ನವದೆಹಲಿ: PF Nominee Update - ಕೇಂದ್ರ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಚಂದಾದಾರರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ನಿಮ್ಮ  EPFO ಚಂದಾದಾರಿಕೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಅಂತೆಯೇ, ಅದರ ಇ-ನಾಮನಿರ್ದೇಶನ (PF E-Nomination) ಸೇವೆಯನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇದಕ್ಕಾಗಿ ನೀವು ಇಪಿಎಫ್‌ಒ ವೆಬ್‌ಸೈಟ್‌ ಗೆ ಭೇಟಿ ನೀಡಿ ಮನೆಯಲಿಯೇ ಕುಳಿತು ನೀವು ಈ ಕೆಲಸವನ್ನು ಮಾಡಬಹುದು. ನೀವು EPFO ​​ನ ಎಲ್ಲಾ ಸೌಲಭ್ಯಗಳ ಲಾಭವನ್ನು ಪಡೆಯಲು ಬಯುತ್ತಿದ್ದರೆ, ನೀವು ನಿಮ್ಮ ನಾಮನಿರ್ದೇಶನವನ್ನು ಮಾಡಬೇಕು. ಇದಕ್ಕಾಗಿ ನೀವು ಇಪಿಎಫ್‌ಒ ಕಚೇರಿಗೆ ಹೋಗುವ ಅಗತ್ಯವಿಲ್ಲ. ಹಾಗಾದರೆ ಬನ್ನಿ ಇ-ನಾಮಿನೆಶನ್ (Online E-Nomination) ಅನ್ನು ಮನೆಯಲ್ಲಿಯೇ ಕುಳಿತು ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.


EPFO Rules: ನೌಕರಿ ಬಿಟ್ಟ ಬಳಿಕ ಇಷ್ಟು ದಿನಗಳಲ್ಲಿ PFನಿಂದ ಹಣ ಹಿಂಪಡೆಯದೆ ಹೋದರೆ ಭಾರಿ ಹಾನಿ, ಕಾರಣ ಇಲ್ಲಿದೆ


COMMERCIAL BREAK
SCROLL TO CONTINUE READING

1.  ಮೊದಲನೆಯದಾಗಿ ನೀವು EPFO ​​ವೆಬ್‌ಸೈಟ್‌ಗೆ (https://www.epfindia.gov.in/site_en/index.php) ಹೋಗಬೇಕು ಮತ್ತು  Service ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


2. ನಂತರ For Employees ಸೆಕ್ಷನ್ ಮೇಲೆ ಕ್ಲಿಕ್ ಮಾಡಿ. ಮರುನಿರ್ದೇಶಿಸಿದ ನಂತರ, ನೀವು Member UAN/Online Service ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.


3. ಇದರ ನಂತರ ಚಂದಾದಾರರನ್ನು ಅಧಿಕೃತ ಸದಸ್ಯ e-SEWA ಪೋರ್ಟಲ್‌ಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ UAN ಮತ್ತು ಪಾಸ್‌ವರ್ಡ್ ಸಹಾಯದಿಂದ ಲಾಗ್ ಇನ್ ಮಾಡಬೇಕು.


4. ಇದರ ನಂತರ ಡ್ರಾಪ್ ಡೌನ್ ಮೆನುವಿನಲ್ಲಿ ಮ್ಯಾನೇಜ್ ಟ್ಯಾಬ್‌ಗೆ ಹೋಗಿ ಮತ್ತು E-Nomination ಆಯ್ಕೆ ಮಾಡಿ. ಇದರಲ್ಲಿ Yes ಆಯ್ಕೆಯನ್ನು ಕ್ಲಿಕ್ಕಿಸಿ ಮತ್ತು ಕುಟುಂಬ ಘೋಷಣೆಯನ್ನು ನವೀಕರಿಸಿ.


5. Add Family Details ಕ್ಲಿಕ್ ಮಾಡಿ ಮತ್ತು ನಾಮನಿರ್ದೇಶನ ವಿವರಗಳನ್ನು ಆಯ್ಕೆಮಾಡಿ ಇದರಿಂದ ನೀವು ಹಂಚಿಕೊಳ್ಳಬೇಕಾದ ಒಟ್ಟು ಮೊತ್ತವನ್ನು ಘೋಷಿಸಬಹುದು.


6. ಇದಾದ ನಂತರ ಸೇವ್ EPF ನಾಮಿನೇಷನ್ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟಕ್ಕೆ ಹೋದ ನಂತರ e-Sign ಆಯ್ಕೆಯನ್ನು ಕ್ಲಿಕ್ ಮಾಡಿ.


7. ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸಲಾಗುತ್ತದೆ, ಅದನ್ನು ನಮೂದಿಸಿದ ನಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.


ಇದನ್ನೂ ಓದಿ-EPFO News:EPFOನ 6.47 ಕೋಟಿ ಚಂದಾದಾರರಿಗೊಂದು Good News


ಇಪಿಎಫ್ ಎಂದರೇನು?
EPFO ತನ್ನ ಚಂದಾದಾರರಿಗೆ ಅವರ ನಿವೃತ್ತಿಯ ಮೇಲೆ ನಿಧಿ ಮತ್ತು ಪಿಂಚಣಿ ಸೌಲಭ್ಯವನ್ನು ಒದಗಿಸುತ್ತದೆ. ಚಂದಾದಾರರ ಮರಣದ ಸಂದರ್ಭದಲ್ಲಿ, ಅವರ ಕುಟುಂಬವು Family Pension ಮತ್ತು Insurance ಹಣವನ್ನು ಪಡೆಯುತ್ತದೆ. ಇದಲ್ಲದೇ ಅಗತ್ಯವಿದದ ಸಂದರ್ಭದಲ್ಲಿ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಬಹುದು. EPFO ಇತ್ತೀಚೆಗೆ ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ (EDLI) ಯೋಜನೆಯ ಚಂದಾದಾರರಿಗೆ ವಿಮಾ ಪ್ರಯೋಜನವನ್ನು ಹೆಚ್ಚಿಸಿದೆ.  ಈ ಮೊತ್ತವನ್ನು 2.5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಈ ಮಿತಿ 2 ಲಕ್ಷದಿಂದ 6 ಲಕ್ಷದವರೆಗೆ ಇತ್ತು.


ಇದನ್ನೂ ಓದಿ-EPFOನಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡುವುದು ಈಗ ಬಹಳ ಸುಲಭ, UAN ಮೂಲಕ ಆಗಲಿದೆ ಕೆಲಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ