ನವದೆಹಲಿ: EPFO Aadhaar Link- ನೌಕರರ ಭವಿಷ್ಯ ನಿಧಿ ಸಂಸ್ಥೆ (Employees Provident Fund Organization) ಜೂನ್ 1 ರಿಂದ ಪಿಎಫ್ ಖಾತೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಎಲ್ಲಾ ಇಪಿಎಫ್ ಖಾತೆಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಇಪಿಎಫ್ಒ (EPFO) ಕಡ್ಡಾಯಗೊಳಿಸಿದೆ. ಯಾವುದೇ ಖಾತೆದಾರದು ತಮ್ಮ ಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ಅವರ ಉದ್ಯೋಗದಾತರ ಪಿಎಫ್ ಕೊಡುಗೆಯನ್ನು ನಿಲ್ಲಿಸಲಾಗುತ್ತದೆ. ಅಂದರೆ, ಪಿಎಫ್ ಖಾತೆಯಲ್ಲಿ ನೌಕರರ ಕೊಡುಗೆ ಮಾತ್ರ ಬರುತ್ತದೆ ಎಂದು ಹೇಳಲಾಗಿದೆ.
ಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ:
ನಿಮ್ಮ ಪಿಎಫ್ ಖಾತೆ ಆಧಾರ್ನೊಂದಿಗೆ ಲಿಂಕ್ ಆಗದಿದ್ದರೆ ಉದ್ಯೋಗದಾತರಿಗೆ ಪಿಎಫ್ ಖಾತೆಗಳಲ್ಲಿ ಇಸಿಆರ್ (Electronic Challan cum Return) ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರ ಪಿಎಫ್ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಧಾರ್ ಲಿಂಕ್ ಮಾಡಲು ಇಪಿಎಫ್ಒ (EPFO) ತನ್ನ ಎಲ್ಲ ಚಂದಾದಾರರಿಗೆ ಮಾಹಿತಿ ನೀಡಿದೆ. ಎಲ್ಲಾ ಉದ್ಯೋಗದಾತರು ತಮ್ಮ ಎಲ್ಲಾ ಆಧಾರ್ ಪರಿಶೀಲಿಸಿದ ಇಪಿಎಫ್ ಖಾತೆದಾರರ ಯುಎಎನ್ (UAN) ಸಂಗ್ರಹಿಸಲು ಇಪಿಎಫ್ಒ ನಿರ್ದೇಶಿಸಿದೆ.
ಹೊಸ ನಿಯಮದ ಪ್ರಕಾರ, ಆಧಾರ್ನೊಂದಿಗೆ ನಿಮ್ಮ ಖಾತೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಉದ್ಯೋಗದಾತರಿಗೆ ಈಗ ನೀಡಲಾಗಿದೆ. ಆದ್ದರಿಂದ, ಈಗ ಇಪಿಎಫ್ ಖಾತೆದಾರರು ತಮ್ಮ ಕಂಪನಿಯಿಂದ ಇಪಿಎಫ್ಒ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕು ಮತ್ತು ಕಂಪನಿಯು ತಮ್ಮ ಇಪಿಎಫ್ ಖಾತೆ ಮತ್ತು ಯುಎಎನ್ನ ಆಧಾರ್ ಪರಿಶೀಲನೆಯನ್ನು ಮಾಡದಿದ್ದರೆ, ತಕ್ಷಣ ಅದನ್ನು ಪೂರ್ಣಗೊಳಿಸಿ.
ಇದನ್ನೂ ಓದಿ - EPFO Good News: ಜುಲೈ ತಿಂಗಳಿನಲ್ಲಿ ಸಿಗುತ್ತಾ ಬಡ್ಡಿ? EPFOಗೆ ಸಿಕ್ತು ಕಾರ್ಮಿಕ ಸಚಿವಾಲಯದ ಅನುಮತಿ
ಇಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಹೇಗೆ?
ಇದಲ್ಲದೆ, ನಿಮ್ಮ ಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ (EPFO Aadhaar Link) ಮಾಡದಿದ್ದರೆ, ನೀವು ಇಪಿಎಫ್ಒನ ಇತರ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ ಇಪಿಎಫ್ಒ ಈ ಆದೇಶ ಹೊರಡಿಸಿದೆ. ತಮ್ಮ ಪಿಎಫ್ ಖಾತೆ ಮತ್ತು ಆಧಾರ್ ಅನ್ನು ಇನ್ನೂ ಲಿಂಕ್ ಮಾಡದ ನೌಕರರು, ಅವರು ಇಂದೇ ಈ ಕೆಲಸವನ್ನು ಪೂರ್ಣಗೊಳಿಸಿ. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.
ಇದನ್ನೂ ಓದಿ - PF ಖಾತೆದಾರರಿಗೆ 5 ಪ್ರಯೋಜನಗಳ ಲಾಭ : ಇಲ್ಲಿದೆ ನೋಡಿ!
ಇಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಇದು ಸುಲಭವಾದ ಮಾರ್ಗವಾಗಿದೆ:
1. ಮೊದಲು ನೀವು ಇಪಿಎಫ್ಒ ವೆಬ್ಸೈಟ್ www.epfindia.gov.in ಗೆ ಲಾಗ್ ಇನ್ ಆಗಬೇಕು.
2. ಇದರ ನಂತರ, ಆನ್ಲೈನ್ ಸೇವೆಗಳಿಗೆ ಹೋಗುವ ಮೂಲಕ, ಇ-ಕೆವೈಸಿ ಪೋರ್ಟಲ್ ಕ್ಲಿಕ್ ಮಾಡಿ ಮತ್ತು ನಂತರ ಯುಎಎನ್ ಆಧಾರ್ ಅನ್ನು ಲಿಂಕ್ ಮಾಡಿ.
3. ಯುಎಎನ್ ಖಾತೆಯಲ್ಲಿ ನೋಂದಾಯಿಸಲಾದ ನಿಮ್ಮ ಯುಎಎನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ಅಪ್ಲೋಡ್ ಮಾಡಬೇಕು.
4. ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಸಂಖ್ಯೆ ಬರುತ್ತದೆ.
5. ಆಧಾರ್ ಪೆಟ್ಟಿಗೆಯಲ್ಲಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ
6. ನಂತರ Proceed to OTP verification ಎಂದು ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
7. ಆಧಾರ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು, ಮೊಬೈಲ್ ಸಂಖ್ಯೆಯನ್ನು ಅಥವಾ ಆಧಾರ್ನೊಂದಿಗೆ ಲಿಂಕ್ ಮಾಡಲಾದ ಮೇಲ್ನಲ್ಲಿ ಒಟಿಪಿ ರಚಿಸಬೇಕಾಗಿದೆ.
8. ಪರಿಶೀಲನೆಯ ನಂತರ, ನಿಮ್ಮ ಆಧಾರ್ ಅನ್ನು ನಿಮ್ಮ ಪಿಎಫ್ ಖಾತೆಗೆ ಲಿಂಕ್ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.