Aadhaar Card-Voter Card ಜೋಡಣೆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ
Election Laws Amendment Bill 2021 - ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲ್ಪಟ್ಟ ಚುನಾವಣಾ ಕಾನೂನು ತಿದ್ದುಪಡಿ ಮಸೂದೆ, 2021 ಅನ್ನು ಇಂದು ರಾಜ್ಯಸಭೆಯು (Rajya Sabha) ಧ್ವನಿ ಮತದಿಂದ ಅಂಗೀಕರಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ನಕಲು ಮತ್ತು ನಕಲಿ ಮತದಾನವನ್ನು ತಡೆಗಟ್ಟಲು ಮತದಾರರ ಕಾರ್ಡ್ (Voter ID) ಮತ್ತು ಪಟ್ಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಮಾಡಲಾಗುವುದು ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ.
Election Laws Amendment Bill 2021 - ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲ್ಪಟ್ಟ ಚುನಾವಣಾ ಕಾನೂನು ತಿದ್ದುಪಡಿ ಮಸೂದೆ, 2021 ಅನ್ನು ಇಂದು ರಾಜ್ಯಸಭೆಯು (Rajya Sabha) ಧ್ವನಿ ಮತದಿಂದ ಅಂಗೀಕರಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ನಕಲು ಮತ್ತು ನಕಲಿ ಮತದಾನವನ್ನು ತಡೆಗಟ್ಟಲು ಮತದಾರರ ಕಾರ್ಡ್ (Voter ID) ಮತ್ತು ಪಟ್ಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಮಾಡಲಾಗುವುದು ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ. ಹೊಸ ನಿಬಂಧನೆಗಳ ಪ್ರಕಾರ, ಇದೀಗ ಆಧಾರ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡುವುದರೊಂದಿಗೆ, ಚುನಾವಣಾ ಕಾಯ್ದೆ ತಿದ್ದುಪಡಿ ಮಸೂದೆ 2021 ರ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರಿಗಳು ಈಗ ಆಧಾರ್ ಕಾರ್ಡ್ (Voter Id-Aadhaar Card Link) ಕೇಳುವ ಹಕ್ಕನ್ನು ಹೊಂದಿರುತ್ತಾರೆ.
ಜನರು ಬೇರೆ ಬೇರೆ ಸ್ಥಳಗಳಲ್ಲಿ ಮತದಾರರಾಗಿ ಉಳಿಯದಂತೆ ಆಧಾರ್ ಲಿಂಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ. ಅವರ ಬಯೋಮೆಟ್ರಿಕ್ ವಿವರಗಳು ಲಭ್ಯವಾಗುವುದರಿಂದ ಅವರು ಒಂದೇ ಸ್ಥಳದಲ್ಲಿ ಮತದಾರರಾಗಲು ಸಾಧಯ್ವಾಗಲಿದೆ. ಇದಲ್ಲದೇ ಮತದಾರರ ಪಟ್ಟಿಗೆ ನಕಲಿ ಹೆಸರು ಸೇರ್ಪಡೆಯಂತಹ ಕಾರ್ಯಗಳಿಗೂ ಇದೀಗ ಕಡಿವಾಣ ಬೀಳಲಿದೆ.
ಇದಕ್ಕೂ ಒಂದು ದಿನ ಮುಂಚಿತವಾಗಿ, ಲೋಕಸಭೆಯು ಸಂಕ್ಷಿಪ್ತ ಚರ್ಚೆಯ ನಂತರ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿತ್ತು. ಇನ್ನೊಂದೆಡೆ ಈ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ಇದನ್ನೂ ಓದಿ-Red Fort: ಕೆಂಪು ಕೋಟೆ ನಮ್ಮ ಆಸ್ತಿ, ನಮಗೆ ನೀಡಿ, ಇಲ್ಲವೇ ಹಣ ಕೊಡಿ: ಹೈಕೋರ್ಟ್‌ಗೆ ಮಹಿಳೆಯ ಮನವಿ
ದೀರ್ಘ ಕಾಲದಿಂದ ಭಾರಿ ಚರ್ಚೆಯಲ್ಲಿದ್ದ ಈ ಮಸೂದೆಯಲ್ಲಿ ಚುನಾವಣೆಗೆ ಸಂಬಂಧಿಸಿದ ವಿವಿಧ ಸುಧಾರಣೆಗಳನ್ನು ಸೇರಿಸಲಾಗಿದೆ. ಆಧಾರ್ ಸಂಖ್ಯೆ ನೀಡದಿರುವ ಯಾವುದೇ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಮತದಾರರ ಪಟ್ಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದರಿಂದ ಚುನಾವಣಾ ದತ್ತಾಂಶ ನಿರ್ವಹಣೆಯಲ್ಲಿ "ದೊಡ್ಡ ಸಮಸ್ಯೆಗಳಲ್ಲಿ ಒಂದನ್ನು" ಪರಿಹರಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಈ ಸಮಸ್ಯೆಯು ವಿವಿಧ ಸ್ಥಳಗಳಲ್ಲಿ ಒಂದೇ ಮತದಾರರ ನೋಂದಣಿಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ-ಒಮಿಕ್ರಾನ್ ಭೀತಿಯ ನಡುವೆ ನೆಮ್ಮದಿಯ ಸುದ್ದಿ... ಭಾರತದ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಕೆ
ಮತದಾರರು ಆಗಾಗ್ಗೆ ತಮ್ಮ ವಾಸಸ್ಥಳವನ್ನು ಬದಲಾಯಿಸುವುದು ಮತ್ತು ಹಿಂದಿನ ಪಟ್ಟಿಯಲ್ಲಿನ ಹೆಸರನ್ನು ಅಪ್ಡೇಟ್ ಮಾಡದೆ, ಹೊಸ ಸ್ಥಳದಲ್ಲಿ ನೋಂದಾಯಿಸಿಕೊಳ್ಳುವುದು ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಅಥವಾ ಒಂದೇ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಕಾಣಿಸಿಕೊಂಡಿರುವ ಮತದಾರರನ್ನು ತೆಗೆದುಹಾಕಬಹುದು.
ಇದನ್ನೂ ಓದಿ-ಒಮಿಕ್ರಾನ್ ಭೀತಿಯ ನಡುವೆ ನೆಮ್ಮದಿಯ ಸುದ್ದಿ... ಭಾರತದ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.