ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ಕೋಲ್ಕತಾದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯುವವರಿಗೆ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬೇಕು ಎನ್ನುವ ಮಸೂದೆಗೆ ಪಶ್ಚಿಮ ಬಂಗಾಳ ಶಾಸನಸಭೆಯು ಅನುಮೋದನೆ ನೀಡಿದೆ.


COMMERCIAL BREAK
SCROLL TO CONTINUE READING

ಕೊಲ್ಕತ್ತಾ ಮುನಿಸಿಪಲ್ ಕಾರ್ಪೋರೇಶನ್ (ಎರಡನೇ ತಿದ್ದುಪಡಿ) ಕಾಯ್ದೆಯ ಸೆಕ್ಷನ್ 338 ರ ತಿದ್ದುಪಡಿಯ ಮೂಲಕ ದಂಡವನ್ನು ಹೆಚ್ಚಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಬಿಲ್ ಅಸೆಂಬ್ಲಿಯಲ್ಲಿ ಗುರುವಾರ ಜಾರಿಗೆ ತರಲಾಯಿತು. ಇತ್ತೀಚೆಗೆ ಕಂಡ ಕಂಡಲ್ಲಿ ಕಸ ಹಾಕುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯ ಹಾಕಿ ಮಲಿನ ಮಾಡುವವರನ್ನು ಪ್ರಬಲವಾಗಿ ದಂಡಿಸುವ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾದರು.



ಕನಿಷ್ಠ 5,000 ರೂ. ನಿಂದ ಗರಿಷ್ಠ ಒಂದು ಲಕ್ಷ ರೂಪಾಯಿಗಳ ವರೆಗೆ ದಂಡವನ್ನು ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನ ಕಾನೂನಿನ ಪ್ರಕಾರ ಕನಿಷ್ಠ 50 ರೂ. ಮತ್ತು ಗರಿಷ್ಠ 5,000 ರೂ. ದಂಡ ಹೇರುವುದಕ್ಕೆ ಅವಕಾಶವಿತ್ತು. 


ದಕ್ಷಿಣೇಶ್ವರ ಸ್ಕೈವಾಕ್‌ ನಲ್ಲಿ ರಾಶಿ ರಾಶಿ ಕಸ, ತ್ಯಾಜ್ಯ, ಎಲೆ ತಿಂದು ಉಗಿಯಲ್ಪಟ್ಟ ಎಂಜಲು ಮುಂತಾದ ಅಸಹ್ಯ ಗಲೀಜು, ರಾಶಿ ಬಿದ್ದಿರುವುದನ್ನು ಗಮನಿಸಿ ತೀವ್ರವಾಗಿ ಕೋಪಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮತ್ತು ಕಸದ ಚಲನೆಗಳನ್ನು ನಿಗ್ರಹಿಸಲು 11 ಸದಸ್ಯರ ಸಮಿತಿಯನ್ನು ರಚಿಸಿದ್ದರು.