ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಂಜಯ್ ರಾವತ್‌ಗೆ ಸಮನ್ಸ್ ನೀಡಿದ ಇಡಿ!
ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಕರೆದಿದೆ. ಇದಲ್ಲದೇ ರಾವತ್ ಕುಟುಂಬದ ಇತರ ಸದಸ್ಯರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಒಂದೆಡೆ ರಾಜಕೀಯ ಪ್ರಕ್ಷುಬ್ಧತೆ. ಇನ್ನೊಂದೆಡೆ ಶಿವಸೇನೆ ಪಕ್ಷದಲ್ಲಿ ಭಿನ್ನಾಭಿಪ್ರಾಯ. ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಠಾಕ್ರೆ ಸರ್ಕಾರಕ್ಕೆ ಎದುರಾಗುತ್ತಿದ್ದು, ಇದೀಗ ಮತ್ತೊಂದು ತಲೆನೋವು ಶುರುವಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಸಂಜಯ್ ರಾವತ್‌ಗೆ ಸಮನ್ಸ್ ಜಾರಿ ಮಾಡಿದೆ. ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೋಟಿಸ್ ಕಳುಹಿಸಿದ್ದು, ನಾಳೆ (ಜೂನ್ 28) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದೆ.
ಇದನ್ನೂ ಓದಿ: SBI ಗ್ರಾಹಕರೇ ನಿಮಗಿದು ತಿಳಿದಿರಲಿ: ಜಸ್ಟ್ 1 ಕಾಲ್ ಮಾಡಿದ್ರೆ ಸಿಗುತ್ತೆ ಈ ಎಲ್ಲಾ ಸೇವೆ
ಆದರೆ ಸಂಜಯ್ ರಾವತ್ ಅವರು ನಾಳೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಮೂಲಗಳಿಂದ ವರದಿಯಾಗಿದೆ. ಸಂಜಯ್ ರಾವತ್ ಇಡಿ ಮುಂದೆ ಹಾಜರಾಗಲು ಸ್ವಲ್ಪ ಸಮಯ ಕೇಳಬಹುದು. ಜೂನ್ 28 ರಂದು ಅಲಿಬಾಗ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ರಾವತ್ ಭಾಗಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಕೇಳಬಹುದು ಎಂದು ಹೇಳಲಾಗುತ್ತಿದೆ.
ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಮನ್ಸ್:
ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಕರೆದಿದೆ. ಇದಲ್ಲದೇ ರಾವತ್ ಕುಟುಂಬದ ಇತರ ಸದಸ್ಯರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಸಂಜಯ್ ರಾವತ್ ಟ್ವೀಟ್:
ಸಮನ್ಸ್ ಜಾರಿಯಾದ ಬಳಿಕ ಸಂಜಯ್ ರಾವತ್ ಟ್ವೀಟ್ ಮಾಡಿದ್ದು, 'ಇಡಿ ನನಗೆ ಸಮನ್ಸ್ ನೀಡಿದೆ. ಅದು ಒಳ್ಳೆಯದು. ಮಹಾರಾಷ್ಟ್ರದಲ್ಲಿ ಇಂತಹ ದೊಡ್ಡ ರಾಜಕೀಯ ಸಂಚಲನ ನಡೆಯುತ್ತಿದೆ. ಬಾಳ್ ಸಾಹೇಬರ ಶಿವಸೈನಿಕರು ನಾವೆಲ್ಲರೂ ದೊಡ್ಡ ಹೋರಾಟಕ್ಕೆ ಇಳಿದಿದ್ದೇವೆ. ಇದು ನನ್ನನ್ನು ತಡೆಯುವ ಷಡ್ಯಂತ್ರ. ನನ್ನ ತಲೆ ಕಡಿದರೂ ನಾನು ಗುವಾಹಟಿ ಮಾರ್ಗದಲ್ಲಿ ಹೋಗುವುದಿಲ್ಲ. ನನ್ನನ್ನು ಬಂಧಿಸಿ ಜೈ ಹಿಂದ್" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಣ್ಣುಮಗು ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಲ್ಲಲು ಮುಂದಾದ ತಂದೆ
ಸಂಜಯ್ ರಾವತ್‌ಗೆ ಸಮನ್ಸ್ ಕಳುಹಿಸಿರುವ ಕುರಿತು ಶಿವಸೇನೆ ಪ್ರಶ್ನೆಗಳನ್ನು ಎತ್ತಿದ್ದು, "ಜಾರಿ ನಿರ್ದೇಶನಾಲಯ (ಇಡಿ) ಬಿಜೆಪಿಯ ಮೇಲಿನ ಭಕ್ತಿಗೆ ಉದಾಹರಣೆಯಾಗಿದೆ. ಇದರ ಅಡಿಯಲ್ಲಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ" ಎಂದು ಪಕ್ಷದ ವಕ್ತಾರ ಪ್ರಿಯಾಂಕಾ ಚತುರ್ವೇದಿ ವಾಗ್ದಾಳಿ ನಡೆಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.