಲಿ ಬುರೆವಿ ಚಂಡಮಾರುತ ಪಶ್ಚಿಮ-ವಾಯುವ್ಯ ದಿಕ್ಕಿಗೆ ತೆರಳಿ ಮನ್ನಾರ್ ಕೊಲ್ಲಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Cyclone Burevi) ಇಂದು ಬಂಗಾಳಕೊಲ್ಲಿಗೆ ಬಂದು ಅಪ್ಪಳಿಸಲಿದೆ. ಹೀಗಾಗಿ ಕೇರಳದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಹಾಗೂ ಅಲಪ್ಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Cyclone Burevi: ಈ ಎರಡೂ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಈ ಚಂಡಮಾರುತವು (Cyclone) ಇಂದು ರಾತ್ರಿ ಮತ್ತು ಶುಕ್ರವಾರ ಮುಂಜಾನೆ ಪಂಬನ್ ಮತ್ತು ಕನ್ಯಾಕುಮಾರಿ ನಡುವೆ ದಕ್ಷಿಣ ತಮಿಳುನಾಡು (Tamil Nadu) ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಚಂಡಮಾರುತ ಅಪ್ಪಳಿಸುವ ಮುಂಚಿತವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) ಎಂಟು ತಂಡಗಳು ಮತ್ತು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.
ಒಟ್ಟಾರೆಯಾಗಿ 26 ಪರಿಹಾರ ತಂಡಗಳನ್ನು ತಮಿಳುನಾಡು ಮತ್ತು ಕೇರಳದಲ್ಲಿ ನಿಯೋಜಿಸಲಾಗಿದೆ ಮತ್ತು ಒಂದು ತಂಡ ಪುದುಚೇರಿಯಲ್ಲಿ ಮೀಸಲು ಇದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
175 ಕುಟುಂಬಗಳಿಂದ ಸುಮಾರು 700 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, ಇತರ 2,489 ಶಿಬಿರಗಳನ್ನು ಗುರುತಿಸಲಾಗಿದೆ.
ಬುರೆವಿ ಚಂಡಮಾರುತದ ದೃಷ್ಟಿಯಿಂದ ಐಎಂಡಿ ಡಿಸೆಂಬರ್ 3ರಂದು ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ತಮಿಳುನಾಡು ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಬುರೆವಿ ಚಂಡಮಾರುತದಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಉಂಟಾಗುವ ಪರಿಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಕೇಂದ್ರವು ಕೇರಳ, ತಮಿಳುನಾಡಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತದೆ. ಪೀಡಿತ ಪ್ರದೇಶಗಳಲ್ಲಿ ವಾಸಿಸುವವರ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಬುರೆವಿ ಚಂಡಮಾರುತ ಕಳೆದ ವಾರ ತಮಿಳುನಾಡಿನ ಉತ್ತರ ಕರಾವಳಿಯನ್ನು ಅಪ್ಪಳಿಸಿದ ನಿವಾರ್ ಚಂಡಮಾರುತದಷ್ಟು ಬಲವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.