ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಈ ವೇಳೆ ಜನರು ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಸಿಎಂ ಕೇಜ್ರಿವಾಲ್‌(Arvind Kejriwal), ಇಂದಿನಿಂದ ಶೇ. 50ರಷ್ಟು ಪ್ರಯಾಣಿಕರೊಂದಿಗೆ ಮೆಟ್ರೊ ರೈಲುಗಳು ಸಂಚರಿಸಲಿವೆ. ಸಮ-ಬೆಸ ಸಂಖ್ಯೆಯ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್‌ಗಳು ತೆರೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Credit Card Payment ಬಾಕಿ ಇದೆಯೇ? ಪಾವತಿಸಲು ಖಾತೆಯಲ್ಲಿ ಹಣವಿಲ್ಲವೇ? ಇಲ್ಲಿದೆ ಸುಲಭ ಮಾರ್ಗ


ದೆಹಲಿ(Delhi)ಯಲ್ಲಿ ಬಹುತೇಕ ಚಟುವಟಿಕೆಗಳು ಆರಂಭಗೊಳ್ಳಲಿವೆ. ಆದರೆ ಸೋಂಕನ್ನು ನಿಯಂತ್ರಿಸಲು ನಾವೆಲ್ಲರೂ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳನ್ನು ಶುಚಿಗೊಳಿಸುವುದನ್ನು ಮಾಡುತ್ತಿರಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು' ಎಂದು ಟ್ವೀಟ್‌ ಮಾಡಿದ್ದಾರೆ.


EPFO Alert! ಇಪಿಎಫ್‌ಒ ಖಾತೆದಾರರೇ ತಕ್ಷಣವೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಷ್ಟವಾಗಬಹುದು


ನಾವು ಕೊರೋನಾ(Corona) ಸೋಂಕಿನಿಂದಲೂ ದೂರವಿರಬೇಕು. ಇದರೊಂದಿಗೆ ಆರ್ಥಿಕತೆಯನ್ನು ಸರಿ ದಾರಿಗೆ ತರಬೇಕು' ಎಂದು ತಿಳಿಸಿದ್ದಾರೆ.


ಮಾಲ್‌ಗಳು(Shopping Malls), ಮಾರುಕಟ್ಟೆ ಮತ್ತು ಮಾರುಕಟ್ಟೆ ಮಳಿಗೆಗಳು(ಸಾಪ್ತಾಹಿಕ ಮಾರುಕಟ್ಟೆಗಳನ್ನು ಹೊರತುಪಡಿಸಿ) ಸೋಮವಾರದಿಂದ ಸಮ-ಬೆಸ ಸಂಖ್ಯೆಯ ಆಧಾರದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ.


ಇದನ್ನೂ ಓದಿ : ಕರೋನಾ ಸಂಖ್ಯೆಯಲ್ಲಿ ಗಣನೀಯ ಇಳಿಮುಖ..!ಅನ್ ಲಾಕ್ ನತ್ತ ಭಾರತ


ಮೆಟ್ರೊ ಸೇವೆ ಆರಂಭ : ಮೇ 20ರಿಂದ ಡಿಎಂಆರ್‌ಸಿ(DMRC) ಮೆಟ್ರೊ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಇದೀಗ ಕೊರೊನಾ ಪ್ರಕರಣಗಳು ಇಳಿಕೆಯಾದ್ದರಿಂದ ಸೋಮವಾರದಿಂದ ಮೆಟ್ರೊ ಸೇವೆಗಳು ಆರಂಭಗೊಂಡಿದೆ.


ಇದನ್ನೂ ಓದಿ : Income Tax New Portal ಇಂದಿನಿಂದ ಆರಂಭ, ತೆರಿಗೆದಾರರಿಗೆ ಲಭ್ಯವಾಗಲಿದೆ 7 ಹೊಸ ವೈಶಿಷ್ಟ್ಯ


ಬುಧವಾರದಿಂದ ಮೆಟ್ರೊ(Delhi Metro) ರೈಲುಗಳ ಸಂಖ್ಯೆಯನ್ನು ಏರಿಸಲಾಗುವುದು. ಕೇವಲ ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಎರಡು ಸೀಟುಗಳ ನಡುವೆ ಅಂತರವಿರಲಿದೆ. ಒಟ್ಟು ಸಾಮರ್ಥ್ಯಕ್ಕಿಂತ ಶೇಕಡ 10-15 ರಷ್ಟು ಜಾಗವನ್ನು ಬಳಸಲಾಗುವುದು' ಎಂದು ಡಿಎಂಆರ್‌ಸಿ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ