ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 9,518 ಹೊಸ ಕೊರೋನಾವೈರಸ್ (Coronavirus) ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 3.10 ಲಕ್ಷ ದಾಟಿದೆ. ಅಷ್ಟೇ ಅಲ್ಲದೆ ಕಳೆದ 24 ಗಂಟೆಗಳಲ್ಲಿ 258 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ 149 ಮಂದಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎಂಎಂಆರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಕಳೆದ 24 ಗಂಟೆಗಳಲ್ಲಿ 258 ಮಂದಿ ಮೃತಪಟ್ಟಿದ್ದು ಸತ್ತವರ ಸಂಖ್ಯೆ ರಾಜ್ಯದಲ್ಲಿ 11,854ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ಕರೋನಾ ಹೊಸ ಪ್ರಕರಣಗಳು 9,000 ಗಡಿ ದಾಟಿರುವುದು ಇದೇ ಮೊದಲು. ಪುಣೆಯಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು 1812 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಮುಂಬೈನಲ್ಲಿ 1038 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಮುಂಬಯಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,01,388ಕ್ಕೆ ಏರಿದೆ.


ಅದೇ ಸಮಯದಲ್ಲಿ 258 ಸೋಂಕಿತ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ, ಅದರಲ್ಲಿ 64 ಮಂದಿ ಮುಂಬೈ ಮೂಲದವರಾಗಿದ್ದರೆ, 149 ಮಂದಿ ಮುಂಬೈ ಮಹಾನಗರ ಪ್ರದೇಶದವರು, ಇದು ಹೊಸ ಕೋವಿಡ್ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಥಾಣೆ ಜಿಲ್ಲೆಯ ಕಲ್ಯಾಣ್ ಡೊಂಬಿವ್ಲಿ ಪ್ರದೇಶದಲ್ಲಿ ಒಂದೇ ದಿನದಲ್ಲಿ ಗರಿಷ್ಠ 475 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಇದರ ನಂತರ ಥಾಣೆ ನಗರದಲ್ಲಿ 17,226 ಪ್ರಕರಣಗಳಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಎಂಎಂಆರ್ನ ಈ ಭಾಗದಲ್ಲಿ ಪ್ರಕರಣಗಳು 18,115ಕ್ಕೆ ಏರಿದೆ.  


ಭಾನುವಾರದವರೆಗೆ ಎಂಎಂಆರ್ ಪ್ರದೇಶದಲ್ಲಿ ಒಟ್ಟು 1,99,835 ಪ್ರಕರಣಗಳು ಮತ್ತು 8,220 ಸೋಂಕಿತ ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪುಣೆಯ ಸಮೀಪವಿರುವ ಪಿಂಪ್ರಿ ಚಿಂಚ್‌ವಾಡ್ ನಗರದಲ್ಲಿ ದಿನಕ್ಕೆ 851 ಹೊಸ ಪ್ರಕರಣಗಳಿವೆ. ನಾಸಿಕ್ ನಗರದಲ್ಲಿ 471 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಇಲಾಖೆಯ ಪ್ರಕಾರ ಕೊಲ್ಹಾಪುರ ಜಿಲ್ಲೆಯಲ್ಲಿ 193 ಹೊಸ ಪ್ರಕರಣಗಳು ವರದಿಯಾಗಿವೆ (ಪುರಸಭೆಯ ಮಿತಿಗಳನ್ನು ಹೊರತುಪಡಿಸಿ). ಸೋಲಾಪುರ ಜಿಲ್ಲೆಯಲ್ಲಿ ದಾಖಲೆಯ 226 ಜನರಲ್ಲಿ ಕೋವಿಡ್ -19 (Covid-19) ದೃಢಪಟ್ಟಿದೆ. ಅದೇ ಸಮಯದಲ್ಲಿ ಪುಣೆ ಜಿಲ್ಲೆಯಲ್ಲಿ 386 ಮತ್ತು ಜಲ್ಗಾಂವ್ ಜಿಲ್ಲೆಯಲ್ಲಿ 104 ಜನರಲ್ಲಿ ಕರೋನಾ ದೃಢಪಟ್ಟಿದೆ. ದಿನದಲ್ಲಿ ಒಟ್ಟು 3,906 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 1,69,569ಕ್ಕೆ ಏರಿದೆ.


ಈಗ ರಾಜ್ಯದಲ್ಲಿ 1,29,032 ರೋಗಿಗಳು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಸಮಯದಲ್ಲಿ ದೃಢಪಡಿಸಿದ ಪ್ರಕರಣಗಳ ಸಂಖ್ಯೆ 3,10,455. ರಾಜ್ಯದಲ್ಲಿ ರೋಗದಿಂದ ಚೇತರಿಸಿಕೊಳ್ಳುವ ಪ್ರಮಾಣ 54.62 ರಷ್ಟಿದ್ದರೆ, ಸಾವಿನ ಪ್ರಮಾಣ 3.82 ರಷ್ಟಿದೆ. ಈವರೆಗೆ ಒಟ್ಟು 15,64,129 ಜನರಿಗೆ ಕೋವಿಡ್-19 ಟೆಸ್ಟ್ ಮಾಡಿಸಲಾಗಿದೆ. 7,54,370 ಜನರು ಹೋಂ ಕ್ವಾರಂಟೈನ್ (Home Quarantine) ನಲ್ಲಿ ಇದ್ದಾರೆ. 45,846 ಜನರನ್ನು ಕ್ವಾರೆಂಟೈನ್ (Quarantine) ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.