Amith Shah talk on CAA: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ


COMMERCIAL BREAK
SCROLL TO CONTINUE READING

ಕೊರೊನಾ ಸಾಂಕ್ರಾಮಿಕದಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿಳಂಬವಾಗಿದೆ. ತುಳಿತಕ್ಕೊಳಗಾದ ನಾಗರಿಕರಿಗೆ ಪೌರತ್ವದ ಹಕ್ಕಿದೆ. ಅಸಾದುದ್ದೀನ್ ಓವೈಸಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಅಥವಾ ಕೇಜ್ರಿವಾಲ್ ಆಗಿರಲಿ ಎಲ್ಲ ವಿರೋಧ ಪಕ್ಷಗಳೂ ಸುಳ್ಳಿನ ರಾಜಕಾರಣ ಮಾಡುತ್ತಿವೆ. ಆದ್ದರಿಂದ ಸಮಯವು ಮುಖ್ಯವಲ್ಲ” ಎಂದಿದ್ದಾರೆ.


ಇದನ್ನೂ ಓದಿ: ಐಪಿಎಲ್ 2024ರಲ್ಲಿ ಆಡದಿರಲು ರೋಹಿತ್ ಶರ್ಮಾ ನಿರ್ಧರಿಸಿ ಪೋಸ್ಟ್ ಶೇರ್! ಅಸಲಿ ಕಾರಣ ಇದು


2019 ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ “ಸಿಎಎ ತರುತ್ತೇವೆ ಮತ್ತು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಿರಾಶ್ರಿತರಿಗೆ ಪೌರತ್ವ ನೀಡುತ್ತೇವೆ” ಎಂದು ಹೇಳಿತ್ತು.


“2019 ರಲ್ಲಿಯೇ ಈ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೊರೊನಾದಿಂದಾಗಿ ಸ್ವಲ್ಪ ವಿಳಂಬವಾಗಿದೆ. ಪ್ರತಿಪಕ್ಷಗಳು ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಮತಬ್ಯಾಂಕ್ ಬಲಪಡಿಸಲು ಬಯಸುತ್ತಿವೆ. ಸಿಎಎ ಈ ದೇಶದ ಕಾನೂನು ಎಂದು ದೇಶದ ಜನರಿಗೆ ತಿಳಿದಿದೆ. ನಾನು 4 ವರ್ಷಗಳಲ್ಲಿ ಕನಿಷ್ಠ 41 ಬಾರಿ CAA ಜಾರಿಗೆ ತರುವುದಾಗಿ ಮತ್ತು ಚುನಾವಣೆಗೆ ಮುನ್ನ ಹೇಳಿದ್ದೇನೆ” ಎಂದು ಅಮಿತ್ ಶಾ ಹೇಳಿದ್ದಾರೆ.


ಇದನ್ನೂ ಓದಿ: 2011ರಲ್ಲಿ ವಿಶ್ವಕಪ್ ಗೆಲ್ಲುತ್ತಿದ್ದಂತೆ… ತಂದೆಯ ಸ್ನೇಹಿತನ ಮಗಳನ್ನೇ ಪಟಾಯಿಸಿ ಮದುವೆಯಾದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್’ಮನ್ ಈತ!


ಇನ್ನೊಂದೆಡೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಕುರಿತು ವಾಗ್ದಾಳಿ ನಡೆಸಿ, “ನಮ್ಮ ಭಾರತೀಯ ಮಕ್ಕಳಿಗೆ ಉದ್ಯೋಗ ಮತ್ತು ವಸತಿ ನೀಡಲು ಸಾಧ್ಯವಾಗದಿದ್ದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಿರಾಶ್ರಿತರಿಗೆ ನಾವು ಅದನ್ನು ಹೇಗೆ ನೀಡುತ್ತೇವೆ” ಎಂದು ಹೇಳಿದ್ದಾರೆ. “ನನ್ನ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಲಿಲ್ಲ. ಸಿಎಎಗೆ ಮುನ್ನ ನುಸುಳುಕೋರರು ಭಾರತಕ್ಕೆ ಬರಲು ಹೆದರುತ್ತಿದ್ದರು. ಆದರೆ ಈಗ ಅವರಿಗೆ ಭಾರತದಲ್ಲಿ ಪೌರತ್ವ ಖಂಡಿತ ಸಿಗುತ್ತದೆ ಎಂದು ಉತ್ಸುಕರಾಗಿದ್ದಾರೆ. ನಮ್ಮ ದೇಶದ ಜನರ ಹಕ್ಕುಗಳನ್ನು ಕೊಂದು ಅವರಿಗೆ ನೀಡಲಾಗುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.