ಕರ್ನಾಟಕದ ಪೊಲೀಸ್ ಠಾಣೆಯೊಂದರಲ್ಲಿ ಇಲಿಗಳ ಕಾಟ ಮಿತಿ ಮೀರಿದ್ದು, ಇದರಿಂದ ಬೇಸತ್ತ ಅಧಿಕಾರಿಗಳು ಬೆಕ್ಕನ್ನು ನಿಯೋಜಿಸಿದ್ದಾರೆ. ಈ ಘಟನೆ ನಡೆದಿರುವುದು ರಾಜಧಾನಿ ಬೆಂಗಳೂರಿನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ. 2014ರಿಂದ ಬೆಕ್ಕನ್ನು ಇಲ್ಲಿ ಇಲಿ ಹಿಡಿಯಲು ನಿಯೋಜಿಸಲಾಗಿದೆ.
ಇದನ್ನೂ ಓದಿ: Actress Early Pregnancy: ಅಲಿಯಾ ಅಷ್ಟೇ ಅಲ್ಲ ಮದುವೆಯಾದ ಕೆಲವೇ ದಿನಗಳಲ್ಲಿ ಗುಡ್ ನ್ಯೂಸ್ ನೀಡಿದ ಬಾಲಿವುಡ್ ನಟಿಮಣಿಯರು
ಈ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಪ್ರಮುಖ ಪ್ರಕರಣಗಳ ಫೈಲ್‌ಗಳನ್ನು ಇಲಿಗಳು ತಿಂದು ತೇಗುತ್ತಿದ್ದವಂತೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೆಲವು ಬೆಕ್ಕುಗಳನ್ನು ಇಲ್ಲಿ ತಂದು ನಿಯೋಜಿಸಿದ್ದಾರೆ.
ರಾಜ್ಯ ಸರ್ಕಾರ 2010ರಿಂದ 2015ರ ಅವಧಿಯಲ್ಲಿ ಇಲಿ ಹಿಡಿಯಲು 19.34 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಆರ್‌ಟಿಐ ಮೂಲಕ ತಿಳಿದುಬಂದಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಮಾತನಾಡಿ, “ಪೊಲೀಸ್ ಸ್ಟೇಷನ್‌ನಲ್ಲಿ ಇಲಿಗಳ ಕಾಟ ಹೆಚ್ಚಾಗಿತ್ತು. ಹೀಗಾಗಿ ಒಂದು ಬೆಕ್ಕನ್ನು ಸಾಕಿದೆವು. ಬಳಿಕ ಇಲಿಗಳು ಬರೋದು ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಇನ್ನೊಂದು ಬೆಕ್ಕನ್ನು ತಂದಿದ್ದೇವೆ" ಎಂದರು.
ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿದಿನ ಎರಡು ಬೆಕ್ಕುಗಳಿಗೆ ಹಾಲು ಮತ್ತು ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಆಡಳಿತಾತ್ಮಕ ಅಧಿಕಾರಿಗಳ ಪ್ರಕಾರ, ಕರ್ನಾಟಕದ ಅನೇಕ ಸರ್ಕಾರಿ ಇಲಾಖೆಗಳು ಇಲಿ ಮತ್ತು ಸೊಳ್ಳೆಗಳ ಹಾವಳಿಯನ್ನು ತಪ್ಪಿಸಲು ಪ್ರತಿ ವರ್ಷ ಗಣನೀಯ ಮೊತ್ತವನ್ನು ಖರ್ಚು ಮಾಡುತ್ತವೆ. ಈ ಮಾಹಿತಿ ಹಕ್ಕಿನಿಂದ ಅಂದರೆ RTI ಯಿಂದ ಪಡೆದ ಮಾಹಿತಿಯ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾತ್ರ ಪ್ರತಿ ವರ್ಷ ಇಲಿ ಮತ್ತು ಸೊಳ್ಳೆಗಳ ತಡೆಗಟ್ಟುವಿಕೆಗೆ ಸುಮಾರು 50,000 ರೂ ಖರ್ಚು ಮಾಡುತ್ತಿವೆಯಂತೆ.
ಇದನ್ನೂ ಓದಿ: PF Balance: ಪಿಎಫ್ ಹಣ ಬಂದಿದೆಯೇ? ನಿಮ್ಮ UAN ಸಂಖ್ಯೆ ಮರೆತಿದ್ದರೆ ಈ ರೀತಿ ಪರಿಶೀಲಿಸಿ
ಭಾರತೀಯ ರೈಲ್ವೇಯ ಹಲವು ವಿಭಾಗಗಳಲ್ಲಿ ಇಲಿಗಳಿಂದಾಗುವ ಹಾನಿಯನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.