Indian Railway Tweet A Video: ವ್ಯಕ್ತಿಯೋರ್ವ ಆಯತಪ್ಪಿ ಹಳಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಪ್ರಾಣ ಪಣಕ್ಕಿಟ್ಟ ಘಟನೆಯೊಂದು ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಹಳಿಯ ಮೇಲೆ ವ್ಯಕ್ತಿಯೋರ್ವ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಓಡಿಬಂದಿದ್ದಾನೆ. ಇನ್ನು ರೈಲು ಬರುವ ಮುನ್ನವೇ ಆತನನ್ನು ಕಾಪಾಡಲಾಗಿದೆ. ರಕ್ಷಿಸಲ್ಪಟ್ಟ ಕೆಲವು ಸೆಕೆಂಡುಗಳಲ್ಲಿ ಅದೇ ಹಳಿಯ ಮೂಲಕ ಅತಿ ವೇಗದಲ್ಲಿ ರೈಲು ಹಾದುಹೋಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: Snake Viral Video: ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಹುಷಾರ್!
24 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ರೈಲ್ವೇ ಉದ್ಯೋಗಿ ಎಚ್ ಸತೀಶ್ ಕುಮಾರ್ ಅವರು ಮುಂಬರುವ ಗೂಡ್ಸ್ ರೈಲನ್ನು ಫ್ಲ್ಯಾಗ್ ಆಫ್ ಮಾಡಲು ಪ್ಲಾಟ್‌ಫಾರ್ಮ್ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಹಿಂತಿರುಗಿ ನೋಡಿದಾಗ ಯಾರೋ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆಂದು ಅರಿವಾಗುತ್ತದೆ. ತಡಮಾಡದೆ ಸತೀಶ್ ತಕ್ಷಣವೇ ಪ್ಲಾಟ್‌ಫಾರ್ಮ್ ಕಡೆಗೆ ಓಡಿ ಟ್ರ್ಯಾಕ್ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಹಳಿಯಿಂದ ಹೊರಗೆ ಕರೆದೊಯ್ದಿದ್ದಾರೆ. ವ್ಯಕ್ತಿಯನ್ನು ರಕ್ಷಿಸಲ್ಪಟ್ಟ ಕೆಲವೇ ಸೆಕೆಂಡುಗಳಲ್ಲಿ ರೈಲು ಅದೇ ಹಳಿಯಿಂದ ಹಾದುಹೋಗಿದೆ. ಸತೀಶ್ ಸಮಯಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ.
सेवा, सुरक्षा और सहयोग
A precious life was saved by the courageous act of help by on-duty staff, who jumped on tracks himself to save a person from getting gravely injured.
Indian Railways is proud to have daring & diligent staff like H. Satish Kumar and commends his bravery. pic.twitter.com/gcnHCrtXg4— Ministry of Railways (@RailMinIndia) June 23, 2022
ಸತೀಶ್ ಕುಮಾರ್ ಅವರು ಕೆಲವು ಸೆಕೆಂಡುಗಳು ತಡ ಮಾಡಿದ್ದರೂ ಸಹ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು. ಇನ್ನು ವ್ಯಕ್ತಿ ಆಕಸ್ಮಿಕವಾಗಿ ಬಿದ್ದಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ರೈಲ್ವೆ ಹಳಿ ಮೇಲೆ ಹಾರಿದ್ದಾನೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಟ್ರೈಲರ್ ಲಾಂಚ್‌ನಲ್ಲಿ ಕಿಚ್ಚ ತೊಟ್ಟಿದ್ದ ಜಾಕೆಟ್ ಬೆಲೆ ಎಷ್ಟು ಗೊತ್ತಾ?
'ಸೇವೆ, ಭದ್ರತೆ ಮತ್ತು ಸಹಕಾರ. ರೈಲ್ವೆ ಸಿಬ್ಬಂದಿಯ ಸಾಹಸದಿಂದ ಅಮೂಲ್ಯವಾದ ಜೀವವನ್ನು ಉಳಿಸಲಾಗಿದೆ. ಭಾರತೀಯ ರೈಲ್ವೇಯು ಎಚ್ ಸತೀಶ್ ಕುಮಾರ್ ಅವರಂತಹ ಧೈರ್ಯಶಾಲಿ ಮತ್ತು ಶ್ರಮಶೀಲ ಉದ್ಯೋಗಿಗಳ ಬಗ್ಗೆ ಹೆಮ್ಮೆಪಡುತ್ತದೆ. ಅವರ ಧೈರ್ಯವನ್ನು ಶ್ಲಾಘಿಸುತ್ತದೆ" ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮೂಲಕ ಹೇಳಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.