Election Laws Amendment Bill: ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಲೋಕಸಭೆಯ ಅಂಗೀಕಾರ

Election Laws Amendment Bill:ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ (Lok Sabha) ಅಂಗೀಕರಿಸಲಾಗಿದೆ. ಈ ಮಸೂದೆಯಲ್ಲಿ ಮತದಾರರ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

Written by - Nitin Tabib | Last Updated : Dec 20, 2021, 04:33 PM IST
  • ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಲೋಕಸಭೆ ಅಂಗೀಕಾರ.
  • ಈ ಮಸೂದೆಯಲ್ಲಿ ಆಧಾರ್ ಕಾರ್ಡ್ - ವೋಟರ್ ಐಡಿ ಲಿಂಕ್ ಗೆ ಅವಕಾಶ ಕಲ್ಪಿಸಲಾಗಿದೆ.
  • ಇದಕ್ಕೂ ಮೊದಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಐಎಂಐಎಂ, ಆರ್‌ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಮಸೂದೆ ಮಂಡನೆಗೆ ವಿರೋಧಿಸಿವೆ.
Election Laws Amendment Bill: ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಲೋಕಸಭೆಯ ಅಂಗೀಕಾರ title=
Election Laws Amendment Bill 2021 (File Photo)

Aadhaar Card Voter Card: ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದ ಮಸೂದೆಯನ್ನು ಅಂದರೆ ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021 (Election Laws Amendment Bill 2021) ಅನ್ನು ಲೋಕಸಭೆಯು ಅನುಮೋದಿಸಿದೆ. ಈ ಮಸೂದೆಯಲ್ಲಿ ಮತದಾರರ ಕಾರ್ಡ್ (Voter Id) ಅನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮೊದಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಐಎಂಐಎಂ, ಆರ್‌ಎಸ್‌ಪಿ, ಬಿಎಸ್‌ಪಿ ಮುಂತಾದ ಪಕ್ಷಗಳು ಈ ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿದ್ದವು. ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದ್ದಾರೆ. ಈ ಮೂಲಕ 1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ವಿರೋಧ ಪಕ್ಷದ ಸದಸ್ಯರ ಆತಂಕವನ್ನು (Voter Id-Aadhaar Card Link) ಆಧಾರರಹಿತ ಎಂದು ಬಣ್ಣಿಸಿದ ರಿಜಿಜು, ಸದಸ್ಯರು ಅದನ್ನು ವಿರೋಧಿಸಲು ನೀಡಿದ ವಾದಗಳು ಸುಪ್ರೀಂ ಕೋರ್ಟ್‌ನ ತೀರ್ಪನ್ನು ತಪ್ಪಾಗಿ ನಿರೂಪಿಸುವ ಪ್ರಯತ್ನವಾಗಿದೆ ಎಂದು ಹೇಳಿ, ಮಂಡನೆಯಾಗುತ್ತಿರುವ ಮಸೂದೆ  ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿದೆ ಎಂದಿದ್ದಾರೆ.

ವಿರೋಧ ಪಕ್ಷಗಳು ಹೇಳಿದ್ದೇನು?
ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಇದು ಪುಟ್ಟುಸ್ವಾಮಿ ವಿರುದ್ಧ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. "ನಮ್ಮಲ್ಲಿ ದತಾಂಶ ಸಂರಕ್ಷಣಾ ಕಾನೂನು ಇಲ್ಲ ಮತ್ತು ಈ ಹಿಂದೆ ದತಾಂಶ ದುರುಪಯೋಗದ ಪ್ರಕರಣಗಳಿವೆ" ಎಂದು ಕಾಂಗ್ರೆಸ್ ನಾಯಕರು ಈ ಸಂದರ್ಭದಲ್ಲಿ ಹೇಳಿದ್ದಾರೆ. 

ಇಂತಹ ಪರಿಸ್ಥಿತಿಯಲ್ಲಿ ಈ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಚೌಧರಿ ಆಗ್ರಹಿಸಿದ್ದಾರೆ. ಇಂತಹ ಮಸೂದೆಯನ್ನು ತರುವುದು ಸರ್ಕಾರದ ಶಾಸಕಾಂಗ ಸಾಮರ್ಥ್ಯವನ್ನು ಮೀರಿದೆ ಎಂದು ಕಾಂಗ್ರೆಸ್‌ನ ಮನೀಶ್ ತಿವಾರಿ ಹೇಳಿದ್ದಾರೆ. ಇದಲ್ಲದೇ ಈ ರೀತಿ ಆಧಾರ್ ಲಿಂಕ್ ಮಾಡುವಂತಿಲ್ಲ ಎಂದು ಆಧಾರ್ ಕಾಯ್ದೆಯಲ್ಲೂ ಹೇಳಲಾಗಿದೆ. ಇದನ್ನು ವಿರೋಧಿಸಿ ಹಿಂಪಡೆಯಬೇಕು ಎಂದು ಅವರು ಹೇಳಿದ್ದಾರೆ. 

ಇನ್ನೊಂದೆಡೆ ಈ ಕುರಿತು ಮಾತನಾಡಿದ ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್, ಈ ಮಸೂದೆಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲಂಘಿಸಲಾಗಿದೆ ಮತ್ತು ಮೂಲಭೂತ ಹಕ್ಕುಗಳಿಗೆ ಇದು ವಿರುದ್ಧವಾಗಿದೆ ಎಂದು ಹೇಳಿದರು. ಅದಕ್ಕಾಗಿಯೇ ನಾವು ಅದರ ಮಂಡನೆಯನ್ನು ವಿರೋಧಿಸುವೆವು ಎಂದು ಹೇಳಿದ್ದಾರೆ. 

ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಎಐಎಂಐಎಂನ ಅಸಾದುದ್ದೀನ್ ಓವೈಸಿ ಕೂಡ  ಹೇಳಿದ್ದಾರೆ. ಈ ಮಸೂದೆಯು ರಹಸ್ಯ ಮತದಾನದ ನಿಬಂಧನೆಗೂ ವಿರುದ್ಧವಾಗಿದೆ. ಹೀಗಾಗಿ ನಾವು ಅದರ ಮಂಡನೆಯನ್ನು ವಿರೋಧಿಸುತ್ತೇವೆ ಎಂದಿದ್ದಾರೆ.

ಆಧಾರ್ ಅನ್ನು ನಿವಾಸದ ಪುರಾವೆಯಾಗಿ ಮಾತ್ರ ಸ್ವೀಕರಿಸಬಹುದು ಮತ್ತುಅದು  ಪೌರತ್ವದ ಪುರಾವೆಯಾಗಿಲ್ಲ ಎಂದು ಕಾಂಗ್ರೆಸ್‌ನ ಶಶಿ ತರೂರ್ ಹೇಳಿದ್ದಾರೆ. ಹೀಗಿರುವಾಗ ಮತದಾರರ ಪಟ್ಟಿಗೆ ಸೇರಿಸುವುದು ತಪ್ಪುತ್ತದೆ. ನಾವು ಅದನ್ನು ವಿರೋಧಿಸುತ್ತೇವೆ ಎಂದಿದ್ದಾರೆ. 

ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಮಾತನಾಡಿ, ಯಾವುದೇ ವ್ಯಕ್ತಿಗೆ ಜೀವನ, ಖಾಸಗಿತನ ಇತ್ಯಾದಿ ಹಕ್ಕುಗಳನ್ನು ನಿರಾಕರಿಸಲಾಗುವುದಿಲ್ಲ. ಪುಟ್ಟುಸ್ವಾಮಿ ವರ್ಸಸ್ ಭಾರತ ಸರ್ಕಾರದಲ್ಲಿ ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳಿಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮತದಾರರ ಪಟ್ಟಿಯನ್ನು ಆಧಾರ್‌ನೊಂದಿಗೆ ಜೋಡಿಸುವುದು ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದ ಈ ಮಸೂದೆಯ ಕರಡಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ತನ್ನ ಅನುಮೋದನೆ ನೀಡಿತ್ತು. ಈ ಮಸೂದೆಯ ಕರಡು ಪ್ರತಿಯಲ್ಲಿ ಮತದಾರರ ಪಟ್ಟಿಯಲ್ಲಿ ನಕಲು ಮತ್ತು ನಕಲಿ ಮತದಾನ ತಡೆಯುವ ಸಲುವಾಗಿ ಮತದಾರರ ಚೀಟಿ ಮತ್ತು ಪಟ್ಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಹೇಳಲಾಗಿದೆ.

ಕ್ಯಾಬಿನೆಟ್ ಅನುಮೋದಿಸಿದ ಮಸೂದೆಯ ಪ್ರಕಾರ, ಚುನಾವಣಾ ಕಾನೂನನ್ನು ಮಿಲಿಟರಿ ಮತದಾರರಿಗೆ ಲಿಂಗ ತಟಸ್ಥಗೊಳಿಸಲಾಗುವುದು. ಪ್ರಸ್ತುತ ಚುನಾವಣಾ ಕಾನೂನಿನ ನಿಬಂಧನೆಗಳ ಅಡಿಯಲ್ಲಿ, ಸೈನಿಕರ ಪತ್ನಿ ಮಿಲಿಟರಿ ಮತದಾರರಾಗಿ ನೋಂದಾಯಿಸಲು ಅರ್ಹರಾಗಿರುತ್ತಾರೆ ಆದರೆ ಮಹಿಳಾ ಸೈನಿಕರ ಪತಿ ಅರ್ಹರಲ್ಲ. ಪ್ರಸ್ತಾವಿತ ಮಸೂದೆಗೆ ಸಂಸತ್ತಿನ ಒಪ್ಪಿಗೆ ದೊರೆತ ನಂತರ ವಿಷಯಗಳು ಬದಲಾಗಲಿವೆ.

ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಸೇನಾ ಮತದಾರರಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ 'ಹೆಂಡತಿ' ಪದವನ್ನು 'ಸಂಗಾತಿ' ಎಂದು ಬದಲಾಯಿಸುವಂತೆ ಚುನಾವಣಾ ಆಯೋಗವು ಕಾನೂನು ಸಚಿವಾಲಯವನ್ನು ಕೇಳಿತ್ತು. ಇದರ ಅಡಿಯಲ್ಲಿ, ಮತ್ತೊಂದು ನಿಬಂಧನೆಯಲ್ಲಿ, ಪ್ರತಿ ವರ್ಷ ನಾಲ್ಕು ಬಾರಿ  ಯುವಕರಿಗೆ ಮತದಾರರಾಗಿ ನೋಂದಾಯಿಸಲು ಅವಕಾಶ ನೀಡಬೇಕೆಂದು ಕೋರಲಾಗಿದೆ. ಪ್ರಸ್ತುತ, ಜನವರಿ 1 ರಂದು ಅಥವಾ ಅದಕ್ಕಿಂತ ಮೊದಲು 18 ವರ್ಷ ತುಂಬಿದವರಿಗೆ ಮಾತ್ರ ಮತದಾರರಾಗಿ ನೋಂದಾಯಿಸಲು ಅವಕಾಶವಿದೆ.

ಇದನ್ನೂ ಓದಿ-ಎಂಇಎಸ್ ವಿರುದ್ಧ ಈ ಬಾರಿ ನಿರ್ಣಾಯಕ ಕ್ರಮ: ಗುಡುಗಿದ ಸಿಎಂ ಬೊಮ್ಮಾಯಿ

ಅರ್ಹರನ್ನು ಮತದಾರರಾಗಿ ನೋಂದಾಯಿಸಲು ಅವಕಾಶ ನೀಡಲು ಚುನಾವಣಾ ಆಯೋಗವು ಹಲವಾರು 'ಕಟ್ ಆಫ್ ಡೇಟ್'ಗಳನ್ನು ಪ್ರತಿಪಾದಿಸುತ್ತಿದೆ. ಜನವರಿ 1ರ ‘ಕಟ್ ಆಫ್ ಡೇಟ್’ನಿಂದಾಗಿ ಹಲವು ಯುವಕರು ಮತದಾರರ ಪಟ್ಟಿಯಿಂದ ವಂಚಿತರಾಗಿದ್ದಾರೆ ಎಂದು ಆಯೋಗ ಸರ್ಕಾರಕ್ಕೆ ತಿಳಿಸಿತ್ತು. ಕೇವಲ ಒಂದು 'ಕಟ್-ಆಫ್ ದಿನಾಂಕ' ಇರುವಾಗ, ಜನವರಿ 2 ಅಥವಾ ನಂತರ 18 ವರ್ಷಗಳನ್ನು ಪೂರೈಸಿದ ವ್ಯಕ್ತಿಗಳು ನೋಂದಾಯಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರು ತಮ್ಮ ಹೆಸಲು ನೋಂದಣಿ ಮಾಡಲು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತಿತ್ತು.

ಇದನ್ನೂ ಓದಿ-PM Modi ಸುರಕ್ಷತೆಗೆ ನಿಯೋಜಿಸಲಾದ SPG ಕಮಾಂಡೋಗಳ ಸ್ಪೆಷಲ್ ಸೂಟ್ ಕೇಸ್ ನಲ್ಲೆನಿರುತ್ತೆ ಗೊತ್ತಾ?

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಮತ್ತು ನ್ಯಾಯದ ಮೇಲಿನ  ಸಂಸದೀಯ ಸಮಿತಿ ಪ್ರಸ್ತುತಪಡಿಸಿದ ಇತ್ತೀಚಿನ ವರದಿಯಲ್ಲಿ, ಕಾನೂನು ಸಚಿವಾಲಯವು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 14-ಬಿಗೆ ತಿದ್ದುಪಡಿ ಮಾಡಲು ಬಯಸುತ್ತದೆ ಎಂದು ಹೇಳಲಾಗಿದೆ. ಮತದಾರರ ನೋಂದಣಿಗೆ ಪ್ರತಿ ವರ್ಷ ಜನವರಿ 1, ಏಪ್ರಿಲ್ 1, ಜುಲೈ1 ಮತ್ತು ಅಕ್ಟೋಬರ್ - 1ರ  ನಾಲ್ಕು 'ಕಟ್-ಆಫ್ ದಿನಾಂಕಗಳನ್ನು' ಹೊಂದಲು ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ-Panama Papers Leak Case: ಖ್ಯಾತ ಬಾಲಿವುಡ್ ನಟಿ Aishwarya Rai Bachchan ಗೆ ED ಸಮನ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News