Assembly Election 2021: ಮೇ 2 ರ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ..!
ಕೊರೋನಾ ಪ್ರಕರಣಗಳು ಹೆಚ್ಚಳ ಮತ್ತು ದೇಶಾದ್ಯಂತ ಜನರು ವೈರಸ್‌ಗೆ ತುತ್ತಾಗುತ್ತಿರುವ ಕಾರಣ
ನವದೆಹಲಿ: ಕೊರೋನಾ ಪ್ರಕರಣಗಳು ಹೆಚ್ಚಳ ಮತ್ತು ದೇಶಾದ್ಯಂತ ಜನರು ವೈರಸ್‌ಗೆ ತುತ್ತಾಗುತ್ತಿರುವ ಕಾರಣ, ಭಾರತೀಯ ಚುನಾವಣಾ ಆಯೋಗವು ಮೇ 2 ರಂದು ಮತ ಎಣಿಕೆಯ ದಿನದಂದು ಅಥವಾ ನಂತರ ಎಲ್ಲಾ ವಿಜಯ ಮೆರವಣಿಗೆಗಳನ್ನು ನಿಷೇಧಿಸಿ ಆದೇಶಿಸಿದೆ. ಇನ್ನು ವಿವವರವಾದ ಆದೇಶವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದೆ.
ಸಂಬಂಧಪಟ್ಟ ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ಪ್ರಮಾಣಪತ್ರವನ್ನು ಸ್ವೀಕರಿಸಲು ವಿಜೇತ ಅಭ್ಯರ್ಥಿ ಅಥವಾ ಅವನ / ಅವಳ ಅಧಿಕೃತ ಪ್ರತಿನಿಧಿಯೊಂದಿಗೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚಿನವರಿಗೆ ಅನುಮತಿ ಇಲ್ಲ ಎಂದು ಚುನಾವಣಾ ಆಯೋಗ(Election Commission of India) ತಿಳಿಸಿದೆ.
ಇದನ್ನೂ ಓದಿ : ದೇಶದಲ್ಲಿ ಫುಲ್ ಲಾಕ್ ಡೌನ್ ಅನಿವಾರ್ಯವೇ..? ತಜ್ಞರ ನಿಲುಮೆ ಏನು.?
ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮತ್ತು ಪುದುಚೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ(Assembly Election) ನಡೆಯುತ್ತಿದೆ. ಮತದಾನ ಎಣಿಕೆ ಮೇ 2 ರಂದು ನಡೆಯಲಿದೆ. ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆ ಮತ್ತು ಮಾರಣಾಂತಿಕ ಕೊರೊನಾವೈರಸ್ ಏಕಾಏಕಿ ಹೆಚ್ಚುತ್ತಿರುವುದರಿಂದ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ರ್ಯಾಲಿಗಳನ್ನು ನಡೆಸಲು ನಿರ್ಬಂಧಿಸಿ ಚುನಾವಣಾ ಆಯೋಗವು ಮತದಾನ ನಡೆಸುವ ನಿರ್ಧಾರ ಕೈಗೊಂಡಿತ್ತು.
Health Ministry PC: ಮನೆಗಳಲ್ಲಿಯೂ Face Mask ಧರಿಸುವ ಕಾಲ ಬಂದಿದೆ, ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ಎಚ್ಚರಿಕೆ!
ಮೇ 2 ರಂದು ಎಣಿಕೆಯ ನಂತರ ಯಾವುದೇ ವಿಜಯ ಮೆರವಣಿಗೆ ಮತ್ತು ಸಂಭ್ರಮಾಚರಣೆಗೆ ಅನುಮತಿಸಲಾಗುವುದಿಲ್ಲ. ವಿಜೇತ ಅಭ್ಯರ್ಥಿ(Winning Candidate)ಯೊಂದಿಗೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚಿನವರಿಗೆ ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ : Oxygen Stock : 'ಆಕ್ಸಿಜನ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಭಾರತದಲ್ಲಿ ಸಾಕಷ್ಟು ಸ್ಟಾಕ್ ಇದೆ'
ಈ ಹಿಂದೆ, ಚುನಾವಣಾ ಆಯೋಗವು ಸಾರ್ವಜನಿಕ ಸಭೆ(Public Rally)ಗಳಿಗೆ ಹಾಜರಾಗುವವರ ಸಂಖ್ಯೆಯನ್ನು 500 ಕ್ಕೆ ಸೀಮಿತಗೊಳಿಸಿತ್ತು. 'ಪ್ಯಾಡ್ ಯಾತ್ರಾ' ಮತ್ತು ರೋಡ್ ಶೋಗಳನ್ನು ನಿಷೇಧಿಸಿತ್ತು. ರ್ಯಾಲಿಗಳಿಗೆ ಹಾಜರಾಗುವವರು ಮಾಸ್ಕ ಧರಿಸುವುದು ಮತ್ತು ಕೊರೋನಾ ಪ್ರೋಟೋಕಾಲ್ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋ ರಾಜಕೀಯ ಪಕ್ಷಗಳಿಗೆ ಆದೇಶಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.