Rohit Sharma Viral Fake News: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಇದಕ್ಕೂ ಮುನ್ನ ರೋಹಿತ್ ಶರ್ಮಾ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ರೋಹಿತ್ ಶೇರ್ ಮಾಡಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ ಏನು? ಅದರ ಹಿನ್ನೆಲೆ ಸೇರಿದಂತೆ ಸಂಪೂರ್ಣ ವಿವರವನ್ನು ಈ ವರದಿಯಲ್ಲಿ ನೀಡಲಿದ್ದೇವೆ.
ಇದನ್ನೂ ಓದಿ: Daily GK Quiz: ರಷ್ಯಾದಲ್ಲಿ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?
ಮುಂಬೈ ಇಂಡಿಯನ್ಸ್ ಐಪಿಎಲ್ 2024ರ 17ನೇ ಸೀಸನ್’ಗೂ ಮೊದಲು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿತ್ತು. ಅಷ್ಟೇ ಅಲ್ಲದೆ, ಗುಜರಾತ್ ಟೈಟಾನ್ಸ್’ನಿಂದ ಟ್ರೇಡ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕ ಎಂದು ಘೋಷಿಸಿತ್ತು. ಅದಾದ ನಂತರ ಫ್ಯಾನ್ಸ್ ಈ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲದೆ “ಕ್ಷಮಿಸಿ” ಎಂದು ರೋಹಿತ್ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದನ್ನು ಓದಿದ ಅಭಿಮಾನಿಗಳು, ಇನ್ಮುಂದೆ ಹಿಟ್ ಮ್ಯಾನ್ ಕ್ರಿಕೆಟ್ ಆಡಲ್ಲ ಎಂಬೆಲ್ಲಾ ಹೇಳಿಕೆ ನೀಡಲು ಪ್ರಾರಂಭಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ವೈರಲ್ ಆಗಿದ್ದು ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
“ಎಲ್ಲರಿಗೂ ಶುಭೋದಯ, ನಾನು ನಿಮ್ಮೆಲ್ಲರೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ, ನಾನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ಇದರಿಂದಾಗಿ ಈ ಬಾರಿಯ ಐಪಿಎಲ್’ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು ಎಂದು ನನಗೆ ಅನಿಸಿತು. ಜೂನ್’ನಲ್ಲಿ ಪ್ರಾರಂಭವಾಗಲಿರುವ 2024 ರ ಟಿ 20 ವಿಶ್ವಕಪ್’ಗಾಗಿ ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ನನ್ನ ಅತ್ಯುತ್ತಮ ಕೊಡುಗೆ ನೀಡಬೇಕು. ಜೈ ಹಿಂದ್" ಎಂಬ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.
ಸಾಮಾಜಿಕ ಮಾಧ್ಯಮದ ಯುಗದಲ್ಲಿ ಯಾವ ಸುದ್ದಿ ನಿಜ ಮತ್ತು ಯಾವ ಸುದ್ದಿ ಸುಳ್ಳು ಎಂದು ಹೇಳುವುದು ಕಷ್ಟ. ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ರೋಹಿತ್ ಫ್ಯಾನ್ಸ್ ಶಾಕ್ ಆಗಿದ್ದು ಸುಳ್ಳಲ್ಲ.
ಅಷ್ಟಕ್ಕೂ ಈ ಸುದ್ದಿಯ ಖಚಿತತೆಯನ್ನು ಪರಿಶೀಲಿಸಿದಾಗ, ಇದು ಸುಳ್ಳು ಮತ್ತು ನಿರಾಧಾರ ಎಂದು ತಿಳಿದುಬಂದಿದೆ. ರೋಹಿತ್ ಶರ್ಮಾ ಅವರ ಇನ್‌ಸ್ಟಾ ಖಾತೆಯಿಂದ ಅಂತಹ ಯಾವುದೇ ಪೋಸ್ಟ್ ಶೇರ್ ಆಗಿಲ್ಲ. ಹೀಗಿರುವಾಗ ವೈರಲ್ ಆಗುತ್ತಿರುವ ವದಂತಿಗಳಲ್ಲಿ ಸತ್ಯಾಂಶ ಕಾಣುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.