ನವದೆಹಲಿ: ಸಾಮಾನ್ಯವಾಗಿ ಪೆನ್ಷನ್ ಪಡೆಯಲು ಜೀವಿತ ಪ್ರಮಾಣ ಪತ್ರ ನಿಈದುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಲೈಫ್ ಸರ್ಟಿಫಿಕೆಟ್ ಎಂದೂ ಕೂಡ ಹೇಳಲಾಗುತ್ತದೆ. ಸದ್ಯ EPFO ದೇಶಾದ್ಯಂತದ ತನ್ನ 65 ಲಕ್ಷ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯನ್ನೇ ಪ್ರಕಟಿಸಿದೆ. ಹೌದು, ಇದೀಗ ಪೆನ್ಷನ್ ಪಡೆಯುವವರು ತಮ್ಮ ಮನೆಯ ಹತ್ತಿರದಲ್ಲಿಯೇ ಇರುವ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಿದ್ಧಪಡಿಸಗಬಹುದಾಗಿದೆ.


COMMERCIAL BREAK
SCROLL TO CONTINUE READING

ದೇಶಾದ್ಯಂತ ಈಗಾಗಲೇ 3.65 ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಗಲಿವೆ. EPFO ಇವುಗಳ ಜೊತೆಗೆ ಟೈ ಅಪ್ ಮಾಡಿಕೊಂಡಿದೆ. ಈ ಕಾಮನ್ ಸರ್ವಿಸ್ ಸೆಂಟರ್ ಗಳ ಮೇಲೆ ಗ್ರಾಹಕರ ದಾಖಲೆಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪಡೆಯಲಾಗುವುದು.


ಆದರೆ, EPFO ಪ್ರಾದೇಶಿಕ ಕಚೇರಿಗಳಲ್ಲಿಯೂ ಕೂಡ ಜೀವಿತ ಪ್ರಮಾಣ ಪತ್ರ ನೀಡಬಹುದಾಗಿದೆ. ದೇಶಾದ್ಯಂತ ಒಟ್ಟು 125 ಪ್ರಾದೇಶಿಕ ಕಛೇರಿಗಳಿದ್ದು, 117 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ EPFO ಕಚೇರಿಗಳಿವೆ. ಅಲ್ಲಿಯೇ ಈ ಕೆಲಸ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಯಾವ ಬ್ಯಾಂಕ್ ನಲ್ಲಿ ಪೆನ್ಷನ್ ಪಡೆಯಲಾಗುತ್ತದೆಯೋ ಅಲ್ಲಿಯೂ ಕೂಡ ಈ ಕೆಲಸ ಮಾಡಿಸಬಹುದಾಗಿದೆ.


ಯಾವುದೇ ಓರ್ವ ಗ್ರಾಹಕ ನೀಡಿರುವ ಜೀವಿತ ಪ್ರಮಾಣ ಪತ್ರ ಒಂದು ವರ್ಷದ ಅವಧಿಗೆ ಸಿಂಧುತ್ವ ಹೊಂದಿರುತ್ತದೆ. ಪೆನ್ಶನ್ ಪಡೆಯುವ ವ್ಯಕ್ತಿ ವರ್ಷದಲ್ಲಿ ಯಾವಾಗಲಾದರೂ ಕೂಡ ಈ ಪ್ರಮಾಣ ಪತ್ರ ಸಲ್ಲಿಸಬೇಕು. ಇದಕ್ಕೂ ಮೊದಲು ನವೆಂಬರ್ ನಲ್ಲಿ ಎಲ್ಲರೂ ಕೂಡ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮವಿತ್ತು . ಆದರೆ, ಹಳೆಯ ಪ್ರಮಾಣ ಪತ್ರ ಸಲ್ಲಿಸುವವರು ನವೆಂಬರ್ ವರೆಗೆ ತಮ್ಮ ಪ್ರಮಾಣ ಪತ್ರ ಸಲ್ಲಿಸಬೇಕು.