ಗಾಜಿಯಾಬಾದ್: ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಲಕ್ನೋಗೆ ಹೋಗುವ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ 6 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ನಂತರ  ಬೆಂಕಿ ನಂದಿಸಲಾಯಿತು. ಅದಾಗ್ಯೂ ಈ ಘಟನೆಯಿಂದಾಗಿ ರೈಲು ಗಂಟೆಗಟ್ಟಲೆ ನಿಲ್ದಾಣದಲ್ಲಿ ನಿಲ್ಲುವಂತಾಯಿತು.


COMMERCIAL BREAK
SCROLL TO CONTINUE READING

ನವದೆಹಲಿ-ಲಖನೌ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ (Delhi Lucknow Shatabdi Express) ರೈಲಿನ ಕೊನೆಯ ಬೋಗಿಯ ಜನರೇಟರ್ ಕಾರು ಮತ್ತು ಲಗೇಜ್ ಬೋಗಿಯಲ್ಲಿ ಬೆಂಕಿ (Fire) ಕಾಣಿಸಿಕೊಂಡಿರುವುದು ಕಂಡುಬಂದಿದ್ದು, ತಕ್ಷಣವೇ  ರೈಲಿನ ಇನ್ನೊಂದು ಭಾಗವನ್ನು ಬೇರ್ಪಡಿಸಲು ಪ್ರಾರಂಭಿಸಲಾಯಿತು. 


ಮಾರ್ಚ್ ತಿಂಗಳಾಂತ್ಯದವರೆಗೂ ರಾಜಕೀಯ ಕೂಟಗಳನ್ನು ನಿಷೇಧಿಸಿದ ಈ ರಾಜ್ಯ


ನವದೆಹಲಿ-ಲಖನೌ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ (Delhi Lucknow Shatabdi Express) ಬೆಳಿಗ್ಗೆ 6: 45 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. "ಬೆಂಕಿ ಕಾಣಿಸಿಕೊಂಡಿದ್ದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬೆಳಿಗ್ಗೆ 8: 20 ಕ್ಕೆ ರೈಲು ನಿಲ್ದಾಣದಿಂದ ಹೊರಟಿತು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಒಂದೇ ದಿನದಲ್ಲಿ ಮುಂಬೈನಲ್ಲಿ 3,062 ಕೊರೊನಾ ಪ್ರಕರಣಗಳು ದಾಖಲು


ಬೆಂಕಿಯ ಕಾರಣ ಸ್ಪಷ್ಟವಾಗಿಲ್ಲ :
ಮುಖ್ಯ ಅಗ್ನಿಶಾಮಕ ಅಧಿಕಾರಿ ಸುಶೀಲ್ ಕುಮಾರ್ ಮಾತನಾಡಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಶತಾಬ್ದಿ ಎಕ್ಸ್‌ಪ್ರೆಸ್‌ನ ಜನರೇಟರ್ ಕಾರು ಮತ್ತು ಪಾರ್ಸೆಲ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳು ಅಧಿಕಾರಿಗಳು ತಕ್ಷಣವೇ ಜನರೇಟರ್ ಕಾರನ್ನು ರೈಲಿನಿಂದ ಬೇರ್ಪಡಿಸಿದರು. 4 ಅಗ್ನಿಶಾಮಕ ಯಂತ್ರಗಳು ಕಿಟಕಿ ಮುರಿದು ಬೆಂಕಿಯನ್ನು ನಂದಿಸಿದವು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಕಾರಣ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.