ಈ ನಗರದಿಂದ Kempegowda International Airport ತಲುಪಲು ಕೇವಲ 15 ರೂ. ಸಾಕು!

Bengaluru City to Kempegowda International Airport: ನೈ ರುತ್ಯ ರೈಲ್ವೆ ಸೋಮವಾರದಿಂದ ಮುಖ್ಯ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ದೇವನಹಳ್ಳಿ ನಡುವೆ ರೈಲು ಸಂಚಾರ.

Written by - Yashaswini V | Last Updated : Jan 5, 2021, 03:02 PM IST
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ನಡುವೆ ಇಂದಿನಿಂದ ವಿಶೇಷ ರೈಲು ಆರಂಭ
  • ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಈಶಾನ್ಯಕ್ಕೆ 40 ಕಿ.ಮೀ ದೂರದಲ್ಲಿದೆ
  • ಮೆಜೆಸ್ಟಿಕ್​ನಲ್ಲಿರುವ (Mejestic) ರೈಲ್ವೆ ನಿಲ್ದಾಣದಿಂದ ಹಾಲ್ಟ್​ ಸ್ಟೇಷನ್​ಗೆ 50 ನಿಮಿಷ
ಈ ನಗರದಿಂದ Kempegowda International Airport ತಲುಪಲು ಕೇವಲ 15 ರೂ. ಸಾಕು! title=
Bengaluru City to Kempegowda International Airport (Image courtesy: ANI)

ಬೆಂಗಳೂರು : Bengaluru City to Kempegowda International Airport: ನೀವು ಬೆಂಗಳೂರು ವಿಮಾನ ನಿಲ್ದಾಣದಿಂದ (ಬೆಂಗಳೂರು ನಗರ) ಪ್ರಯಾಣಿಸುತ್ತಿದ್ದರೆ, ವಿಮಾನ ನಿಲ್ದಾಣದಿಂದ ಬೆಂಗಳೂರು ನಗರವನ್ನು ತಲುಪುವುದು ನಿಮಗೆ ತುಂಬಾ ಸುಲಭ ಮತ್ತು ಅಗ್ಗವಾಗಿದೆ. 

ವಾಸ್ತವವಾಗಿ ಸೌತ್ ವೆಸ್ಟರ್ನ್ ರೈಲ್ವೆ (ಎಸ್‌ಡಬ್ಲ್ಯುಆರ್) ಸೋಮವಾರದಿಂದ ನಗರಕ್ಕೆ ಎರಡೂ ಕಡೆಯಿಂದ ವಿಮಾನ ಪ್ರಯಾಣಿಕರನ್ನು ಸಾಗಿಸಲು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬಳಿ ಮುಖ್ಯ ನಗರ ನಿಲ್ದಾಣ ಮತ್ತು ದೇವನಹಳ್ಳಿ ನಡುವೆ ರೈಲು ಸೇವೆಯನ್ನು ಆರಂಭಿಸಿದೆ. 

ನಗರದ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ನಡುವೆ ಇಂದಿನಿಂದ ಆರಂಭವಾದ ವಿಶೇಷ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ (PC Mohan) ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿದರು. ಈ ಸೌಲಭ್ಯದಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ 10ರಿಂದ 15 ರೂ. ದರದಲ್ಲಿ ಏರ್​ಪೋರ್ಟ್​ ತಲುಪಲು ಸಾಧ್ಯವಿದೆ. ಇದರಿಂದ ದುಬಾರಿ ಹಣ ತೆತ್ತು ವೋಲ್ವೋ ಬಸ್​, ಕ್ಯಾಬ್​ಗಳಲ್ಲಿ ಹೋಗುವುದು ತಪ್ಪಿದಂತಾಗಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Hubli - Ahmedabad ನಡುವಿನ ವಿಮಾನಯಾನ ಸೇವೆ ಇಂದಿನಿಂದ ಮತ್ತೆ ಆರಂಭ

ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್​ನಿಂದ ಏರ್​ಪೋರ್ಟ್​ಗೆ ದಿನಕ್ಕೆ ಮೂರು ಜೋಡಿ ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ಹಾಲ್ಟ್ ನಿಲ್ದಾಣದ ನಡುವೆ ಚಲಿಸಲಿವೆ. ಒನ್ ವೇ ಪ್ರಯಾಣಕ್ಕೆ ಶುಲ್ಕ 15 ರೂಪಾಯಿ ಎಂದು ವಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಮಾನ ನಿಲ್ದಾಣವು ನಗರದಿಂದ 40 ಕಿಲೋಮೀಟರ್ ದೂರದಲ್ಲಿದೆ (The airport is 40 kilometers from the city) :
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಈಶಾನ್ಯಕ್ಕೆ 40 ಕಿ.ಮೀ ದೂರದಲ್ಲಿದೆ. ಮೊದಲ ರೈಲು ಕೆಎಸ್‌ಆರ್‌ನಿಂದ ಮುಂಜಾನೆ 4.45 ಕ್ಕೆ ಹೊರಟು ಬೆಳಿಗ್ಗೆ 5.50 ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಸುದ್ದಿಯ ಪ್ರಕಾರ ನಗರದ ಉತ್ತರ ಉಪನಗರದಲ್ಲಿರುವ ಬೆಂಗಳೂರು-ಧರ್ಮವರಂ ಮಾರ್ಗದಲ್ಲಿರುವ ಯಲಹಂಕ ನಿಲ್ದಾಣದಿಂದ ದೇವನಹಳ್ಳಿ (Devanahalli) ಹಾಲ್ಟ್ ನಿಲ್ದಾಣದವರೆಗೆ ಮತ್ತೊಂದು ಜೋಡಿ ರೈಲುಗಳು ಚಲಿಸಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಒನ್ ವೇ ಪ್ರಯಾಣದ ಶುಲ್ಕ 10 ರೂಪಾಯಿ ಎಂದು ಹೇಳಲಾಗಿದೆ.

ಇದನ್ನೂ ಓದಿ : ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಪ್ರವೇಶ: ಅರ್ಜಿ ಆಹ್ವಾನ

ಮೆಜೆಸ್ಟಿಕ್​ನಲ್ಲಿರುವ (Mejestic) ರೈಲ್ವೆ ನಿಲ್ದಾಣದಿಂದ ಹಾಲ್ಟ್​ ಸ್ಟೇಷನ್​ಗೆ 50 ನಿಮಿಷಗಳು ಬೇಕಾಗುತ್ತವೆ. ಮುಂದೆ ಈ ಅವಧಿಯನ್ನು ಕಡಿಮೆಗೊಳಿಸಲು ಸ್ಟಾಪ್​ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರು ಡೆಮು ರೈಲುಗಳಿಗೆ ಸಹ ಅನುಮತಿ (DEMU trains were also granted permission)
ಇದರೊಂದಿಗೆ ರೈಲ್ವೆ ಮಂಡಳಿಯು ಎಸ್‌ಡಬ್ಲ್ಯುಆರ್‌ಗೆ ಮೂರು ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡಿಎಂಯು) ರೈಲುಗಳನ್ನು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಓಡಿಸಲು ಅನುಮತಿ ನೀಡಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ನಾಲ್ಕನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣವನ್ನು 71000 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ ಮತ್ತು ಪ್ರಯಾಣಿಕರ ಟರ್ಮಿನಲ್ ಸಂಪೂರ್ಣ ಹವಾನಿಯಂತ್ರಿತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News