ದೇಶದ ಮೊದಲ ಐಎಎಸ್ ಅಧಿಕಾರಿ ಯಾರು ಗೊತ್ತಾ? 21ನೇ ವಯಸ್ಸಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಗ್ಗೆ ತಿಳಿಯಿರಿ
1854ರಲ್ಲಿ ನಾಗರಿಕ ಸೇವಾ ಆಯೋಗದ ಸ್ಥಾಪನೆಯ ನಂತರ 1855ರಲ್ಲಿ ಲಂಡನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆರಂಭಿಸಲಾಯಿತು.
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಶುಕ್ರವಾರ (ಸೆ.24) 2020ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ (UPSC Civil Services result 2020) ಫಲಿತಾಂಶ ಪ್ರಕಟಿಸಿದೆ. 545 ಪುರುಷರು ಮತ್ತು 216 ಮಹಿಳೆಯರು ಸೇರಿ ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಬಿಹಾರದ ಕತಿಹಾರ್ ಜಿಲ್ಲೆಯ ನಿವಾಸಿ ಶುಭಂ ಕುಮಾರ್ ಅಗ್ರಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
2020ನೇ ಸಾಲಿನಲ್ಲಿ ಒಟ್ಟು 18 ಮಂದಿ ಕನ್ನಡಿಗರು ಯುಪಿಎಸ್‌ಸಿ ಪರೀಕ್ಷೆ(UPSC Exam)ಯಲ್ಲಿ ತೇರ್ಗಡೆ ಹೊಂದಿದ್ದು, ಕರ್ನಾಟಕದ ಅಕ್ಷಯ್ ಸಿಂಹ ದೇಶಕ್ಕೆ 77ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಅತ್ಯಂತ ಕಠಿಣ ಪರೀಕ್ಷೆ ಎಂದೇ ಪರಿಗಣಿಸಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪ್ರತಿಯೊಬ್ಬ ಅಭ್ಯರ್ಥಿಯು ಕಷ್ಟಪಟ್ಟು ಓದಿದ್ದಾರೆ. ಈ ಮೂಲಕ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಿದ್ಧರಾಗಿದ್ದಾರೆ. ನಿಮಗೆ ಗೊತ್ತೆ..? ಭಾರತದ ಮೊದಲ ಐಎಎಸ್ ಅಧಿಕಾರಿ (1st IAS Officer of India) ಯಾರೆಂದು? ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?
1854ರಲ್ಲಿ ನಾಗರಿಕ ಸೇವಾ ಪರೀಕ್ಷೆ ಆರಂಭಿಸಲಾಯಿತು
Upsc.gov.in ಪ್ರಕಾರ, ಬ್ರಿಟಿಷರು ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು 1854ರಲ್ಲಿ ಪ್ರಾರಂಭಿಸಿದರು. ಇದು ಲಾರ್ಡ್ ಮೆಕಾಲೆ ಸಂಸತ್ತಿನ ಆಯ್ಕೆ ಸಮಿತಿಯ ವರದಿಯ ನಂತರ ಪ್ರಾರಂಭವಾಯಿತು. ಹಿಂದಿನ ನಾಗರೀಕ ಸೇವಾ ಅಧಿಕಾರಿಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ನೋಂದಾಯಿಸಿಕೊಂಡಿದ್ದರು. ಅವರಿಗೆ ಲಂಡನ್‌ನ ಹೈಲಿಬರಿ ಕಾಲೇಜಿ (Haileybury College)ನಲ್ಲಿ ತರಬೇತಿ ನೀಡಿದ ನಂತರ ಭಾರತಕ್ಕೆ ಕಳುಹಿಸಲಾಗುತ್ತಿತ್ತು. 1854ರಲ್ಲಿ ನಾಗರಿಕ ಸೇವಾ ಆಯೋಗದ ಸ್ಥಾಪನೆಯ ನಂತರ 1855ರಲ್ಲಿ ಲಂಡನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆರಂಭಿಸಲಾಯಿತು. ಇದಕ್ಕೆ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 23 ವರ್ಷಗಳು ಇತ್ತು. ಆದರೆ ಭಾರತೀಯರಿಗೆ ಈ ಪರೀಕ್ಷೆಗಳು ತುಂಬಾ ಕಷ್ಟಕರವಾಗಿತ್ತು.
ಇದನ್ನೂ ಓದಿ: ಕಾರು ವಿಮಾ ಪಾಲಿಸಿ ಖರೀದಿಸುವ ಮೊದಲು ತಿಳಿದುಕೊಳ್ಳಿ ಈ ನಿಯಮಗಳನ್ನು, ಇಲ್ಲದಿದ್ದರೆ ಕ್ಲೈಮ್ ತಿರಸ್ಕೃತವಾಗಬಹುದು
ಭಾರತದ ಮೊದಲ ಐಎಎಸ್ ಅಧಿಕಾರಿ ಯಾರು?
ರವೀಂದ್ರನಾಥ ಟ್ಯಾಗೋರ್(Rabindranath Tagore) ಅವರ ಹಿರಿಯ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರು 1864ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸತ್ಯೇಂದ್ರನಾಥ ಟ್ಯಾಗೋರ್ ಐಎಎಸ್ ಅಧಿಕಾರಿಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಪರೀಕ್ಷೆಯ ಸಿದ್ಧತೆಗಾಗಿ 1862ರಲ್ಲಿ ಭಾರತದಿಂದ ಇಂಗ್ಲೆಂಡಿಗೆ ತೆರಳಿದರು. ಬಳಿಕ 1863ರಲ್ಲಿ ನಾಗರಿಕ ಸೇವೆಗಳಿಗೆ ಆಯ್ಕೆಯಾದರು ಮತ್ತು 1864ರಲ್ಲಿ ಇಂಗ್ಲೆಂಡಿನಲ್ಲಿ ತರಬೇತಿ ಅವಧಿ ಮುಗಿಸಿದ ನಂತರ ಭಾರತಕ್ಕೆ ಮರಳಿದರು. ಇವರೇ ಅಧಿಕೃತವಾಗಿ ಭಾರತದ ಮೊದಲ ಐಎಎಸ್ ಅಧಿಕಾರಿ. ಇದರ ನಂತರ ಅವರನ್ನು ಬಾಂಬೆ ಪ್ರೆಸಿಡೆನ್ಸಿಯಲ್ಲಿ ನೇಮಿಸಲಾಯಿತು ಮತ್ತು ಕೆಲವು ತಿಂಗಳ ನಂತರ ಅಹಮದಾಬಾದ್ ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು.
1842ರಂದು ಜನಿಸಿದ ಸತ್ಯೇಂದ್ರನಾಥ ಟ್ಯಾಗೋರ್
ಸತ್ಯೇಂದ್ರನಾಥ ಟ್ಯಾಗೋರ್(Satyendranath Tagore) 1 ಜೂನ್ 1842 ರಂದು ಜನಿಸಿದರು. ಅವರು ಹಿಂದೂ ಶಾಲೆಯಲ್ಲಿ ಅಧ್ಯಯನ ಮಾಡಿದರು. 1857 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಪರೀಕ್ಷೆಗೆ ಹಾಜರಾದ ಮೊದಲ ವಿದ್ಯಾರ್ಥಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇನ್ನು ಅಗ್ಗವಾಗಲಿದೆ ಬೆಲೆ..! ಸರ್ಕಾರದ ಈ ಪೋರ್ಟಲ್ ನಿಂದ ಗ್ರಾಹಕರಿಗೆ ಸಿಗಲಿದೆ ಅನೇಕ ಪ್ರಯೋಜನಗಳು
ಸತ್ಯೇಂದ್ರನಾಥ ಟ್ಯಾಗೋರ್(Satyendranath Tagore) ಕೇವಲ 17ನೇ ವಯಸ್ಸಿನಲ್ಲಿ ಜ್ಞಾನಾನಂದಿನಿ ದೇವಿಯನ್ನು ವಿವಾಹವಾದರು. ಇವರು ಐಎಎಸ್ ಅಧಿಕಾರಿಯಾದಾಗ ಅವರ ವಯಸ್ಸು ಸುಮಾರು 21 ವರ್ಷಗಳು. ಅವರು ತಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸಿದರು. ಅವರು ಸಾಹಿತ್ಯಿಕ ಶ್ರೀಮಂತ ಕುಟುಂಬದಿಂದ ಬಂದವರು, ಆದ್ದರಿಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರು. ಉತ್ತಮ ಅಧಿಕಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.