Earthquake : ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಭೂಕಂಪದ ಕೇಂದ್ರಬಿಂದು ವರದಿಯಾಗಿದೆ. ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 5.4 ಅಳತೆಯ ಭೂಕಂಪದಿಂದ, ಶನಿವಾರ ಸಂಜೆ ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಕಂಪನ ಸಂಭವವಾಗಿದೆ. ಶನಿವಾರ ಸಂಜೆ 7.57ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳವಾಗಿದೆ. ನ್ಯೂ ತೆಹ್ರಿ, ಪಿಥೋರಗಢ್, ಬಾಗೇಶ್ವರ್, ಪೌರಿ ಮತ್ತು ಇತರ ಪಟ್ಟಣಗಳು ​​ಸೇರಿದಂತೆ ಉತ್ತರಾಖಂಡದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪದಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ವರದಿಯಾಗಿಲ್ಲ.


COMMERCIAL BREAK
SCROLL TO CONTINUE READING

4 ದಿನಗಳಲ್ಲಿ 2ನೇ ಬಾರಿಗೆ ಭೂಕಂಪ ಸಂಭವಿಸಿದೆ


ಒಂದು ವಾರದೊಳಗೆ ಎರಡನೇ ಭಾರಿ ಭೂಮಿ ಕಂಪಿಸಿದೆ.. ಇದಕ್ಕೂ ಮುನ್ನ, ನವೆಂಬರ್ 9 ರ ಬುಧವಾರದ ಮುಂಜಾನೆ, ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪವು ಅಪ್ಪಳಿಸಿತು, ನೆರೆಯ ದೇಶದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದರು. ಆ ಭೂಕಂಪದ ಕಂಪನಗಳು ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಅನುಭವಾಗಿತ್ತು.


Rajiv Gandhi Assassination Case : ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ನಳಿನಿ ಜೈಲಿನಿಂದ ಬಿಡುಗಡೆ


ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ


ನೇಪಾಳದಲ್ಲಿ ಬುಧವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಮಧ್ಯಾಹ್ನ 1:57 ರ ಸುಮಾರಿಗೆ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಹೇಳಿತ್ತು. ಭಾರತದ ರಾಜಧಾನಿ, ನವದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಕಂಪದ ಕಂಪನದ ಅನುಭವವಾಗಿದೆ. ಬುಧವಾರದ ಭೂಕಂಪ ನೇಪಾಳದಲ್ಲಿ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಭೂಕಂಪವಾಗಿದೆ.


ಭೂಕಂಪದಿಂದ ನೇಪಾಳದಲ್ಲಿ ಭಾರೀ ಹಾನಿ 


ಎನ್‌ಸಿಎಸ್ ಪ್ರಕಾರ, ನೇಪಾಳದಲ್ಲಿ ಮಂಗಳವಾರ ಬೆಳಗ್ಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ಮೊನ್ನೆ ಅಕ್ಟೋಬರ್ 19 ರಂದು ಕಠ್ಮಂಡು ಬಳಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. NCS ಪ್ರಕಾರ, ಭೂಕಂಪವು ಕಠ್ಮಂಡುವಿನಿಂದ 53 ಕಿಮೀ ಪೂರ್ವಕ್ಕೆ ಮಧ್ಯಾಹ್ನ 2:52 ರ ಸುಮಾರಿಗೆ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿ.ಮೀ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (NEMRC) ಪ್ರಕಾರ, ಜುಲೈ 31 ರಂದು ಬೆಳಿಗ್ಗೆ 8.13 ಕ್ಕೆ ಕಠ್ಮಂಡುವಿನ 147 ಕಿಮೀ ESE ನಲ್ಲಿರುವ ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾದ ಸುತ್ತಲೂ 6 ತೀವ್ರತೆಯ ಭೂಕಂಪ ಸಂಭವಿಸಿದೆ. 2015 ರಲ್ಲಿ, ಕಠ್ಮಂಡು ಮತ್ತು ಪೋಖರಾ ನಡುವಿನ ಮಧ್ಯ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ರ ತೀವ್ರತೆಯ ಭೂಕಂಪ ಸಂಭವಿಸಿತು. ಇದರಲ್ಲಿ 8,964 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 22,000 ಜನರು ಗಾಯಗೊಂಡಿದ್ದಾರೆ.


ಇದನ್ನೂ ಓದಿ : ಬಿಜೆಪಿ ಸೇರಲು ಮುಂದಾದ್ರಾ ಎಂ.ಎಸ್.ಧೋನಿ...?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.