Smoking Inside Indigo Flight: ವಿಮಾನದಲ್ಲಿ ಪ್ರಯಾಣಿಸುವ ವೇಳೆ ವಾಶ್ ರೂಂಗೆ ತೆರಳಿ ಧೂಮಪಾನ ಮಾಡಿದ ಹಿನ್ನೆಲೆ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಸಿಬ್ಬಂದಿಗಳ ವಶಕ್ಕೆ ಒಪ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರಯಾಣಿಕ ಸುವಂ ಶುಕ್ಲಾ ಎಂಬುವಾತ ದುಬೈಯಿಂದ ಕೊಲ್ಕತ್ತಾಕ್ಕೆ ಪ್ರಯಾಣಿಸುವಾಗ ಏರ್‌ಕ್ರಾಫ್ಟ್ ರೂಲ್ಸ್‌ಗಳ ಉಲ್ಲಂಘನೆ ಮಾಡಿ ವಿಮಾನದ ವಾಶ್‌ ರೂಂನಲ್ಲಿ ಧೂಮಪಾನ ಮಾಡಿದ್ದ. ಘಟನೆ ವಿಮಾನದಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದ ತಕ್ಷಣ ಪೈಲೆಟ್‌ಗೆ ಮಾಹಿತಿ ತಿಳಿಸುವ ಮೂಲಕ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳಿಗೆ ಒಪ್ಪಿಸಲಾಗಿದೆ.


ಇದನ್ನು ಓದಿ - ಚುನಾವಣೆಗೂ ಮುನ್ನವೇ ʼಸಿಎಂ ಸ್ಥಾನʼದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಅಶೋಕ್ ಗೆಹ್ಲೋಟ್..!


ನಂತರ ಆರೋಪಿ ಪ್ರಯಾಣಿಕನನ್ನು ಸಿಐಎಸ್ಎಫ್ ಅಧಿಕಾರಿಗಳು ವಿಚಾರಣೆ ನಡೆಸಿದರು. ವಿಮಾನ ಪ್ರಯಾಣದಲ್ಲಿದ್ದಾಗ ಈ ರೀತಿ ಕಾನೂನುಬಾಹಿರ ಕಾರ್ಯಕೈಗೊಳ್ಳಲು ಕಾರಣವೇನು ಎಂದು ಪೊಲೀಸರು ಪ್ರಸ್ತುತ ಪ್ರಶ್ನಿಸುತ್ತಿದ್ದು, 1937 ರ ಏರ್‌ಕ್ರಾಫ್ಟ್ ರೂಲ್ಸ್‌ನ ಸೆಕ್ಷನ್ 25 ರ ಅಡಿಯಲ್ಲಿ ಆರೋಪಿಯನ್ನು ಭಿದಾನ್‌ನಗರ ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.


ವಿಮಾನದಲ್ಲಿ ಧೂಮಪಾನ ಸಂಪೂರ್ಣ ನಿಷೇಧಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅದೃಷ್ಟವಶಾತ್‌ ಧೂಮಪಾನ ಮಾಡುವುದು ಪ್ರಯಾಣಿಕರ ಮತ್ತು ಸಿಬ್ಬಂದಿಗಳ ಗಮನಕ್ಕೆ ಬಂದಿದ್ದು, ವಿಮಾನದಲ್ಲಿರುವವರ ಜೀವವನ್ನು ಉಳಿಸಿದೆ. ಇಲ್ಲದೇ ಹೋದಲ್ಲಿ ದೊಡ್ಡ ಅಪಘಾತವಾಗುವ ಸಂಭವವಿತ್ತು ಎಂದು ಇಂಡಿಗೋ ಏರಲೈನ್ಸ್‌ನ ಆಧಿಕಾರಿಗಳು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.