Indian Railways: ತನ್ನ ಯಾತ್ರಿಗಳಿಗೆ ಮತ್ತೊಂದು ಉಡುಗೊರೆ ನೀಡಿದ ಭಾರತೀಯ ರೇಲ್ವೆ
Indian Railways: ರೈಲು ಮುಂಬಯಿಯ ಸಿಎಎಸ್ಎಂಟಿಯಿಂದ ಸಂಜೆ 4 ಗಂಟೆಗೆ ಹೊರಟು ದೆಹಲಿಯ ನಿಜಾಮುದ್ದೀನ್ ನಿಲ್ದಾಣಕ್ಕೆ ಬೆಳಗ್ಗೆ 9.55 ಕ್ಕೆ ತಲುಪಲಿದೆ. ಅಂದರೆ ಮೊದಲಿಗಿಂತ 55 ನಿಮಿಷ ಬೇಗ ರೈಲು ನಿಲ್ದಾಣ ತಲುಪಲಿದೆ.
ನವದೆಹಲಿ: Indian Railways-ದೆಹಲಿ ಹಾಗೂ ಮುಂಬೈ ನಡುವೆ ಪ್ರಯಾಣ ಬೆಳೆಸುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಸೂಪರ್ ಫಾಸ್ಟ್ ರೈಲು ರಾಜಧಾನಿ ಎಕ್ಸ್ ಪ್ರೆಸ್ ಜನವರಿ 9 ರಿಂದ ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ತನ್ನ ಗಮ್ಯಸ್ಥಾನಕ್ಕೆ ತಲುಪಲಿದೆ ಎಂದು ಭಾರತೀಯ ರೇಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್, 'ಜನವರಿ 9 ರಿಂದ ಮುಂಬೈ ಮತ್ತು ದೆಹಲಿ ನಡುವಿನ ರಾಜಧಾನಿ ಎಕ್ಸ್‌ಪ್ರೆಸ್‌ನಿಂದ ಪ್ರಯಾಣಿಸುವವರು ಪರಿಷ್ಕೃತ ಸಮಯ ಮತ್ತು ಹೆಚ್ಚುವರಿ ನಿಲ್ದಾಣಗಳೊಂದಿಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಮ್ಮ ಗಮ್ಯಸ್ಥಾನವನ್ನು ಮೊದಲಿಗಿಂತ ವೇಗವಾಗಿ ತಲುಪಲಿದ್ದಾರೆ. ಇದು ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ ಮತ್ತು ಇದರಿಂದ ಅವರಿಗೆ ಸೌಲಭ್ಯ ಕೂಡ ಸಿಗಲಿದೆ' ಎಂದಿದ್ದಾರೆ.
IRCTC/Indian Railways:ಟ್ರೈನ್ ನಲ್ಲಿ ಸೀಟ್ ಸಿಗಲಿಲ್ಲವೇ? ಸಿಗಲಿದೆ ಬಸ್ ಸೇವೆ
ಈ ಬಗ್ಗೆ ಮಾಹಿತಿ ನೀಡಿರುವ ರೇಲ್ವೆ ಇಲಾಖೆಯ (Indian Railway) ಅಧಿಕಾರಿಯೊಬ್ಬರು, ಹಜರತ್ ನಿಜಾಮುದ್ದೀನ್-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ಇದೀಗ 35 ನಿಮಿಷ ಮೊದಲೇ ಮುಂಬೈ ತಲುಪಲಿದೆ. ರಾಜಧಾನಿ ಸೂಪರ್ ಫಾಸ್ಟ್ ರೈಲು ನಿಜಾಮುದ್ದೀನ್ ನಿಂದ ಸಂಜೆ 4.55ಕ್ಕೆ ರವಾನೆಯಾಗಲಿದ್ದು, ಬೆಳಗ್ಗೆ 11.15ಕ್ಕೆ ಮುಂಬೈ ನಿಲ್ದಾಣ ತಲುಪಲಿದೆ. ಈ ಮೊದಲು ಈ ಅಂತರ ಕ್ರಮಿಸಲು ರೈಲಿಗೆ 35 ನಿಮಿಷ ಹೆಚ್ಚುವರಿ ಕಾಲಾವಕಾಶ ಬೇಕಾಗುತ್ತಿತ್ತು ಮತ್ತು ಬೆಳಗ್ಗೆ 11.50ರ ಸುಮಾರಿಗೆ ಈ ರೈಲು ತನ್ನ ಗಮ್ಯಸ್ಥಾನ ಸೇರುತ್ತಿತ್ತು.
ಇದನ್ನು ಓದಿ - ಈ ನಗರದಿಂದ Kempegowda International Airport ತಲುಪಲು ಕೇವಲ 15 ರೂ. ಸಾಕು!
ಈ ರೈಲು ಸಂಜೆ 4 ಗಂಟೆಗೆ ಮುಂಬೈ ನಿಲ್ದಾಣದಿಂದ ರವಾನೆಯಾಗಲಿದ್ದು ಮಾರನೆಯದಿನ ಬೆಳಗ್ಗೆ 9.55 ರ ಸುಮಾರಿಗೆ ಇದು ನಿಜಾಮುದ್ದೀನ್ ಸ್ಟೇಷನ್ ತಲುಪಲಿದೆ. ಮೊದಲಿನ ಕಾಲಾವಕಾಶದ ಹೋಲಿಕೆಯಲ್ಲಿ ಇದು 55 ನಿಮಿಷ ಮುಂಚಿತವಾಗಿದೆ. ಇದಕ್ಕೂ ಮೊದಲು ಈ ರೈಲು ಬೆಳಗ್ಗೆ 11 ಗಂಟೆಗೆ ದೆಹಲಿ ನಿಲ್ದಾಣ ತಲುಪುತ್ತಿತ್ತು.
ಇದನ್ನು ಓದಿ-Good News : ಜನವರಿ 4ರಿಂದ Mysore-Bangalore ಪ್ಯಾಸೆಂಜರ್ ರೈಲು ಸೇವೆ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.