ಬೆಂಗಳೂರು: ಒಂದು ವೇಳೆ ನೀವೂ ಕೂಡ ಆನ್ಲೈನ್ ಶಾಪಿಂಗ್ (Online Shopping)ಮಾಡುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಡೇಟಾವನ್ನು ಇ-ಕಾಮರ್ಸ್ ಕಂಪನಿಯ ವೆಬ್ಸೈಟ್ನಲ್ಲಿ ಯಾವುದೇ ಸಮಯದಲ್ಲಿ ಸೋರಿಕೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ಪ್ರಕರಣ ಇ-ಕಾಮರ್ಸ್ ಕಿರಾಣಿ ಕಂಪನಿ ಬಿಗ್ಬಾಸ್ಕೆಟ್ನಿಂದ ಬೆಳಕಿಗೆ ಬಂದಿದೆ. ಕಿರಾಣಿ ಸರಕುಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಬಿಗ್ಬಾಸ್ಕೆಟ್ ಎಂಬ ಕಂಪನಿಯ ದತ್ತಾಂಶವನ್ನು ಸೈಬರ್ ಕಳ್ಳರು ಕದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಟಿಐನ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, ಸೈಬರ್ ಗುಪ್ತಚರ ಕಂಪನಿ ಸಾಬಯಿಲ್ ಹೇಳುವಂತೆ ಈ ಮಾಹಿತಿಯು ಸುಮಾರು 20 ಮಿಲಿಯನ್ ಬಳಕೆದಾರರು ಅಥವಾ ಬಿಗ್ಬಾಸ್ಕೆಟ್ನ ಗ್ರಾಹಕರ ವಿವರಗಳನ್ನು ಸೋರಿಕೆ ಮಾಡಿದೆ ಎಂದು ಹೇಳಿದೆ.
ಇದನ್ನು ಓದಿ- ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿದೆ IRCTC
ಸುದ್ದಿ ಪ್ರಕಾರ, ಕಂಪನಿಯು ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಮ್ ಸೆಲ್ನಲ್ಲಿ ದೂರು ದಾಖಲಿಸಿದ್ದು, ಸೈಬರ್ ತಜ್ಞರ ವತಿಯಿಂದ ಮಂಡಿಸಲಾಗಿರುವ ಹಕ್ಕುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಿಗ್ಬಾಸ್ಕೆಟ್ನ ಡೇಟಾವನ್ನು ಮಾರಾಟಕ್ಕಾಗಿ ಹ್ಯಾಕರ್ ಗಳು 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಸಾಬಯಿಲ್ ಹೇಳಿದೆ.
ಇದನ್ನು ಓದಿ- ALERT! ನಿಮ್ಮ ಮೊಬೈಲ್ ನಲ್ಲಿ ಈ ಕೆಲಸ ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಅಕೌಂಟ್
ಈ ಕುರಿತು ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿರುವ ಸಾಬಯಿಲ್, ಡಾರ್ಕ್ ವೆಬ್ ಗಳ ನಿಯಮಿತ ನಿಗಾವಹಿಸುವಿಕೆಯ ಸಂದರ್ಭದಲ್ಲಿ ಸಾಬಯಿಲ್ ರಿಸರ್ಚ್ ತಂಡ ಇದನ್ನು ಗಮನಿಸಿದ್ದು, ಸೈಬರ್ ಕ್ರೈಂ ಮಾರುಕಟ್ಟೆಯಲ್ಲಿ ಬಿಗ್ ಬಾಸ್ಕೆಟ್ ದತ್ತಾಂಶವನ್ನು 40 ಸಾವಿರ ಡಾಲರ್ ಗೆ ಮಾರಾಟ ಮಾಡಲಾಗುತ್ತಿದೆ. ಈ SQL ಫೈಲ್ ನ ಗಾತ್ರ 15 GB ಗಳಾಗಿದ್ದು, ಇದರಲ್ಲೂ ಸುಮಾರು 2 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ ಇದೆ ಎನ್ನಲಾಗಿದೆ.
ಇದನ್ನು ಓದಿ- ONLINE PAYMENT ಗಾಗಿ ಇನ್ಮುಂದೆ ನಿಮ್ಮ ಕಣ್ಣು ಹಾಗೂ ಮುಖವೇ ಪಾಸ್ವರ್ಡ್
ಈ ದತ್ತಾಂಶಗಳಲ್ಲಿ ಬಿಗ್ ಬಾಸ್ಕೆಟ್ ಬಳಕೆದಾರರ ಹೆಸರು, ಇ-ಮೇಲ್, ಪಾಸ್ವರ್ಡ್, ಕಾಂಟಾಕ್ಟ್ ನಂಬರ್, ಅಡ್ರೆಸ್ಸ್, ಜನ್ಮ ದಿನಾಂಕ, ಸ್ಥಾನ ಹಾಗೂ ಐಪಿ ಅಡ್ರೆಸ್ ಗಳು ಶಾಮೀಲಾಗಿವೆ ಎಂದು ಹೇಳಲಾಗಿದೆ. ಸಾಬಯಿಲ್ ಪಾಸ್ವರ್ಡ್ ಗಳ ಕುರಿತು ಕೂಡ ಉಲ್ಲೇಖಿಸಿದೆ. ಇನ್ನೊಂದೆಡೆ ಬಿಗ್ ಬಾಸ್ಕೆಟ್ OTP ಬಳಕೆ ಕೂಡ ಮಾಡುತ್ತದೆ ಹಾಗೂ ಪ್ರತಿ ಬಾರಿ ಇದು ಲಾಗಿನ್ ನಲ್ಲಿ ಬದಲಾಗುತ್ತದೆ.
ಈ ಕುರಿತು ಹೇಳಿಕೆ ನೀಡಿರುವ ಬಿಗ್ ಬಾಸ್ಕೆಟ್ ಕೆಲ ದಿನಗಳ ಹಿಂದೆಯಷ್ಟೇ ನಮಗೆ ಈ ಕುರಿತು ಶಂಕೆ ಬಂದಿದೆ. ನಾವು ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಈ ಕುರಿತು ನಾವು ಬೆಂಗಳೂರಿನ ಸೈಬರ್ ಸೆಲ್ ನಲ್ಲಿ ಈಗಾಗಲೇ ಪ್ರಕರಣ ದಾಖಲಿಸಿದ್ದು, ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದೆ.