ಕೋಲ್ಕತಾ: ಬಂಗಾಳದ ಸಿಲಿಗುರಿಯಲ್ಲಿ ಮತ್ತೊಮ್ಮೆ ಹೈಸ್ಪೀಡ್ ರೈಲಿಗೆ ಮುಖಾಮುಖಿಯಾಗಿ ಆನೆಗಳು ಸಾವನ್ನಪ್ಪಿವೆ. ಬುಧವಾರ ಬೆಳಗ್ಗೆ ಸಿಲಿಗುರಿ ಜಂಕ್ಷನ್‌ನಿಂದ ಹೊರಟ ಕತಿಹಾರ್ ಪ್ಯಾಸೆಂಜರ್ ರೈಲಿಗೆ ಸಿಲುಕಿದ ಎರಡು ಆನೆಗಳು ಮೃತ ಪಟ್ಟಿವೆ. 


COMMERCIAL BREAK
SCROLL TO CONTINUE READING

ರೈಲಿಗೆ ಡಿಕ್ಕಿ ಹೊಡೆದಿದ್ದು ಎರಡೇ ಆನೆಗಳಾದರೂ ಸಾವನ್ನಪ್ಪಿರುವುದು ಮೂರು ಆನೆಗಳು. ವಾಸ್ತವವಾಗಿ ಅವುಗಳಲ್ಲಿ ಒಂದು ಆನೆ ಗರ್ಭಿಣಿ ಎನ್ನಲಾಗಿದೆ. ಈ ಅಪಘಾತದಲ್ಲಿ ಆನೆ ಸಾವನ್ನಪ್ಪಿದೊಡನೆ ಅದರ ಹೊಟ್ಟೆಯಲ್ಲಿದ್ದ ಮರಿಯೂ ಮೃತಪಟ್ಟಿದೆ ಎಂದು ವರದಿ ತಿಳಿಸಿದೆ.



ಸಿಲಿಗುರಿಯ ಖೋಡಿಬಾರಿ ಬ್ಲಾಕ್ ಬಳಿ ಅಪಘಾತ:
ರೈಲ್ವೆ ಹಳಿಗಳ ಸಮೀಪದಲ್ಲೇ ಈ ಆನೆಗಳ ಮೃತ ದೇಹ ಸಿಕ್ಕಿದೆ. ಅಪಘಾತ ವರದಿಯಾದ ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಆನೆಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಅಷ್ಟೊತ್ತಿಗೆ ತಡವಾಗಿತ್ತು. ನಂತರ ಆನೆಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಯಿತು. ಇದರಲ್ಲಿ ಒಂದು ಆನೆಯ ಹೊಟ್ಟೆಯಲ್ಲಿದ್ದ ಮಗು ಕೂಡ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.



ಕೆಲವು ದಿನಗಳ ಹಿಂದೆ, ಸಿಲಿಗುರಿಯ ಖೋಡಿಬಾಡಿ ಬ್ಲಾಕ್‌ನ ಸಿಮುಲ್ಲಾಲ್ಲಾ ಪ್ರದೇಶದಲ್ಲಿರುವ ಸತೀಚಂದ್ರ ಚಹಾ ತೋಟದಲ್ಲಿ ಕೆಲವು ಆನೆ ಹಿಂಡುಗಳು ಆಹಾರ ಹುಡುಕಿಕೊಂಡು ಬಂದಿದ್ದವು. ಈ ಆನೆ ಹಿಂಡು ಹಲವು ದಿನಗಳಿಂದ ಈ ಪ್ರದೇಶದಲ್ಲಿ ಅಲೆದಾಡುತ್ತಿತ್ತು. ಈ ಎರಡು ವಯಸ್ಕ ಆನೆಗಳು ಬಹುಶಃ ಇದೇ ಹಿಂಡಿನ ಭಾಗವಾಗಿರಬಹುದೆಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. 



ಐದು ವರ್ಷಗಳಲ್ಲಿ 77 ಆನೆಗಳ ಸಾವು:
ಈ ರೀತಿ ರೈಲುಗಳಿಗೆ ಸಿಲುಕಿ ಆನೆಗಳು ಸಾವನ್ನಪ್ಪಿರುವುದು ಇದೇ ಮೊದಲೇನಲ್ಲ. 2015 ರಿಂದ 2019 ರ ನವೆಂಬರ್ ವರೆಗೆ ಐದು ವರ್ಷಗಳ ಅವಧಿಯಲ್ಲಿ ಒಟ್ಟು 77 ಆನೆಗಳು ರೈಲ್ವೆ ಹಳಿಗಳಲ್ಲಿ ಮೃತಪಟ್ಟಿವೆ. 2015 ರ ಅವಧಿಯಲ್ಲಿ ಏಳು ಆನೆಗಳು ರೈಲುಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ತಿಳಿಸಿದ್ದರು, 2016 ರಲ್ಲಿ 10, 2017 ರಲ್ಲಿ 19, 2017 ರಲ್ಲಿ 15, 2017 ರಲ್ಲಿ 26, 2018 ರಲ್ಲಿ 26 ಮತ್ತು 2019 ರ ನವೆಂಬರ್ ವರೆಗೆ 7 ಆನೆಗಳು ಸಾವನ್ನಪ್ಪಿವೆ. 



ರೈಲ್ವೆ ಸಚಿವರ ಪ್ರಕಾರ, ಉತ್ತರ ಬಂಗಾಳ ಸೇರಿದಂತೆ ಅನೇಕ ಪ್ರಾದೇಶಿಕ ರೈಲ್ವೆ ವಿಭಾಗಗಳಲ್ಲಿ ಆನೆಗಳು ರೈಲುಗೆ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ.


ಆನೆಗಳನ್ನು ಉಳಿಸಲು ಸರ್ಕಾರದ ಪ್ರಯತ್ನ:
ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಇಂತಹ ಅಪಘಾತಗಳನ್ನು ತಡೆಗಟ್ಟಲು, ವಲಯ ರೈಲ್ವೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದೊಂದಿಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಗುರುತಿಸಲಾದ ಸ್ಥಳಗಳಲ್ಲಿ ರೈಲಿನ ವೇಗವನ್ನು ನಿಯಂತ್ರಿಸುವುದು, ಚಿಹ್ನೆಗಳ ಫಲಕಗಳನ್ನು ಹಾಕುವುದು, ರೈಲು ಸಿಬ್ಬಂದಿ ಮತ್ತು ಸ್ಟೇಷನ್ ಮಾಸ್ಟರ್ ಅನ್ನು ನಿಯಮಿತವಾಗಿ ಸಂವೇದಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.