ಯಶಸ್ವಿಯಾಗಿ ಉಡಾವಣೆಯಾದ ಆದಿತ್ಯ - L1 ಬಾಹ್ಯಾಕಾಶ ನೌಕೆಯ ಬಜೆಟ್‌ ಎಷ್ಟು ಗೊತ್ತಾ..?

Aditya-L1 budget : ಬಿಗ್‌ ಸಿನಿಮಾಗಳ ಬಜೆಟ್‌ಗಳಿಗಿಂತಲೂ ಕಡಿವೆ ವೆಚ್ಚದಲ್ಲಿ ಬಾಹ್ಯಾಕಾಶ ನೌಕೆಗಳನ್ನು ಸಿದ್ಧಪಡಿಸಲು ಭಾರತದ ಇಸ್ರೋ ವಿಜ್ಞಾನಿಗಳು ನಿಪುಣರಾಗಿದ್ದಾರೆ. ಇಂದು ಯಶಸ್ವಿಯಾಗಿ ಉಡಾವಣೆಯಾದ ಆದಿತ್ಯ - L1 ಬಾಹ್ಯಾಕಾಶ ನೌಕೆಯ ಬೆಲೆ ಎಷ್ಟು..? ಅಂತ ತಿಳಿದುಕೊಳ್ಳೋಣ ಬನ್ನಿ.

Written by - Krishna N K | Last Updated : Sep 2, 2023, 01:53 PM IST
  • ಆದಿತ್ಯ-l1 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ.
  • ಸಿನಿಮಾಗಳ ಬಜೆಟ್‌ಗಿಂತಲೂ ಕಡಿಮೆ ವೆಚ್ಚದಲ್ಲಿ ಈ ಮಿಷನ್‌ ಸಿದ್ಧಪಡಿಸಲಾಗಿದೆ.
  • ಆದಿತ್ಯ - L1 ಬಾಹ್ಯಾಕಾಶ ನೌಕೆಯ ಒಟ್ಟು ಬೆಲೆ ಎಷ್ಟು..? ಅಂತ ತಿಳಿದುಕೊಳ್ಳೋಣ ಬನ್ನಿ.
ಯಶಸ್ವಿಯಾಗಿ ಉಡಾವಣೆಯಾದ ಆದಿತ್ಯ - L1 ಬಾಹ್ಯಾಕಾಶ ನೌಕೆಯ ಬಜೆಟ್‌ ಎಷ್ಟು ಗೊತ್ತಾ..? title=

Aditya-L1 Launch news : ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಇಳಿಸಿದ ನಂತರ, ಈಗ ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋ ಮೊದಲ ಬಾರಿಗೆ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ನಿರ್ಮಿಸಿ ಯಶಸ್ವಿಯಾಗಿ ಉಡಾವಣೆಗೊಳಿಸಿದೆ.

ಭಾರತವು ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆಯ ವಿನ್ಯಾಸಕ್ಕೆ ಹೆಸರುವಾಸಿಯಾಗಿರುವುದು ಮುಖ್ಯ, ಭಾರತದ ಇಸ್ರೋ ವಿಜ್ಞಾನಿಗಳು ವಿಶ್ವದ ಯಾವುದೇ ದೇಶಗಳಿಗಿಂತ ಹೆಚ್ಚಾಗಿ ಹಾಲಿವುಡ್ ಸ್ಕೈಪೈ ಚಲನಚಿತ್ರಗಳ ಬಜೆಟ್‌ಗಿಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವಲ್ಲಿ ನಮ್ಮ ವಿಜ್ಞಾನಿಗಳು ನಿಪುಣರಾಗಿದ್ದಾರೆ. 

ಇದನ್ನೂ ಓದಿ:ಆದಿತ್ಯ ಎಲ್1 ಯೋಜನೆ:  ಸೂರ್ಯನ ಉರಿಯಿಂದ ಭೂಮಿಯ ರಕ್ಷಣೆ

ಚಂದ್ರಯಾನ-1 ಅನ್ನು ಅಕ್ಟೋಬರ್ 2008 ರಲ್ಲಿ ಉಡಾವಣೆ ಮಾಡಲಾಯಿತು, ಚಂದ್ರನ ಮೇಲ್ಮೈಯ ರಾಸಾಯನಿಕ ಮತ್ತು ಖನಿಜ ಸಂಯೋಜನೆಯನ್ನು ಅಧ್ಯಯನ ಮಾಡಲು ಪ್ರಾರಂಭಿಸಲಾಯಿತು. ಇದರ ವೆಚ್ಚ ರೂ. 386 ಕೋಟಿ. ಅದರ ನಂತರ ಚಂದ್ರಯಾನ-2 ಮತ್ತು ಇತ್ತೀಚೆಗೆ ಚಂದ್ರಯಾನ-3 ಉಡಾವಣೆ ಮಾಡಲಾಯಿತು. ಇದರಲ್ಲಿ ಚಂದ್ರಯಾನ-2 ಉಡಾವಣೆಗೆ ಒಟ್ಟು ಬಜೆಟ್ ರೂ. 978 ಕೋಟಿ. ಅದೇ ರೀತಿ ಚಂದ್ರಯಾನ-3ರ ವೆಚ್ಚ 600 ಕೋಟಿ ರೂ.

ಇಂದು ಹಾರಾಟ ನಡೆಸುತ್ತಿರುವ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ವೆಚ್ಚವೂ ಕಡಿಮೆ ಬಜೆಟ್‌ನಲ್ಲಿ ಇರಲಿದೆ. ವೆಚ್ಚವನ್ನು ಇಸ್ರೋ ಇದುವರೆಗೆ ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಸುಮಾರು ರೂ. 400 ಕೋಟಿಯಷ್ಟಿದೆ ಎಂದು ವರದಿಯಾಗಿದೆ. ಇಷ್ಟು ಕಡಿಮೆ ವೆಚ್ಚದಲ್ಲಿ ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದ ಏಕೈಕ ದೇಶ ಭಾರತ.

ಇದನ್ನೂ ಓದಿ: ಆದಿತ್ಯ ಎಲ್1: ಸೌರ ಶಕ್ತಿಗಳ ಸಮನ್ವಯ - ಸಿಎಂಇಗಳು ಹಾಗೂ ಸೌರ ಮಾರುತಗಳ ಅನಾವರಣ

ಏಕೆಂದರೆ ಇಲ್ಲಿಯವರೆಗೆ ಸೂರ್ಯನನ್ನು ಅಧ್ಯಯನ ಮಾಡಲು ಉಡಾವಣೆ ಮಾಡಿದ ಬಾಹ್ಯಾಕಾಶ ನೌಕೆಯ ಬೆಲೆ ಹೆಚ್ಚು. ಉದಾಹರಣೆಗೆ, ಸೂರ್ಯನಿಂದ ಹೊರಹೊಮ್ಮುವ ಸೌರ ಬಿರುಗಾಳಿಗಳ ರಚನೆ ಮತ್ತು ವಿಕಸನವನ್ನು ಅಧ್ಯಯನ ಮಾಡಲು ಅಕ್ಟೋಬರ್ 25, 2006 ರಂದು ಉಡಾವಣೆಯಾದ NASA ದ STEREO ಬಾಹ್ಯಾಕಾಶ ನೌಕೆಗೆ $550 ಮಿಲಿಯನ್ ವೆಚ್ಚವಾಯಿತು.

ಮತ್ತೊಂದೆಡೆ, ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಸೂರ್ಯನ ಹತ್ತಿರ ಪ್ರಯಾಣಿಸಲಿದೆ, ಇದನ್ನು ವಿನ್ಯಾಸಗೊಳಿಸಲು ಸುಮಾರು $ 1.5 ಶತಕೋಟಿ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ ರೂ.1,11,43,50,00,000. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News