ಈ Appಗಳಿಂದ ಖಾಲಿಯಾಗುತ್ತೆ ನಿಮ್ಮ Bank Account, ಇಲ್ಲಿದೆ ಪಟ್ಟಿ

ಮೊಬೈಲ್‌ನಲ್ಲಿ ನೆಟ್ ಬಳಸುವವರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಹೇಳದೆ ಕೇಳದೆ ಖಾಲಿ ಮಾಡುವ ಹಲವು ಅಪ್ಲಿಕೇಶನ್‌ಗಳಿವೆ.

Last Updated : Aug 28, 2020, 10:50 AM IST
ಈ Appಗಳಿಂದ ಖಾಲಿಯಾಗುತ್ತೆ ನಿಮ್ಮ Bank Account, ಇಲ್ಲಿದೆ ಪಟ್ಟಿ  title=

ನವದೆಹಲಿ: ಮೊಬೈಲ್‌ನಲ್ಲಿ ನೆಟ್ ಬಳಸುವವರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ (Google Play Store) ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಹೇಳದೆ ಕೇಳದೆ ಖಾಲಿ ಮಾಡುವ ಹಲವು ಅಪ್ಲಿಕೇಶನ್‌ಗಳಿವೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿರುವ ಹಣವನ್ನು ಇಂತಹ ಅಪ್ಪ್ಲಿಕೆಶನ್ ಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ಖಾಲಿಯಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ಸಂದೇಶ ರಾವಾನಿಸಲಾಗಿದೆ. ಸೈಬರ್ ಭದ್ರತೆ ಮತ್ತು ಸಾಫ್ಟ್‌ವೇರ್ ಸಂಸ್ಥೆ ಸೋಫೋಸ್‌ನ ಸಂಶೋಧಕರು ಇಂತಹ  ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಬಹಿರಂಗಪಡಿಸಿದ್ದಾರೆ. ವರದಿಯ ಪ್ರಕಾರ, ಈ ಆಪ್ ಗಳೆಲ್ಲವೂ ಫ್ಲೀಸ್‌ವೇರ್ ಆಪ್ ಗಳಾಗಿದ್ದು,ಇವು ಗೂಗಲ್ ಪ್ಲೇ ಸ್ಟೋರ್‌ನ ನೀತಿ ನಿಯಮಗಳನ್ನು ಉಲ್ಲಂಘಿಸಿವೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಂಟರ್ ನೆಟ್ ಆಪ್ ಗಳ ಮೇಲೆ ಸಂಶೋಧನೆ ನಡೆಸುವ ಸಂಶೋಧಕ ಜಗದೀಶ್ ಚಂದ್ರಿಯಾಹ್, ಗೂಗಲ್ ನಿಂದ ಜಾರಿಗೊಳಿಸಲಾಗಿರುವ ನಿಯಮಗಳ ಪ್ರಕಾರ ಇಂತಹ ಭ್ರಮೆ ಹುಟ್ಟುಹಾಕುವ ಮಾರ್ಕೆಟಿಂಗ್ ಕಾಪಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ ಇವುಗಳ ಕೋಡ್ ನಲ್ಲಿಯೂ ಕೂಡ ಕುಂದುಕೊರತೆಗಲಿದ್ದು, ಅವುಗಳ ಲಾಭ ಪಡೆದು ಸಬಸ್ಕ್ರಿಪ್ಶನ್ ಕ್ಯಾನ್ಸಲ್ ಮಾಡುವ ಮಾರ್ಗವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ. ಮೊಬೈಲ್ ಬಳಕೆದಾರರ ಖಾತೆಗಳಿಂದ ಹಣವನ್ನು ಕದಿಯಲು ಈ ಅಪ್ಲಿಕೇಶನ್‌ಗಳು ಅನೇಕ ಫ್ಲೈಸ್‌ವೇರ್ ವಿಧಾನಗಳನ್ನು ಬಳಸಬಹುದು ಎಂದು ಜಗದೀಶ್ ಹೇಳುತ್ತಾರೆ. ಅನೇಕ ಬಾರಿ, ಉಚಿತ ಚಂದಾದಾರಿಕೆಯ ಬಗ್ಗೆ ವಾಗ್ದಾನ ಮಾಡಿದ ನಂತರವೂ, ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲಾಗುತ್ತದೆ. ಫ್ಲಿಸ್ವೇರ್ ಎನ್ನುವುದು ಒಂದು ರೀತಿಯ ಮಾಲ್ವೇರ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಅದು ಗುಪ್ತ ಚಂದಾದಾರಿಕೆ ಶುಲ್ಕದೊಂದಿಗೆ ಬರುತ್ತದೆ. ಅಪ್ಲಿಕೇಶನ್ ಅನ್ನು ಅಳಿಸಿದ ನಂತರ ಚಂದಾದಾರಿಕೆಯನ್ನು ಹೇಗೆ ರದ್ದುಗೊಳಿಸಬೇಕೆಂದು ತಿಳಿದಿಲ್ಲದ ಬಳಕೆದಾರರನ್ನು ಈ ಅಪ್ಲಿಕೇಶನ್‌ಗಳು ಗುರಿಯಾಗಿಸುತ್ತವೆ.

ನಿಮ್ಮ ಖಾತೆಯಿಂದ ಹಣ ಕದಿಯುವ ಆಪ್ ಗಳ ಪಟ್ಟಿ ಇಲ್ಲಿದೆ

  • com.photoconverter.fileconverter.jpegconverter
  • com.recoverydeleted.recoveryphoto.photobackup
  • com.screenrecorder.gamerecorder.screenrecording
  • com.photogridmixer.instagrid
  • com.compressvideo.videoextractor
  • com.smartsearch.imagessearchcom.emmcs.wallpapper
  • com.wallpaper.work.application
  • com.gametris.wallpaper.application
  • com.tell.shortvideocom.csxykk.fontmoji
  • com.video.magiciancom.el2020xstar.xstar
  • com.dev.palmistryastrology
  • com.dev.furturescopecom.fortunemirror
  • com.itools.prankcallfreelitecom.isocial.fakechatc
  • com.old.mecom.myreplica.celebritylikeme.pro
  • com.nineteen.pokeradar
  • com.pokemongo.ivgocalculator
  • com.hy.gscanner

Trending News