ದೇಶದಲ್ಲಿ ಫುಲ್ ಲಾಕ್ ಡೌನ್ ಅನಿವಾರ್ಯವೇ..? ತಜ್ಞರ ನಿಲುಮೆ ಏನು.?

ಬೆಂಗಳೂರಿನ  ಪಿಹೆಚ್ಎಎಫ್ಐ ಲೈಫ್ ಕೇರ್ ಮತ್ತು ಎಪಿಡೊಮಲೋಜಿ ತಜ್ಞ ಡಾ. ಗಿರಿಧರ ಬಾಬು ಪ್ರಕಾರ,  ಕರೋನಾ (Coronavirus) ರಕ್ಕಸನನ್ನು ನಿಯಂತ್ರಿಸಲು ಫುಲ್ ಲಾಕ್ ಡೌನ್  ಏಕಮಾತ್ರ ಆಯ್ಕೆ ಅಲ್ಲ. 

Written by - Ranjitha R K | Last Updated : Apr 27, 2021, 09:27 AM IST
  • ಕಳೆದ ನಾಲ್ಕು ದಿನಗಳಿಂದ ದಿನವೊಂದಕ್ಕೆ 3 ಲಕ್ಷಕ್ಕೂ ಅಧಿಕ ಜನರಿಗೆ ವೈರಸ್ ದಾಳಿ ಮಾಡುತ್ತಿದೆ.
  • ನಿರ್ಬಂದಿತ ಲಾಕ್ ಡೌನ್ ಇದ್ದರೂ ಕರೋನಾ ಆರ್ಭಟ ಇನ್ನೂ ಕಡಿಮೆ ಆಗಿಲ್ಲ
  • ಈ ಸನ್ನಿವೇಶದಲ್ಲಿ ಫುಲ್ ಲಾಕ್ ಡೌನ್ ಮಾತುಗಳು ಕೂಡಾ ಕೇಳಿ ಬರುತ್ತಿವೆ.
ದೇಶದಲ್ಲಿ ಫುಲ್ ಲಾಕ್ ಡೌನ್ ಅನಿವಾರ್ಯವೇ..? ತಜ್ಞರ ನಿಲುಮೆ ಏನು.? title=
ನಿರ್ಬಂದಿತ ಲಾಕ್ ಡೌನ್ ಇದ್ದರೂ ಕರೋನಾ ಆರ್ಭಟ ಇನ್ನೂ ಕಡಿಮೆ ಆಗಿಲ್ಲ (PHoto ANI)

ಬೆಂಗಳೂರು : ದೇಶದಲ್ಲಿ ಕರೋನಾಸುರನ ಆರ್ಭಟ ದಿನದಿಂದ ದಿನೇ ಹೆಚ್ಚುತ್ತಿದೆ.  ದೇಶದ ಮಹಾನಗರಗಳು ಲಾಕ್ ಡೌನ್ (Lockdown) ಆಗಿವೆ. ರಾಜ್ಯಗಳು ಲಾಕ್ ಡೌನ್ ಆಗಿವೆ. ಹೀಗಿದ್ದರೂ ಕೂಡಾ ಕರೋನಾ (Coronavirus) ಆರ್ಭಟ ಕಡಿಮೆ ಆಗಿಲ್ಲ.  ದಿನಕ್ಕೆ 3.5 ಲಕ್ಷಕ್ಕೂ ಅಧಿಕ ಜನರು ಸಾಂಕ್ರಾಮಿತರಾಗುತ್ತಿದ್ದಾರೆ. ಹೀಗಿರುವಾಗ ದೇಶದಲ್ಲಿ ಇದೀಗ ಫುಲ್ ಲಾಕ್ ಡೌನ್ ಹಾಕುವ ಪ್ರಸ್ತಾವವೂ ಸರ್ಕಾರದ ಮುಂದಿದೆ. ಈ ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಿರುವಾಗ ಫುಲ್ ಲಾಕ್ ಡೌನ್ ಮಾಡುವ ಬಗ್ಗೆ ತಜ್ಞರ ಸಲಹೆ ಏನು ನೋಡೋಣ. 

ಫುಲ್ ಲಾಕ್ ಡೌನ್ ಮೊದಲ ಆಯ್ಕೆ ಅಲ್ಲ:
ಬೆಂಗಳೂರಿನ (Bengaluru) ಪಿಹೆಚ್ಎಎಫ್ಐ ಲೈಫ್ ಕೇರ್ ಮತ್ತು ಎಪಿಡೊಮಲೋಜಿ ತಜ್ಞ ಡಾ. ಗಿರಿಧರ ಬಾಬು ಪ್ರಕಾರ,  ಕರೋನಾ (Coronavirus) ರಕ್ಕಸನನ್ನು ನಿಯಂತ್ರಿಸಲು ಫುಲ್ ಲಾಕ್ ಡೌನ್ (Lockdown) ಏಕಮಾತ್ರ ಆಯ್ಕೆ ಅಲ್ಲ. ಕರೋನಾ ವಿಪರೀತ ಸ್ಪೀಡ್ ನಲ್ಲಿ ಹರಡುತ್ತಿದೆ.  ಇದಕ್ಕೆ ಕಾರಣ ಏನು.?  ಕರೋನಾದ ಸ್ವರೂಪ ಯಾವುದು? ಇದನ್ನು ನೋಡಬೇಕಾಗಾದುದು ಮೊದಲ ಆದ್ಯತೆ ಆಗಬೇಕು. ಎಲ್ಲಿ ವಿಪರೀತ ಪ್ರಮಾಣದಲ್ಲಿ ಕೇಸ್ ಗಳು ದಾಖಲಾಗುತ್ತಿವೆಯೋ ಅಲ್ಲಿ ಲಾಕ್ ಡೌನ್ ಘೋಷಣೆ ಮಾಡಬೇಕು ಎಂದು  ಗಿರಿಧರ ಬಾಬು ಹೇಳುತ್ತಾರೆ. 

ಇದನ್ನೂ ಓದಿ : Health Ministry PC: ಮನೆಗಳಲ್ಲಿಯೂ Face Mask ಧರಿಸುವ ಕಾಲ ಬಂದಿದೆ, ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ಎಚ್ಚರಿಕೆ!

ಲಸಿಕೆ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ:
ಕರ್ನಾಟಕ ಕೊವಿಡ್ ಟಾಸ್ಕ್ ಫೋರ್ಸ್ ವಿಶೇಷ ಸಮಿತಿ ಸದಸ್ಯ ಡಾ. ವಿಶಾಲ್ ರಾವ್ ಪ್ರಕಾರ  ಲಾಕ್ ಡೌನ್ ಮಾಡಿದರೆ  ನಡೆಯುತ್ತಿರುವ ಲಸಿಕೆ ಅಭಿಯಾನದ ಪ್ರಗತಿ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಕರೋನಾ (COVID-19) ವಿರುದ್ಧದ ಸಮರದಲ್ಲಿ ರಣನೀತಿ ಬದಲಾಗಬೇಕು ಎಂದು ಹೇಳುತ್ತಾರೆ. 

ಫುಲ್ ಲಾಕ್ ಡೌನ್ ಬೇಕಾಗಿಲ್ಲ:
ದೆಹಲಿಯ (Delhi) ವೈರಾಲಜಿ ವಿಶೇಷ ತಜ್ಞ ಡಾ. ಶಹೀದ್ ಜಮೀಲ್ ಪ್ರಕಾರ ಫುಲ್ ಲಾಕ್ ಡೌನ್ ಸರಿಯಾದ ನಿರ್ಧಾರ  ಅಲ್ಲ.   ಎಲ್ಲಿ ಕರೋನಾ ನಿಯಂತ್ರಣವಿಲ್ಲದೇ ಹರಡುತ್ತಿದೆಯೋ ಅಲ್ಲಿ ಫುಲ್ ಲಾಕ್ ಡೌನ್ ಅಗತ್ಯವಿದೆ. ಫುಲ್ ಲಾಕ್ ಡೌನ್ ಮಾಡಿದರೆ ಸಂಪೂರ್ಣ ದೇಶದಲ್ಲಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಸಮತೋಲಿತವಾಗಿರುವುದು ಅಗತ್ಯವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ : Oxygen Stock : 'ಆಕ್ಸಿಜನ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಭಾರತದಲ್ಲಿ ಸಾಕಷ್ಟು ಸ್ಟಾಕ್ ಇದೆ'

ಹತ್ತು ರಾಜ್ಯಗಳಲ್ಲಿ ಅಧಿಕ ಕೇಸ್:
ನಿಮಗೆ ಗೊತ್ತಿರಲಿ, ಕಳೆದ 5 ದಿನಗಳಿಂದ ಸತತವಾಗಿ ದಿನವೊಂದಕ್ಕೆ ಮೂರು ಲಕ್ಷಕ್ಕೂ ಅಧಿಕ ಮಂದಿ ಕರೋನಾ ಸಾಂಕ್ರಾಮಿತರಾಗುತ್ತಿದ್ದಾರೆ.  ಈ ಪಟ್ಟಿಯಲ್ಲಿ ಶೇ. 80 ರಷ್ಟು ಪ್ರಕರಣಗಳು ಮಹಾರಾಷ್ಟ್ರ (Maharastra), ದೆಹಲಿ, ಉತ್ತರಪ್ರದೇಶ, ಕರ್ನಾಟಕ, ಛತ್ತೀಸ್ ಗಡ, ಕೇರಳ (Kerala), ತಮಿಳುನಾಡು, ರಾಜಾಸ್ತಾನ ಮತ್ತು ಗುಜರಾತ್ ರಾಜ್ಯಗಳಿಂದಲೇ ದಾಖಲಾಗುತ್ತಿದೆ. ಹತ್ತು ರಾಜ್ಯಗಳಲ್ಲಿ ಕರೋನಾ ಆರ್ಭಟ ಆಕ್ರಾಮಕವಾಗುತ್ತಿದೆ. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News