ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕಟ್ಟಡ ಕಾರ್ಮಿಕನ ಮಗಳು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರಿಗೆ ಜೀವಮಾನದ ಕನಸಾಗಿದೆ, ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.

Written by - Zee Kannada News Desk | Last Updated : Sep 25, 2021, 07:44 PM IST
  • ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರಿಗೆ ಜೀವಮಾನದ ಕನಸಾಗಿದೆ, ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
  • ಈಗ ಅಂತಹದ್ದೇ ಸಾಧನೆಯನ್ನು ಕೇರಳದ ಅವಸ್ಥಿ ಎಸ್ ಮಾಡಿದ್ದಾರೆ.ಮೂಲತಃ ಕಟ್ಟಡ ಕಾರ್ಮಿಕ ಮಗಳಾಗಿರುವ ಅವರು ಈಗ ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ 481 ರ್ಯಾಂಕ್ ನ್ನು ಗಳಿಸಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕಟ್ಟಡ ಕಾರ್ಮಿಕನ ಮಗಳು  title=
Photo Courtesy: ANI

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರಿಗೆ ಜೀವಮಾನದ ಕನಸಾಗಿದೆ, ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.

ಈಗ ಅಂತಹದ್ದೇ ಸಾಧನೆಯನ್ನು ಕೇರಳದ ಅವಸ್ಥಿ ಎಸ್ ಮಾಡಿದ್ದಾರೆ.ಮೂಲತಃ ಕಟ್ಟಡ ಕಾರ್ಮಿಕ ಮಗಳಾಗಿರುವ ಅವರು ಈಗ ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ 481 ರ್ಯಾಂಕ್ ನ್ನು ಗಳಿಸಿದ್ದಾರೆ."ಕಳೆದ 15 ವರ್ಷಗಳಿಂದ ನಾಗರೀಕ ಸೇವಕನಾಗಬೇಕೆಂಬುದು ನನ್ನ ಕನಸಾಗಿತ್ತು. ಐಎಎಸ್ ಅಧಿಕಾರಿಯಾಗಬೇಕೆಂಬುದು ನನ್ನ ಕನಸಾಗಿತ್ತು, ಹಾಗಾಗಿ ನನ್ನ ಕನಸನ್ನು ಸಾಧಿಸಲು ನಾನು ಮತ್ತೊಮ್ಮೆ ಪರೀಕ್ಷೆ ಬರೆಯಲು ಯೋಜಿಸಿದೆ" ಎಂದು ಅಶ್ವತಿ ಹೇಳಿದ್ದಾರೆ.

ಇದನ್ನೂ ಓದಿ: ಟೀನಾ ಡಾಬಿ ಸಹೋದರಿ ರಿಯಾಗೆ ಯುಪಿಎಸ್‌ಸಿಯಲ್ಲಿ 15 ನೇ ರ್ಯಾಂಕ್

ಏತನ್ಮಧ್ಯೆ, ಹಿಂದಿನ ದಿನ, ಅಮೆರಿಕದಲ್ಲಿದ್ದಾಗ ಮತ್ತು ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಮರೆಯಲಿಲ್ಲ ಮತ್ತು ಸಾರ್ವಜನಿಕ ಸೇವೆಯಲ್ಲಿ ಉತ್ತೇಜಕ ಮತ್ತು ತೃಪ್ತಿಕರ ವೃತ್ತಿಜೀವನವು ಮುಂದುವರಿಯುತ್ತದೆ ಎಂದು ಹೇಳಿದರು.

ಇದನ್ನೂ ಓದಿ: EPFO 2020 ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ UPSC; ಡೌನ್ ಲೋಡ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

ಇದೆ ವೇಳೆ ಅವರು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸದೆ ಇರುವಂತಹ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತನ್ನು ಆಡಿದರು."ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಯುವ ಸ್ನೇಹಿತರಿಗೆ, ನಾನು ಹೇಳಲು ಬಯಸುತ್ತೇನೆ- ನೀವು ತುಂಬಾ ಪ್ರತಿಭಾವಂತ ವ್ಯಕ್ತಿಗಳು.ಹೆಚ್ಚಿನ ಪ್ರಯತ್ನಗಳು ಕಾಯುತ್ತಿವೆ.ಅದೇ ಸಮಯದಲ್ಲಿ ಭಾರತವು ವೈವಿಧ್ಯಮಯ ಅವಕಾಶಗಳಿಂದ ಕೂಡಿದೆ. ನೀವು ಏನೇ ಮಾಡಲು ನಿರ್ಧರಿಸಿದರೂ ಶುಭಾಶಯಗಳು"ಎಂದು ಹೇಳಿದ್ದರು.

ಒಟ್ಟು 761 ಅಭ್ಯರ್ಥಿಗಳಲ್ಲಿ - 545 ಪುರುಷರು ಮತ್ತು 216 ಮಹಿಳೆಯರು ನಾಗರಿಕ ಸೇವಕರಲ್ಲಿ ತೇರ್ಗಡೆಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News