ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆಯ ಜಿಲ್ಲಾ ಉಪಮುಖ್ಯಸ್ಥ ಸಂಜಯ್ ಭೋಸ್ಲೆ ಅವರು ಅಸ್ಸಾಂನ ಗುವಾಹಟಿಗೆ ಆಗಮಿಸಿದ್ದಾರೆ. ಪಕ್ಷದ ಶಾಸಕ ಏಕನಾಥ್ ಶಿಂಧೆ ಅವರನ್ನು ಮರಳಿ ಪಕ್ಷಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ, ಪೊಲೀಸರು ಅವರನ್ನು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತಡೆದಿದ್ದಾರೆ. ಇನ್ನು ಸಂಜಯ್ ಭೋಸ್ಲೆ ಪೊಲೀಸರ ಮಾತಿಗೆ ಸುತಾರಂ ಗಮನಕೊಡದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Oukitel WP19- ಫುಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್


ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಸತಾರಾದಿಂದ ಶಿವಸೇನೆ ನಾಯಕ ಸಂಜಯ್ ಭೋಸ್ಲೆ ಕೈಯಲ್ಲಿ ಪೋಸ್ಟರ್ ಹಿಡಿದು ರಾಡಿಸನ್ ಬ್ಲೂ ಹೋಟೆಲ್‌ಗೆ ಆಗಮಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ಮರಾಠಿಯಲ್ಲಿ 'ಶಿವಸೇನೆ ಜಿಂದಾಬಾದ್, ಏಕನಾಥ್ ಶಿಂಧೆ ಭಾಯ್ ವಾಪಾಸ್‌ ಮಾತೋಶ್ರೀ ಚಲೋʼ ಎಂದು ಬರೆಯಲಾಗಿದೆ. 


ಮಹಾರಾಷ್ಟ್ರದ ರಾಜಕೀಯ ಪ್ರಕ್ಷುಬ್ಧತೆಯು ತೀವ್ರವಾಗಿದೆ. ಬಂಡಾಯ ಶಿವಸೇನೆ ಸಚಿವ ಏಕನಾಥ್ ಶಿಂಧೆ ಜೊತೆ 40 ಮಂದಿ ಶಾಸಕರಿದ್ದಾರೆ. ಈ ಪೈಕಿ 34 ಮಂದಿ ಶಿವಸೇನೆ ಮತ್ತು 6 ಮಂದಿ ಪಕ್ಷೇತರರು ಎನ್ನಲಾಗಿದೆ. ಎಲ್ಲಾ 40 ಶಾಸಕರು ವಿಶೇಷ ವಿಮಾನದ ಮೂಲಕ ಗುವಾಹಟಿಗೆ ಬಂದಿಳಿದಿದ್ದಾರೆ.  


ಇದನ್ನೂ ಓದಿ: ಈ ಸ್ಮಾರ್ಟ್ ಫೋನ್ ಗಳನ್ನೂ ಸುಲಭವಾಗಿ ಹ್ಯಾಕ್ ಮಾಡುವ ಹ್ಯಾಕರ್‌ಗಳು ..!


ಗುವಾಹಟಿ ತಲುಪುವ ಮುನ್ನ ಶಿಂಧೆ ಹೇಳಿದ್ದೇನು? :
ಗುವಾಹಟಿಗೆ ತೆರಳುವ ಮುನ್ನ ಏಕನಾಥ್ ಶಿಂಧೆ ಸೂರತ್ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ್ದರು. ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂದು ಹೇಳಿದ್ದಾರೆ. ತಾವು  ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವವನ್ನು ಅನುಸರಿಸಿಕೊಂಡು ಮುಂದುವರೆಯುವುದಾಗಿ ಹೇಳಿದ್ದರು. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಲು ಶಿಂಧೆ ಮತ್ತು ಇತರ ಶಾಸಕರು ಬಿಜೆಪಿ ಸೇರಬಹುದು ಎಂಬ ಊಹಾಪೋಹದ ನಡುವೆಯೇ ಏಕನಾಥ್ ಶಿಂಧೆ ಅವರ ಈ ಹೇಳಿಕೆ ಬಂದಿದೆ. ಆದರೆ, ಉದ್ಧವ್ ಠಾಕ್ರೆ ಮತ್ತು ಅವರ ಸರ್ಕಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.