ಇನ್ನು ಅಗ್ಗವಾಗಲಿದೆ ಬೆಲೆ..! ಸರ್ಕಾರದ ಈ ಪೋರ್ಟಲ್ ನಿಂದ ಗ್ರಾಹಕರಿಗೆ ಸಿಗಲಿದೆ ಅನೇಕ ಪ್ರಯೋಜನಗಳು

ತೈಲ ಬೀಜಗಳ ಬೆಲೆ ಮತ್ತು ಸ್ಟಾಕ್ ಬಗ್ಗೆ ವಿವರವಾದ ಮಾಹಿತಿ ಈ ವಿಶೇಷ ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ, ಸಾಪ್ತಾಹಿಕ ಅಪ್ಡೇಟ್‌ ಗಳನ್ನು ಕೂಡಾ ನೀಡಲಾಗುವುದು. ಡೇಟಾವನ್ನು ಪ್ರತಿ ವಾರ ಈ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

Written by - Ranjitha R K | Last Updated : Sep 27, 2021, 03:09 PM IST
  • ಖಾದ್ಯ ತೈಲ ಪೋರ್ಟಲ್ ಸೋಮವಾರದಿಂದ ಕಾರ್ಯನಿರ್ವಹಿಸಲಿದೆ
  • 13 ಬಗೆಯ ಎಣ್ಣೆ ಮತ್ತು ಬೀಜಗಳ ವಿವರಗಳನ್ನು ಇಲ್ಲಿ ನೀಡಬೇಕಾಗುತ್ತದೆ
  • ಎಣ್ಣೆಬೀಜಗಳ ಬೆಲೆ ಮತ್ತು ದಾಸ್ತಾನನ್ನು ವಾರಕ್ಕೊಮ್ಮೆ ನವೀಕರಿಸಬೇಕಾಗುತ್ತದೆ
 ಇನ್ನು ಅಗ್ಗವಾಗಲಿದೆ ಬೆಲೆ..! ಸರ್ಕಾರದ ಈ ಪೋರ್ಟಲ್ ನಿಂದ ಗ್ರಾಹಕರಿಗೆ ಸಿಗಲಿದೆ ಅನೇಕ ಪ್ರಯೋಜನಗಳು title=
ಖಾದ್ಯ ತೈಲ ಪೋರ್ಟಲ್ ಸೋಮವಾರದಿಂದ ಕಾರ್ಯನಿರ್ವಹಿಸಲಿದೆ (file photo)

ನವದೆಹಲಿ: ದೀರ್ಘಕಾಲದಿಂದ ಬೆಲೆ ಏರಿಕೆಯಿಂದ (Price hike) ಬಳಲುತ್ತಿರುವ ಜನ ಸಾಮಾನ್ಯರಿಗೆ ನಿಟ್ಟುಸಿರು ಬಿಡುವಂಥಹ ಸುದ್ದಿ ಇದು.  ಖಾದ್ಯ ತೈಲವನ್ನು(Edible Oil) ಅನಧಿಕೃತವಾಗಿ ಸಂಗ್ರಹಿಸುವವರ ವಿರುದ್ಧ ಕಠಿಣ ತಂತ್ರವನ್ನೇ ಸರ್ಕಾರ ರೂಪಿಸಿದೆ. ಈ ಅನುಕ್ರಮದಲ್ಲಿ, ಈಗ ಸರ್ಕಾರವು ಖಾದ್ಯ ತೈಲ ಪೋರ್ಟಲ್ (Edible oil portal) ಅನ್ನು ಸಿದ್ಧಪಡಿಸಿದೆ. ಈ ಖಾದ್ಯ ತೈಲ ಪೋರ್ಟಲ್ ಅನ್ನು ಸೋಮವಾರದಿಂದ ಜಾರಿಗೆ ತರಲಿದೆ.  

ತೈಲ ಬೀಜಗಳ ಬೆಲೆ ಮತ್ತು ಸ್ಟಾಕ್ ಬಗ್ಗೆ ವಿವರವಾದ ಮಾಹಿತಿ ಈ ವಿಶೇಷ ಪೋರ್ಟಲ್ ನಲ್ಲಿ (Edible oil portal) ಲಭ್ಯವಿರುತ್ತದೆ. ಇದರೊಂದಿಗೆ, ಸಾಪ್ತಾಹಿಕ ಅಪ್ಡೇಟ್‌ ಗಳನ್ನು ಕೂಡಾ ನೀಡಲಾಗುವುದು. ಡೇಟಾವನ್ನು ಪ್ರತಿ ವಾರ ಈ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದರೆ, ಇನ್ನು ಇಲ್ಲಿ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿರುವುದಿಲ್ಲ. ಇದಕ್ಕಾಗಿ, ಉತ್ಪಾದಕರು  ತಮ್ಮ ಲಾಗಿನ್ ಅನ್ನು ರಚಿಸಬೇಕಾಗುತ್ತದೆ. ಸರ್ಕಾರದ ಇಲಾಖೆಗಳು ಇದರ ಮೇಲ್ವಿಚಾರಣೆ ಮಾಡುತ್ತವೆ. ಇದರಿಂದ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ತೈಲ ಬೆಲೆಯೂ (Edible oil price) ನಿಯಂತ್ರಣದಲ್ಲಿರುತ್ತದೆ ಎಂದು ಹೇಳಿದೆ ಸರ್ಕಾರ. 

ಇದನ್ನೂ ಓದಿ : ಕಾರು ವಿಮಾ ಪಾಲಿಸಿ ಖರೀದಿಸುವ ಮೊದಲು ತಿಳಿದುಕೊಳ್ಳಿ ಈ ನಿಯಮಗಳನ್ನು, ಇಲ್ಲದಿದ್ದರೆ ಕ್ಲೈಮ್ ತಿರಸ್ಕೃತವಾಗಬಹುದು

 ಸೋಮವಾರದಿಂದ ಪೋರ್ಟಲ್ ಆರಂಭ‌ : 
ವ್ಯಾಪಾರಿಗಳು ಮತ್ತು ಕೈಗಾರಿಕೆಗಳು ಈ  ಪೋರ್ಟಲ್‌ ಮೂಲಕ ತಮ್ಮ ಸ್ಟಾಕ್ ಬಹಿರಂಗಪಡಿಸಬಹುದು. ಇದನ್ನು ರಾಜ್ಯ ಸರ್ಕಾರ ಮೇಲ್ವಿಚಾರಣೆ ಮಾಡುತ್ತದೆ. ಖಾದ್ಯ ತೈಲ ಮತ್ತು ತೈಲ ಬೀಜಗಳ (oil seeds) ಸಂಗ್ರಹಕ್ಕಾಗಿ ಮಾತ್ರ ಸರ್ಕಾರ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸುತ್ತಿದೆ. ಇದು ಅನಧಿಕೃತ ಸಂಗ್ರಹವನ್ನು ತಡೆಯಲು ಸ ಹಾಯ ಮಾಡುತ್ತದೆ. ಇದಕ್ಕಾಗಿ ಸರ್ಕಾರ ಶುಕ್ರವಾರ ಸಭೆ ನಡೆಸಿತ್ತು. ಈ ಸಭೆಯಲ್ಲಿ ಸರ್ಕಾರದ ಈ ಪೋರ್ಟಲ್‌ ಬಗ್ಗೆ ತರಬೇತಿ ನೀಡಲಾಗಿದೆ. ಅಲ್ಲದೆ, ಸಂಪೂರ್ಣ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀಡಲಾಗಿದೆ.

ಶುಕ್ರವಾರದ ತರಬೇತಿ  :
ರಾಜ್ಯಗಳ ಜಂಟಿ ಕಾರ್ಯದರ್ಶಿಗಳು ಮತ್ತು ಆಹಾರ ಕಾರ್ಯದರ್ಶಿಗಳು ಮತ್ತು ಆಹಾರ ಆಯುಕ್ತರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಖಾದ್ಯ ತೈಲ ಸಂಸ್ಕರಣಾ ಸಂಘಗಳ ಪ್ರತಿನಿಧಿಗಳು (Edible Oil Processing Associations) ಸಭೆಯಲ್ಲಿ ಹಾಜರಿದ್ದರು. ಈ ಸಭೆಯಲ್ಲಿ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ. ಎಲ್ಲಾ ರೀತಿಯಲ್ಲೂ ಚರ್ಚೆ ನಡೆದ ಬಳಿಕ ಈ ಪೋರ್ಟಲ್  ಗೆ ಸಹಮತು ಸೂಚಿಸಲಾಗಿದೆ.  

ಇದನ್ನೂ ಓದಿ : Changes From 1st October: ಅಕ್ಟೋಬರ್ 1ರಿಂದ ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News