ಮುಂಬೈ: ಮುಂಬೈ ಪಕ್ಕದಲ್ಲಿರುವ ನವೀ ಮುಂಬೈ ಪ್ರದೇಶದಲ್ಲಿ ಆನ್‌ಲೈನ್ ಪಿಜ್ಜಾ (Pizza) ಆರ್ಡರ್ ಮಾಡಿರುವುದು ವೃದ್ಧ ದಂಪತಿಗಳಿಗೆ ದುಬಾರಿಯಾಗಿದೆ. ಹೌದು ಪಿಜ್ಜಾ ಆರ್ಡರ್ ಮಾಡಿದ್ದ ದಂಪತಿಗಳ ಖಾತೆಯಿಂದ 50 ಸಾವಿರ ರೂಪಾಯಿಗಳು ಕಣ್ಮರೆಯಾಗಿದೆ. ಖಾತೆಯಿಂದ ಹಣ ಖಾಲಿಯಾಗಿರುವುದಷ್ಟೇ ಅಲ್ಲ ಪಿಜ್ಜಾ ಕೂಡ ಬರಲಿಲ್ಲ. 


COMMERCIAL BREAK
SCROLL TO CONTINUE READING

ನವೀ ಮುಂಬಯಿಯ ನೆರುಲ್ ಸೆಕ್ಟರ್ -6 ರಲ್ಲಿ ವಾಸಿಸುತ್ತಿರುವ ವಿಷ್ಣು ಮತ್ತು ರೋಮಿ ಶ್ರೀವಾಸ್ತವ ಅವರು ಹತ್ತಿರದ ಪಿಜ್ಜಾ ಕೇಂದ್ರದ ಸಂಖ್ಯೆಯನ್ನು ಆನ್‌ಲೈನ್ ಮೂಲಕ ತೆಗೆದುಕೊಂಡು ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿರುವ  ಲಿಂಕ್‌ನಲ್ಲಿ ಕ್ಲಿಕ್ ಮಾಡಿ ನಿಮ್ಮ ಕ್ರೆಡಿಟ್ / ಡೆಬಿಟ್ ಕಾರ್ಡ್ (Debit Card) ಮಾಹಿತಿ ಒದಗಿಸಿ. ನಿಮ್ಮ ಕಾರ್ಡ್‌ನಿಂದ ಕೇವಲ 5 ರೂಪಾಯಿಗಳನ್ನು ಪಾವತಿಸಿ  ಮತ್ತು ಪಿಜ್ಜಾ ನಿಮ್ಮ ಮನೆಗೆ ಬರುತ್ತದೆ ಎಂದು ಫೋನ್ ಎತ್ತಿದ ವ್ಯಕ್ತಿ ಹೇಳಿದ್ದಾರೆ.


5 ರೂಪಾಯಿಗೆ 50 ಸಾವಿರ ಖಾಲಿ:
ಇದನ್ನು ನಂಬಿದ ರೋಮಿ ಶ್ರೀವಾಸ್ತವ ಅವರು ಲಿಂಕ್‌ನಿಂದ 5 ರೂ. ಪಾವತಿಸಿದರು. ಆದರೆ ಅರ್ಧ ಘಂಟೆಯಲ್ಲಿ ಮನೆಗೆ ಬರಲಿದೆ ಎಂದಿದ್ದ ಪಿಜ್ಜಾ ಆರ್ಡರ್ 4 ಗಂಟೆಯಾದರೂ ಬರದಿದ್ದಾಗ, ಅವರು ಈ ಬಗ್ಗೆ ತಮ್ಮ ಮಗನಿಗೆ ತಿಳಿಸಿದರು. ಮಗ ಫೋನ್ ಪರಿಶೀಲಿಸಿದಾಗ ಖಾತೆಯಿಂದ 50 ಸಾವಿರ ರೂಪಾಯಿ ಕಡಿತಗೊಂಡಿರುವುದು ತಿಳಿದುಬಂದಿದೆ. ಇದನ್ನು ತಿಳಿದ ಕೂಡಲೇ ಅವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: ಈ Appಗಳಿಂದ ಖಾಲಿಯಾಗುತ್ತೆ ನಿಮ್ಮ Bank Account, ಇಲ್ಲಿದೆ ಪಟ್ಟಿ


71,500 ಕೋಟಿ ರೂ. ವಂಚನೆ:
ಈ ರೀತಿಯ ವಂಚನೆ (Online Fraud) ಇದೇ ಮೊದಲೇನಲ್ಲ. ಕಳೆದ 11 ವರ್ಷಗಳಲ್ಲಿ 53,334 ಜನರಿಗೆ ಈ ರೀತಿ ಮೋಸ ಮಾಡಲಾಗಿದೆ. ಡಿಜಿಟಲ್ ವಹಿವಾಟಿನಿಂದಾಗಿ 2018-19ನೇ ಸಾಲಿನಲ್ಲಿ 71,500 ಕೋಟಿ ರೂ.ಗಳ ಬ್ಯಾಂಕಿಂಗ್ ವಂಚನೆ ನಡೆದಿದೆ ಎಂದು ಇತ್ತೀಚಿನ ಆರ್‌ಬಿಐ ವರದಿ ಹೇಳಿದೆ.


ದೂರು ನೀಡುವುದು ಹೀಗೆ...
ನೀವೂ ಕೂಡ ಇದೇ ರೀತಿಯ ಬ್ಯಾಂಕ್ ವಂಚನೆಗೆ ಬಲಿಯಾಗಿದ್ದಾರೆ ಅದಕ್ಕಾಗಿ ನೀವು ಬ್ಯಾಂಕಿಗೆ ದೂರು ನೀಡಬೇಕಾಗುತ್ತದೆ. ಆರ್‌ಬಿಐ (RBI) ಪ್ರಕಾರ ಬ್ಯಾಂಕುಗಳಿಗೆ 24x7 ದೂರು ಸೌಲಭ್ಯವನ್ನು ಒದಗಿಸುವುದು ಅವಶ್ಯಕ. ಈ ದೂರನ್ನು ಎಸ್‌ಎಂಎಸ್, ಇ-ಮೇಲ್ ಅಥವಾ ಐವಿಆರ್ ಮೂಲಕ ಮಾಡಬಹುದು. ಇದಲ್ಲದೆ ಕೆಲವು ಬ್ಯಾಂಕುಗಳು ಬ್ಯಾಂಕಿನ ಸಂದೇಶಕ್ಕೆ ಉತ್ತರಿಸುವ ಮೂಲಕ ಗ್ರಾಹಕರಿಗೆ ಮಾಹಿತಿ ತಿಳಿಸುವ ಸೌಲಭ್ಯವನ್ನೂ ಒದಗಿಸುತ್ತವೆ.


ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮೋಸವಾಗಿದ್ದರೆ, ನಿಮ್ಮೆಲ್ಲಾ ಹಣ ಹಿಂತಿರುಗಿಸಲಾಗುತ್ತದೆ! ಇಲ್ಲಿದೆ ದಾರಿ


ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ?


  • ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರಿಗೂ ನೀಡಬೇಡಿ.

  • ನೀವು ಅಂತಹ ಯಾವುದೇ ವಂಚನೆಗೆ ಬಲಿಯಾಗಿದ್ದರೆ  ಮೊದಲು ನಿಮ್ಮ ಬ್ಯಾಂಕ್‌ಗೆ ಮಾಹಿತಿ ತಿಳಿಸಿ.

  • ನಿಮ್ಮ ಪಿನ್, ಪಾಸ್‌ವರ್ಡ್ ಮತ್ತು ಅಂತಹ ಮಾಹಿತಿಯನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಇರಿಸಿ.

  • ಆರ್‌ಬಿಐ ಬ್ಯಾಂಕಿನ ಗ್ರಾಹಕರಿಗೆ ಕರೆ ಮಾಡುವುದಿಲ್ಲ, ಇಮೇಲ್ ಮಾಡುವುದಿಲ್ಲ ಅಥವಾ ಸಂದೇಶ ಕಳುಹಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

  • ಯಾವುದೇ ರೀತಿಯ ದುರಾಶೆಗೆ ಒಳಗಾಗುವುದನ್ನು ತಪ್ಪಿಸಿ. ಏಕೆಂದರೆ ಅದು ನಿಮಗೆ ಭರಿಸಲಾಗದ ತುತ್ತಾಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.