ನವದೆಹಲಿ: Data Leak - ಸೈಬರ್ ಭದ್ರತಾ ಪ್ರಕರಣಗಳ ಸ್ವತಂತ್ರ ಶೋಧ ನಡೆಸುವ ರಾಜಶೇಖರ್ ರಾಜಾರಿಯಾ ಭಾನುವಾರ (ಜನವರಿ 3) ದೇಶದಲ್ಲಿ ಸುಮಾರು ಒಂದು ಮಿಲಿಯನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಬೆಂಗಳೂರು ಮೂಲದ ಡಿಜಿಟಲ್ ಪೇಮೆಂಟ್ಸ್ ಗೇಟ್‌ವೇ ಜಸ್ಪೇ ಸರ್ವರ್‌ನಿಂದ ಡಾರ್ಕ್ ವೆಬ್‌ನಲ್ಲಿನ ಡೇಟಾ ಸೋರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಸೈಬರ್ ಅಟ್ಯಾಕ್ ಕುರಿತು ಸ್ಪಷ್ಟನೆ ನೀಡಿದ Juspay
ಇನ್ನೊಂದೆಡೆ ಈ ಸೈಬರ್ ದಾಳಿಯ ಸಮಯದಲ್ಲಿ ಯಾವುದೇ ಕಾರ್ಡ್ ಸಂಖ್ಯೆ ಅಥವಾ ಹಣಕಾಸಿನ ಮಾಹಿತಿಯ ಜೊತೆಗೆ ರಾಜಿ ಮಾಡಿಕೊಳ್ಳಲಾಗಿಲ್ಲ ಎಂದು ಜಸ್ಪೇ ಸ್ಪಷ್ಟನೆ ನೀಡಿದೆ. ಜೊತೆಗೆ 10 ಕೋಟಿ ಸಂಖ್ಯೆಯನ್ನು ವರದಿ ಮಾಡಲಾಗುತ್ತಿದೆ ಆದರೆ, ನಿಮವಾದ ಸಂಖ್ಯೆ ಅದಕ್ಕಿಂತ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ವಕ್ತಾರರು, ಆಗಸ್ಟ್ 18, 2020ರಂದು ನಮ್ಮ ಸರ್ವರ್ ಗಳನ್ನು  ಅನಧೀಕೃತವಾಗಿ ತಲಪುವ ಪ್ರಯತ್ನ ಮಾಡಲಾಗಿದ್ದು, ಅದನ್ನು ವಿಫಲಗೊಳಿಸಲಾಗಿದೆ. ಈ ದಾಳಿಯಲ್ಲಿ ಯಾವುದೇ ರೀತಿಯ ಕಾರ್ಡ್ ಸಂಖ್ಯೆ, ವಿತ್ತೀಯ ಮಾಹಿತಿ ಅಥವಾ ವಹಿವಾಟಿನ ದತ್ತಾಂಶ ಸೋರಿಕೆಯಾಗಿಲ್ಲ. ಆದರೆ, ಗೌಪ್ಯವಲ್ಲದ ದತ್ತಾಂಶ, ಪ್ಲೇನ್ ಟೆಕ್ಸ್ಟ್, ಇ-ಮೇಲ್ ಗಳು ಹಾಗೂ ಫೋನ್ ನಂಬರ್ ಗಳು ಸೋರಿಕೆಯಾಗಿವೆ. ಈ ರೀತಿಯ ಖಾತೆಗಳ ಸಂಖ್ಯೆ10 ಕೋಟಿಗೂ ಕಡಿಮೆ ಇದೆ ಎಂದುಅವರು ಸ್ಪಷ್ಟನೆ ನೀಡಿದ್ದಾರೆ.


ಇದನ್ನು ಓದಿ- Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ


Bitcoinಗಳ ಮೂಲಕ ದತ್ತಾಂಶ ಮಾರಾಟ ಮಾಡಲಾಗುತ್ತಿದೆ
ಈ ಕುರಿತು ಮಾಹಿತಿ ನೀಡಿರುವ ಸೈಬರ್ ಸುರಕ್ಷತೆಯ ತಜ್ಞ ರಾಜಹರಿಯಾ, ದತ್ತಾಂಶಗಳನ್ನು ಡಾರ್ಕ್ ವೆಬ್ ಮೇಲೆ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ (Cryptocurrency Bitcoin) ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಹಾಗೂ ಇದಕ್ಕಾಗಿ ಹ್ಯಾಕರ್ ಗಳು ಟೆಲಿಗ್ರಾಮ್ ಮೂಲಕ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಪ್ರಕಾರ ಜಸ್ಪೇ ಬಳಕೆದಾರರ ದತ್ತಾಂಶ ಸಂಗ್ರಹ ಮಾಡಲು PCIDSS (Payment Card Industry Data Security Standard)ಪಾಲಿಸುತ್ತದೆ. ಒಂದು ವೇಳೆ ಹ್ಯಾಕರ್ ಗಳು ಕಾರ್ಡ್ ಫಿಂಗರ್ ಪ್ರಿಂಟ್ ರಚಿಸಲು ಹ್ಯಾಶ್ ಅಲ್ಗೊರಿಥಂ ಬಳಕೆ ಮಾಡುತ್ತಿದ್ದರೆ, ಅವರು ಮಾಸ್ಕಡ್ ಕಾರ್ಡ್ ಅನ್ನು ಕೂಡ ಡಿಕ್ರಿಪ್ಟ್ ಮಾಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ 10 ಕೋಟಿ ಕಾರ್ಡ್ ಧಾರಕರ ದತಾಂಶ ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- Big Mistake! ಈ ಆನ್ಲೈನ್ ಮಾರುಕಟ್ಟೆಯ ಡೇಟಾ ಹ್ಯಾಕ್! 2 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ SALE


Juspay ಡೆವಲಪರ್ ತಲುಪಿದ ಹ್ಯಾಕರ್ ಗಳು
Juspay ಡೆವಲಪರ್ ವರೆಗೆ ಹ್ಯಾಕರ್ ಗಳು ತಲುಪಿರುವ ಸಂಗತಿಯನ್ನು ಸಂಸ್ಥೆ ಒಪ್ಪಿಕೊಂಡಿದೆ. ಆದರೆ, ಸೋರಿಕೆಯಾಗಿರುವ ದತ್ತಾಂಶಗಳು ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿಲ್ಲ. ಕೇವಲ ಫೋನ್ ಸಂಖ್ಯೆ ಹಾಗೂ ಇ-ಮೇಲ್ ಅಡ್ರೆಸ್ ಮಾತ್ರ ಸೋರಿಕೆಯಾಗಿದ್ದು ಅವುಗಳು ಗೌಪ್ಯ ಮಾಹಿತಿ ಅಡಿ ಬರುವುದಿಲ್ಲ . ಆದರೂ ಕೂಡ ದತ್ತಾಂಶ ಸೋರಿಕೆಯಾದ ದಿನದಿಂದಲೇ ಕಂಪನಿ ತನ್ನ ಮರ್ಚೆಂಟ್ ಪಾರ್ಟ್ನರ್ ಗೆ ಈ ಕುರಿತು ಸೂಚನೆ ನೀಡಿದೆ ಎಂದು ಹೇಳಿದೆ.


ಇದನ್ನು ಓದಿ- ನಿಮ್ಮ WhatsApp ನಂಬರ್ ಕೂಡ Google ಸರ್ಚ್ ನಲ್ಲಿ ಕಾಣಿಸಿಕೊಳ್ಳುತ್ತಿದೆಯೇ... ಈ ವರದಿ ಓದಲು ಮರೆಯದಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.