ನವದೆಹಲಿ: ರೈಲುಗಳಲ್ಲಿ ಇ-ಕ್ಯಾಟರಿಂಗ್ ಸೌಲಭ್ಯವು ಪ್ರಯಾಣಿಕರಿಗೆ ಮತ್ತೆ ಲಭ್ಯವಾಗಲಿದೆ. ಇದಕ್ಕಾಗಿ ರೈಲ್ವೆ ಸಚಿವಾಲಯ ಐಆರ್‌ಸಿಟಿಸಿಗೆ ಅನುಮತಿ ನೀಡಿದೆ. ಅಂದರೆ ಈಗ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುವಾಗ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ. ದೇಶದ ಆಯ್ದ ರೈಲ್ವೆ ನಿಲ್ದಾಣಗಳಿಂದ ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ನೀವು ಇಷ್ಟಪಡುವ ಆಹಾರವನ್ನು ಪಡೆಯುತ್ತೀರಿ :
ಐಆರ್‌ಸಿಟಿಸಿ (IRCTC) ಯ ಈ ಸೌಲಭ್ಯದ ಮೂಲಕ ಪ್ರಯಾಣಿಕರು ತಮ್ಮ ಆಹಾರವನ್ನು ನೆಚ್ಚಿನ ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಆದೇಶಿಸಬಹುದು. ಆದೇಶದ ಸಮಯದಲ್ಲಿ ಪ್ರಯಾಣಿಕರಿಗೆ ಯಾವ ನಿಲ್ದಾಣದಲ್ಲಿ ಮತ್ತು ಎಷ್ಟು ಸಮಯದವರೆಗೆ ಆಹಾರ ಲಭ್ಯವಾಗಲಿದೆ ಎಂದು ತಿಳಿಸಲಾಗುತ್ತದೆ. ಆಹಾರ (Food) ಪಡೆಯಲು ಪ್ರಯಾಣಿಕರು ಎಲ್ಲಿಗೂ ಹೋಗಬೇಕಿಲ್ಲ. ಬದಲಿಗೆ ಪ್ರಯಾಣಿಕರಿರುವ ಸ್ಥಳಕ್ಕೆ ಆಹಾರ ಲಭ್ಯವಾಗಲಿದೆ.


ಇದನ್ನೂ ಓದಿ - IRCTC News Update: Ticket Book ಮಾಡುವಾಗ ಈ ಹೊಸ ನಿಯಮ ನಿಮಗೆ ತಿಳಿದಿರಲಿ


ರೈಲ್ವೆ ಸಚಿವಾಲಯ ಅನುಮತಿ ನೀಡಿತು : 
ಐಆರ್‌ಸಿಟಿಸಿ  ಅಧಿಕೃತ ಇ-ಕ್ಯಾಟರಿಂಗ್ ಸೇವೆ ರೈಲ್ವೆ ರೆಸ್ಟ್ರೊಗೆ ರೈಲ್ವೆ ಸಚಿವಾಲಯ ಅನುಮತಿ ನೀಡಿದೆ. ರೈಲ್ ರೆಸ್ಟ್ರೊ (RailRastro) ಜನವರಿ 2021 ರ ಕೊನೆಯ ವಾರದಿಂದ ಕೆಲಸವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದಕ್ಕಾಗಿ ಕಂಪನಿಯು ಕಾರ್ಯಾಚರಣೆಯ ಸಮಯದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ವಿತರಣಾ ಸಿಬ್ಬಂದಿಯ ಥರ್ಮಲ್ ಸ್ಕ್ಯಾನಿಂಗ್, ನಿಯಮಿತವಾಗಿ ಅಡಿಗೆಮನೆ ಸ್ವಚ್ಛಗೊಳಿಸುವುದು, ರಕ್ಷಣಾತ್ಮಕ ಮಾಸ್ಕ್ ಗಳನ್ನು ಬಳಸುವುದು ಅಥವಾ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ವಿತರಣಾ ಸಿಬ್ಬಂದಿ ಫೇಸ್ ಶೀಲ್ಡ್ ಗಳನ್ನು ಒಳಗೊಂಡಂತೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು  ಅನುಸರಿಸಬೇಕಾಗಿದೆ.


ರೈಲ್ವೆ ಮಾರ್ಗಸೂಚಿ :
ವಿತರಣಾ ಸಿಬ್ಬಂದಿಗೆ ಸಹ ಉತ್ತಮ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ವಿತರಣಾ ಸಿಬ್ಬಂದಿ ಕೂಡ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.   ವಿತರಣಾ ಸಿಬ್ಬಂದಿಗೆ 'ಆರೋಗ್ಯ ಸೇತು' (Aarogya Setu) ಅಪ್ಲಿಕೇಶನ್‌ನ ಕಡ್ಡಾಯವಾಗಿದೆ. ಜೊತೆಗೆ ಶೂನ್ಯ ಮಾನವ ಸಂಪರ್ಕಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕವಿಲ್ಲದ ವಿತರಣೆ, ರಕ್ಷಣಾತ್ಮಕ ಮಾಸ್ಕ್ (Mask) ಗಳು ಅಥವಾ ಕವರ್‌ಗಳನ್ನು ಬಳಸುವುದು ಮತ್ತು ವಿತರಣೆಯ ನಂತರ ವಿತರಣಾ ಚೀಲಗಳ ನೈರ್ಮಲ್ಯೀಕರಣ ಕಡ್ಡಾಯವಾಗಿದೆ. ಆದಾಗ್ಯೂ ಎಲ್ಲಾ ರೈಲುಗಳು ಮೊದಲಿನಂತೆ ಓಡಲು ಪ್ರಾರಂಭಿಸಿದಾಗ ಮಾತ್ರ ರೈಲ್ವೆಯ ಸಾಮಾನ್ಯ ಕ್ಯಾಂಟೀನ್ ಸೇವೆಯ ಲಾಭ ಲಭ್ಯವಾಗುತ್ತದೆ ಎಂದು ಆಶಿಸಲಾಗಿದೆ.


ಇದನ್ನೂ ಓದಿ - Good News: ಟಿಕೆಟ್ ರದ್ದತಿ Refund ನಿಯಮದಲ್ಲಿ ಬದಲಾವಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.