ಚೆನ್ನೈ: ಬುರೆವಿ ಚಂಡಮಾರುತವು ಡಿಸೆಂಬರ್ 4 ರಂದು ತಮಿಳುನಾಡನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆಯ (ಐಎಂಡಿ) ಮಂಗಳವಾರ (ಡಿಸೆಂಬರ್ 1) ತಿಳಿಸಿದೆ. ಇದು ಒಂದು ವಾರದಲ್ಲಿ ರಾಜ್ಯವನ್ನು ಅಪ್ಪಳಿಸುತ್ತಿರುವ ಎರಡನೇ ಚಂಡಮಾರುತವಾಗಿದೆ. ಕಳೆದ ವಾರವಷ್ಟೇ ನಿವಾರ್ ಚಂಡಮಾರುತ (Nivar Cyclone)ದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ಹಾನಿಗೊಳಗಾಗಿದ್ದವು.
ಅದಾಗ್ಯೂ ಬುರೆವಿ ಚಂಡಮಾರುತವು ನಿವಾರ್ ಚಂಡಮಾರುತದಂತೆ ತೀವ್ರವಾಗಿರುವುದು ಅಸಂಭವವಾಗಿದೆ ಎಂದು ಐಎಂಡಿ (IMD) ಮಹಾನಿರ್ದೇಶಕ ಮೃತುಂಜಯ್ ಮೋಹಪಾತ್ರ ಹೇಳಿದ್ದಾರೆ.
ಚಂಡಮಾರುತವು ಡಿಸೆಂಬರ್ 2 ರ ಸಂಜೆ ಅಥವಾ ರಾತ್ರಿ ವೇಳೆಗೆ ಶ್ರೀಲಂಕಾ ಕರಾವಳಿಯ ತ್ರಿಕೋನಮಲಿಗೆ ಸಮೀಪಿಸಬಹುದು ಎಂದು ನಿರೀಕ್ಷಿಸಲಾಗಿದೆ. ಚಂಡಮಾರುತವು (Cyclone) ತ್ರಿಕೋನಮಲಿಯನ್ನು ದಾಟಿ ಗಂಟೆಗೆ 75-85 ಕಿಲೋಮೀಟರ್ ವೇಗದಲ್ಲಿ 95 ಕಿ.ಮೀ ವೇಗದಲ್ಲಿ ಚಲಿಸುತ್ತದ. ನಂತರ ಡಿಸೆಂಬರ್ 4 ರಂದು ತಮಿಳುನಾಡನ್ನು ಮುಟ್ಟುವ ನಿರೀಕ್ಷೆಯಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
ಈ 4 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ, ಹಲವೆಡೆ Red, Orange ಅಲರ್ಟ್
ಈ ಚಂಡಮಾರುತವು ಪಶ್ಚಿಮ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ, ಇದು ಡಿಸೆಂಬರ್ 3ರಂದು ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶಕ್ಕೆ ಹೊರಹೊಮ್ಮುತ್ತದೆ. ನಂತರ ಅದು ಪಶ್ಚಿಮ-ನೈಋತ್ಯ ದಿಕ್ಕಿಗೆ ಸಾಗಿ ಡಿಸೆಂಬರ್ 4 ರ ಮುಂಜಾನೆ ದಕ್ಷಿಣ ತಮಿಳುನಾಡು ಕರಾವಳಿಯನ್ನು ಕನ್ಯಾಕುಮಾರಿ ಮತ್ತು ಪಂಬನ್ ನಡುವೆ ದಾಟುತ್ತದೆ ಎಂದು ಎಚ್ಚರಿಕೆ ನೀಡಿರುವ ಐಎಂಡಿ ಡಿಸೆಂಬರ್ 3ಕ್ಕೆ ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳಕ್ಕೆ ರೆಡ್ ಅಲರ್ಟ್ ನೀಡಿದೆ.
ತಮಿಳುನಾಡಿನ (Tamil Nadu) ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ತೆಂಕಸಿ, ರಾಮನಾಥಪುರಂ ಮತ್ತು ಶಿವಗಂಗೈ ಡಿಸೆಂಬರ್ 2 ಮತ್ತು 3 ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಈಗ ಭಾರತ ಮತ್ತು ಚೀನಾ ನಡುವೆ 'ಜಲಯುದ್ಧ'!
ಕೇರಳದ (Kerala) ತಿರುವನಂತಪುರಂ, ಕೊಲ್ಲಂ, ಪಥನಮತ್ತತ್ತ ಮತ್ತು ಆಲಪ್ಪುಜಾ ಪ್ರದೇಶಗಳಲ್ಲಿ ಡಿಸೆಂಬರ್ 3 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡಮಾರುತದ ಹಿನ್ನಲೆಯಲ್ಲಿ ಮೀನುಗಾರರು ಡಿಸೆಂಬರ್ 1 ರಿಂದ 3ರವರೆಗೆ ನೈಋತ್ಯ ಬಂಗಾಳಕೊಲ್ಲಿಗೆ ಹೋಗದಂತೆ ಸೂಚಿಸಲಾಗಿದೆ. ಕೊಮೊರಿನ್ ಪ್ರದೇಶ, ಮನ್ನಾರ್ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡು-ಕೇರಳ ಕರಾವಳಿಗಳಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಅಧಿಕಾರಿಗಳು ಡಿಸೆಂಬರ್ 2-4ರವರೆಗೆ ಸ್ಥಗಿತಗೊಳಿಸಿದ್ದಾರೆ.