ನವದೆಹಲಿ: ನಿಮ್ಮ ನೆನಪನ್ನು ನೀವು ಬ್ಯಾಕ್ ಆಪ್ ಆಗಿ ಪಡೆದುಕೊಳ್ಳಬಹುದೇ? ಚಿಪ್ ಸಹಾಯದಿಂದ ನೀವು ನಿಮ್ಮ ಮೆದುಳನ್ನು ನಿಯಂತ್ರಿಸಲು ಸಾಧ್ಯವೇ. ಹಲವು ರೋಗಗಳನ್ನು ಗುಣಪಡಿಸಬಹುದೇ? ಒಂದು ಚಿಪ್ ನಿಮ್ಮ ಮೆದುಳನ್ನು ಆಪರೇಟ್ ಮಾಡಬಹುದೇ? ಇದೆಲ್ಲವೂ ಕೇಳಲು ವಿಚಿತ್ರ ಎನಿಸಬಹುದು. ಆದರೆ, ಇದು ಸಾಧ್ಯ. ಇದು ಯಾವುದೇ ಒಂದು ಸೈಂಟಿಫಿಕ್ ಫಿಕ್ಷನ್ ಚಿತ್ರದ ಸೀನ್ ಅಲ್ಲ,. ಎಲಾನ್ ಮಸ್ಕ ಭವಿಷ್ಯದಲ್ಲಿ ಇದನ್ನು ನಿಜವಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. Elon Musk US ಮೂಲದ ಓರ್ವ ಉದ್ಯಮಿ. ಎಲೆಕ್ಟ್ರಿಕ್ ಕಾರ್ ಎಂಬ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತಂದ ಈ ಮಹಾನ್ ಉದ್ಯಮಿ ಪ್ರಸ್ತುತ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ.
ಎಲಾನ್ ಮಸ್ಕ್ ಮಾಲೀಕತ್ವದ ಕಂಪನಿ ನ್ಯೂರಾಲಿಂಕ್ (Neuralink) ಕಳೆದ ಹಲವು ವರ್ಷಗಳಿಂದ ಮನುಷ್ಯರ ಮೆದುಳನ್ನು ಓದುವ ಚಿಪ್ ತಯಾರಿಸುವಲ್ಲಿ ನಿರತವಾಗಿದೆ. ಪ್ರಸ್ತುತ ಕಂಪನಿ ಹಂದಿಗಳ ಮೆದುಳಿಗೆ ಚಿಪ್ ಅಳವಡಿಸಿ ಪ್ರಯೋಗ ನಡೆಸುವಲ್ಲಿ ನಿರತವಾಗಿದೆ. ಅಷ್ಟೇ ಅಲ್ಲ ನಾಣ್ಯದ ಗಾತ್ರದ ಈ ಚಿಪ್ ಅನ್ನು ವರಾಹಗಳ ಮೆದುಳಿಗೆ ಅಳವಡಿಸಿ ಪ್ರದರ್ಶನ ಕೂಡ ನಡೆಸಿದೆ. ಮುಂಬರುವ ದಿನಗಳಲ್ಲಿ ಇದನ್ನು ಮನುಷ್ಯರ ಮೆದುಳಿಗೂ ಕೂಡ ಅಳವಡಿಸಬಹುದಾಗಿದೆ. ತಲೆಬುರುಡೆಯ ಸರ್ಜರಿ ನಡೆಸಿ ಇದನ್ನು ಮಾನವರ ಮೆದುಳಿಗೆ ಅಳವಡಿಸಬಹುದಾಗಿದೆ.
ಈ ಚಿಪ್ ಬಿಡುಗಡೆಯ ಸಮಾರಂಭದಲ್ಲಿ ಇಲೋನ್ ಮಸ್ಕ್ ಒಟ್ಟು ಮೂರು ವಿಧದ ಹಂದಿಗಳ ಪ್ರದರ್ಶನ ನಡೆಸಿದ್ದಾರೆ. ಇವುಗಳಲ್ಲಿ ಮೊದಲನೆಯ ಹಂದಿಗೆ ಚಿಪ್ ಅಳವಡಿಸಲಾಗಿತ್ತು. ಎರಡನೆಯ ಹಂದಿಯ ಮೆದುಳಿನಲ್ಲಿ ಚಿಪ್ ಅನ್ನು ಅಳವಡಿಸಿ ತೆಗೆಯಲಾಗಿತ್ತು. ಆದರೆ, ಮೂರನೆಯ ಹಂದಿಯ ಮೆದುಳಿಗೆ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿರಲಿಲ್ಲ. ನ್ಯೂರಾಲಿಂಕ್ ತಂಡ ಹೇಳುವ ಪ್ರಕಾರ ಹಂದಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದೆ. ಚಿಪ್ ಅಳವಡಿಸಲಾಗಿದ್ದ Gertrud ಹೆಸರಿನ ಹಂದಿಯ ಮೆದುಳಿನಲ್ಲಿ ನಡೆಯುತ್ತಿರುವ ಯೋಚನೆ ಹಾಗೂ ವಿಚಾರಗಳನ್ನು ವೈರ್ ಲೆಸ್ ಸಿಗ್ನಲ್ ಸಹಾಯದಿಂದ ಕಂಪ್ಯೂಟರ್ ನಲ್ಲಿ ವಿಕ್ಷೀಸಬಹುದಾಗಿದೆ.
ಸ್ಟಾರ್ಟ್ ಆಪ್ ಹೇಳುವ ಪ್ರಕಾರ ಅವರು ಅಭಿವೃದ್ಧಿಗೊಳಿಸಿರುವ ಚಿಪ್ ನಲ್ಲಿ ಒಟ್ಟು 3000 ಎಲೆಕ್ಟ್ರಾಡ್ಸ್ ಗಳನ್ನು ಅಳವಡಿಸಲಾಗಿದೆ. ಇವು ಮಾನವನ ಮೆದುಳಿನ 1000 ನ್ಯೂರಾನ್ ಗಳನ್ನು ಓದುವ ಕ್ಷಮತೆ ಹೊಂದಿವೆ. ಅಂದರೆ, ಶರೀರದ ಚಲನವಲನ, ಮಾತುಕತೆ ಹಾಗೂ ಇತರೆ ಚಟುವಟಿಕೆಗಳನ್ನು ನಿಯಂತ್ರಿಸುವ ಸಿಗ್ನಲ್ ಗಳನ್ನು ಇದು ಶೇಖರಣೆ ಮಾಡಬಹುದು.
ಚಿಪ್ ಮೂಲಕ ಹಲವು ರೋಗಗಳನ್ನು ನಿಯಂತ್ರಿಸಬಹುದು
ಎಲೋನ್ ಮಸ್ಕ್ ಅವರ ಪ್ರಕಾರ, ಅವರ ಈ ಪಾತ್ ಬ್ರೇಕಿಂಗ್ ಚಿಪ್ ಮೂಲಕ ಮಾನವನ ಮೆದುಳಿನ ಸಂಕೇತಗಳನ್ನು ಓದಲು ಸಾಧ್ಯವಾಗಲಿದೆ. ಇದರಿಂದಾಗಿ ಸ್ಮರಣೆಯ ಬ್ಯಾಕಪ್ ಸಾಧ್ಯವಿದೆ, ಅಂದರೆ ಮೆಮೊರಿ-ಸಂಬಂಧಿತ ಕಾಯಿಲೆಗಳು, ಬೆನ್ನುಹುರಿ ಮತ್ತು ಚಲನೆಗೆ ಸಂಬಂಧಿಸಿದ ಕಾಯಿಲೆಗಳನ್ನು ಇದರಿಂದ ಗುಣಪಡಿಸಬಹುದಾಗಿದೆ. ಆದರೆ, ಈ ರೀತಿಯ ಚಿಪ್ ಅಪಾರ ರೀತಿಯ ಪ್ರಮಾಣದ ಹಾನಿ ಕೂಡ ಉಂಟು ಮಾಡಲಿದೆ ಎಲೋನ್ ಮಸ್ಕ್ ನಂಬುತ್ತಾರೆ. ಏಕೆಂದರೆ, ಮೆದುಳನ್ನು ಕಂಟ್ರೋಲ್ ಮಾಡುವ ಭರದಲ್ಲಿ ಯಾವುದೇ ವ್ಯಕ್ತಿಯನ್ನು ಸೈಂಟಿಫಿಕ್ ರೀತಿಯಲ್ಲಿ ನಿಯಂತ್ರಿಸುವ ಸಾಧ್ಯತೆ ಅಲ್ಲಗಳೆಯಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ.