Coronavirus ಸೊಂಕಿತರನ್ನು ಪತ್ತೆ ಹಚ್ಚುತ್ತವಂತೆ ಈ ನಾಯಿಗಳು...!
ಫಿನ್ಲ್ಯಾಂಡ್ ನಲ್ಲಿ ನಾಯಿಗಳು ಕೊರೊನಾ ವೈರಸ್ ಸೋಂಕಿನ ಪತ್ತೆ ಮಾಡುತ್ತಿವೆಯಂತೆ. ಟ್ರೇನಿಂಗ್ ಬಳಿಕ ಈ ನಾಯಿಗಳನ್ನು ತರಬೇತುದಾರರ ಜೊತೆಗೆ ಅಲ್ಲಿನ ಹೆಲ್ಸಂಕಿ ಏರ್ಪೋರ್ಟ್ ನಲ್ಲಿ ನಿಯೋಜಿಸಲಾಗಿದೆ.
ಹೆಲ್ಸಿಂಕಿ: ಫಿನ್ಲ್ಯಾಂಡ್ ನಲ್ಲಿ ಕೊರೊನಾ ವೈರಸ್ (Coronavirus) ಸೋಂಕಿನ ಪತ್ತೆಗಾಗಿ ಶ್ವಾನಗಳಿಗೆ ಟ್ರೇನಿಂಗ ನೀಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಲ್ಲಿನ ಅಧಿಕಾರಿಗಳು ಪೈಲಟ್ ಪ್ರಾಜೆಕ್ಟ್ ಅಡಿ ಏರ್ಪೋರ್ಟ್ ನಲ್ಲಿ ಈ ಶ್ವಾನಗಳನ್ನು ನಿಯೋಜಿಸಲಾಗಿದೆ. ಈ ಕೆಲಸಕ್ಕಾಗಿ ಅಲ್ಲಿ 15 ನಾಯಿಗಳು ಹಾಗೂ 10 ತರಬೇತುದಾರರನ್ನು ನಿಯೋಜಿಸಲಾಗಿದೆ. ಹೆಸ್ಲ್ಸಿಂಕಿ-ವಂತಾ ಏರ್ಪೋರ್ಟ್ ನಲ್ಲಿ ಈ ವಾರದ ಆರಂಭದಿಂದ ಯಾತ್ರಿಗಳ ವಾಸನೆಯನ್ನು ಗ್ರಹಿಸಿ ಈ ನಾಯಿಗಳು ಕೊರೊನಾ ಸೋಂಕಿನ ಪತ್ತೆ ಹಚ್ಚಲು ಆರಂಭಿಸಿವೆ.
ಇದನ್ನು ಓದಿ- Elon Musk ನೂತನ ಯೋಜನೆ, ಮೆದುಳು ನಿಯಂತ್ರಿಸುವ ಚಿಪ್ ನಲ್ಲಿ ನೆನಪುಗಳ Back-UP ಪಡೆಯಬಹುದಂತೆ
ನಾಯಿಗಳಿಂದ ಕೋರೋನಾ ಸೋಂಕಿನ ಪತ್ತೆ
ವಿಜ್ಞಾನಿಗಳು ನಡೆಸಿರುವ ಶೋಧದಲ್ಲಿ ಸಾಮಾನ್ಯ ಟೆಸ್ಟಿಂಗ್ ಹೋಲಿಕೆಯಲ್ಲಿ ನಾಯಿಗಳ ಮೂಲಕ ಟೆಸ್ಟಿಂಗ್ ಪ್ರಭಾವಿ ಎಂದು ಹೇಳಲಾಗಿಲ್ಲ. ಆದರೂ ಕೂಡ ಹೆಲ್ಸಂಕಿಯಿಂದ ಪ್ರಯಾಣ ಕೈಗೊಳ್ಳುವ ಯಾತ್ರಿಗಳಿಗೆ ಶಂಕಿತ ಕೊರೊನಾ ರೋಗಿಗಳ ಪತ್ತೆಗೆ ಈ ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲ ಸೋಂಕನ್ನು ದೃಢಪಡಿಸಲು ಸ್ವಾಬ್ ಟೆಸ್ಟ್ ಪರಿಣಾಮಗಳಿಗೆಯೇ ಮಾನ್ಯತೆ ನೀಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಕೊರೊನಾ ಸೋಂಕಿನ ಪತ್ತೆಗಾಗಿ ನಿಯೋಜಿಸಲಾಗಿರುವ ನಾಯಿಗಳು ಹಾಗೂ ತರಬೇತುದಾರರನ್ನು ವಾಲೆಂಟಿಯರ್ ಗಳ ರೂಪದಲ್ಲಿ ಟ್ರೇನಿಂಗ ನೀಡಲಾಗುತ್ತಿದೆ. ಇವುಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದು ಕೆಲಸ ನಿರ್ವಹಿಸುತ್ತಿದೆ.
ಇದನ್ನು ಓದಿ- ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಈ ನಕ್ಷತ್ರ ಆಕಸ್ಮಿಕವಾಗಿ ಕಣ್ಮರೆಯಾಗಿದ್ದಾದರೂ ಏಕೆ?
ಸೋಂಕಿನ ಪತ್ತೆಗಾಗಿ ನಿಯೋಜಿಸಲಾಗಿರುವ ಶ್ವಾನಗಳಲ್ಲಿ ಸ್ಪೇನ್ ನಿಂದ ರೆಸ್ಕ್ಯೂ ಮಾಡಲಾಗಿರುವ ಕೊಸಿ ಹೆಸರಿನ ಒಂದು ಶ್ವಾನ ಕೂಡ ಇದೆ. ಈ ಕುರಿತು ಹೇಳಿಕೆ ನೀಡಿರುವ ಹೆಲ್ಸಿಂಕಿ ವಿಶ್ವವಿದ್ಯಾಲಯದ ಪ್ರೊಫೆಸ್ಸರ್ ಹೆಮ್ ಜೋರ್ಕ್ ಮನ್, "ನಾವು ಸಂಶೋಧನೆ ಮೂಲಕ ಕಂಡುಕೊಂಡಿರುವ ಹಾಗೆ ನಾಯಿಗಳು ಯಾವುದೇ ಕ್ಲಿನಿಕಲ್ ಟ್ರಯಲ್ ಗೂ ಐದು ದಿನ ಮುಂಚಿತವಾಗಿ ಸೋಂಕಿನ ಪತ್ತೆ ಹಚ್ಚುತ್ತವೆ" ಎಂದಿದ್ದಾರೆ. ಇದರಲ್ಲಿ ನಾಯಿಗಳ ರಕ್ಷಣೆಯ ಕುರಿತು ಕೂಡ ನಿಗಾವಹಿಸಲಾಗುತ್ತದೆ ಹಾಗೂ ಶ್ವಾನಗಳು ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತವೆ ಎಂದು ಪ್ರೊಫೆಸ್ಸರ್ ಹೇಳಿದ್ದಾರೆ.
ಇದನ್ನು ಓದಿ- Car Showroom ನಲ್ಲಿ ನೌಕರಿ ಗಿಟ್ಟಿಸಿದ ಶ್ವಾನ, ಗ್ರಾಹಕರ ಜೊತೆಗೆ ನೇರವಾಗಿ ಡೀಲ್ ನಡೆಸುತ್ತಂತೆ
ತರಬೇತಿಯ ಬಳಿಕ ಏರ್ಪೋರ್ಟ್ ನಲ್ಲಿ ಈ ಶ್ವಾನಗಳನ್ನು ನಿಯೋಜಿಸಲಾಗಿದೆ
ಶ್ವಾನಗಳ ವೈರಸ್ ಪತ್ತೆ ಕ್ಷಮತೆಯನ್ನು ಕುರಿತು ಮಾತನಾಡುವ ಅವರು " ನಾವು ಶೇ.100 ರಷ್ಟು ಸಂವೇದನಾಶೀಲತೆಯ ಹತ್ತಿರಕ್ಕೆ ತಲುಪಿದ್ದೇವೆ" ಎಂದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಯುಎಇ ನಲ್ಲಿಯೂ ಕೂಡ ಇದೆ ರೀತಿಯ ಪ್ರಯೋಗವನ್ನು ಏರ್ಪೋರ್ಟ್ ನಲ್ಲಿ ನಡೆಸಲಾಗಿದೆ. ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಧಿಕಾರಿಗಳು ಪೋಲೀಸ್ ಶ್ವಾನಗಳನ್ನು ಶಂಕಿತ ಕೊರೊನಾ ಪ್ರಕರಣಗಳನ್ನು ಪತ್ತೆಹಚ್ಚಲು ಬಳಸಿದ್ದರು.