EPFOನಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡುವುದು ಈಗ ಬಹಳ ಸುಲಭ, UAN ಮೂಲಕ ಆಗಲಿದೆ ಕೆಲಸ

ನಿಮ್ಮ ಹಳೆಯ ಅಥವಾ ತಪ್ಪು ಖಾತೆ ಸಂಖ್ಯೆಯನ್ನು EPFO ​​ನಲ್ಲಿ ನಮೂದಿಸಿದ್ದರೆ, UAN ಮೂಲಕ ನಿಮ್ಮ ಹೊಸ ಬ್ಯಾಂಕ್ ಖಾತೆಯನ್ನು ಸುಲಭವಾಗಿ ಅಪ್ಡೇಟ್  ಮಾಡಬಹುದು.

Written by - Ranjitha R K | Last Updated : Nov 9, 2021, 07:21 PM IST
  • ಪಿಎಫ್ ಮೊತ್ತ ನಿವೃತ್ತಿ ಜೀವನಕ್ಕೆ ಬಹಳ ಮುಖ್ಯವಾದುದು.
  • ಬ್ಯಾಂಕ್ ಖಾತೆಯನ್ನು ನವೀಕರಿಸದಿದ್ದರೆ, ಬಹಳಷ್ಟು ತೊಂದರೆಯಾಗುತ್ತದೆ
  • ಬ್ಯಾಂಕ್ ವಿವರಗಳನ್ನು ಈ ರೀತಿ ಅಪ್ಡೇಟ್ ಮಾಡಿ
EPFOನಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡುವುದು ಈಗ ಬಹಳ ಸುಲಭ,  UAN ಮೂಲಕ ಆಗಲಿದೆ ಕೆಲಸ  title=
ಬ್ಯಾಂಕ್ ವಿವರಗಳನ್ನು ಈ ರೀತಿ ಅಪ್ಡೇಟ್ ಮಾಡಿ (file photo)

ನವದೆಹಲಿ : EPFO Bank Account : ಪಿಎಫ್ ಮೊತ್ತ ನಿವೃತ್ತಿ ಜೀವನಕ್ಕೆ ಬಹಳ ಮುಖ್ಯವಾದುದು. ಈ ಮೊತ್ತವು ನಿವೃತ್ತಿಯ (PF Amount) ಸಮಯದಲ್ಲಿ ಬಹಳ ಸಹಾಯಕ್ಕೆ ಬರುತ್ತದೆ. ಪಿಎಫ್‌ನಲ್ಲಿ (PF) ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದರೆ ಮಾತ್ರ ಹಣವನ್ನು ಹಿಂಪಡೆಯುವುದು ಸಾಧ್ಯವಾಗುತ್ತದೆ. ನೀವು ಉದ್ಯೋಗವನ್ನು ಬದಲಾಯಿಸಿದ್ದು, ಬ್ಯಾಂಕ್ ಖಾತೆಯನ್ನು (Bank account) ನವೀಕರಿಸದಿದ್ದರೆ, ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಬ್ಯಾಂಕ್ ಖಾತೆಯನ್ನು ನವೀಕರಿಸಬಹುದು :
ನಿಮ್ಮ ಹಳೆಯ ಅಥವಾ ತಪ್ಪು ಖಾತೆ ಸಂಖ್ಯೆಯನ್ನು EPFO ​​ನಲ್ಲಿ ನಮೂದಿಸಿದ್ದರೆ, UAN ಮೂಲಕ ನಿಮ್ಮ ಹೊಸ ಬ್ಯಾಂಕ್ ಖಾತೆಯನ್ನು ಸುಲಭವಾಗಿ ಅಪ್ಡೇಟ್  ಮಾಡಬಹುದು. ಯುನಿವರ್ಸಲ್ ಖಾತೆ ಸಂಖ್ಯೆ ಮೂಲಕ  ಮನೆಯಲ್ಲಿ ಕುಳಿತು ನಿಮ್ಮ ಬ್ಯಾಂಕ್ ವಿವರಗಳನ್ನು ಹೇಗೆ ಅಪ್‌ಡೇಟ್ ಮಾಡಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.  

ಇದನ್ನೂ ಓದಿ : ಕೇವಲ 1400 ರೂಪಾಯಿಗೆ ವಿಮಾನಯಾನದ ಅವಕಾಶ, ತಕ್ಷಣ ಟಿಕೆಟ್ ಬುಕ್ ಮಾಡಿ..!

ಬ್ಯಾಂಕ್ ವಿವರಗಳನ್ನು ಈ ರೀತಿ ಅಪ್ಡೇಟ್ ಮಾಡಿ :
-ಮೊದಲು EPFO ​​ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಮಾಡಿ
- ಮೆನುವಿನಲ್ಲಿ'Manage' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
-ಡ್ರಾಪ್ ಡೌನ್ ಮೆನುವಿನಿಂದ KYC ಆಯ್ಕೆಗೆ ಹೋಗಿ ಮತ್ತು ಡಾಕ್ಯುಮೆಂಟ್ ಟೈಪ್ ನಲ್ಲಿ ಬ್ಯಾಂಕ್ ಆಯ್ಕೆಮಾಡಿ
-ಈಗ ಹೊಸ ಬ್ಯಾಂಕ್ ಖಾತೆಯ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸಿ
-ಈಗ ಸೇವ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಿನಂತಿಯು KYC Pending for Approval ಎಂದು ತೋರಿಸುತ್ತದೆ
-ಈಗ ನಿಮ್ಮ ಕಂಪನಿಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ
-ಕಂಪನಿಯಿಂದ ಅನುಮೋದನೆ ಪಡೆದ ನಂತರ, KYC Pending for Approval  ಬದಲು digitaly approved KYC ಕಾಣಿಸುತ್ತದೆ 

 ಪಿಎಫ್ ಬಡ್ಡಿಯನ್ನು ಪಾವತಿಸಿದ ಇಪಿಎಫ್ಒ:
ಇಪಿಎಫ್‌ಒ ಟ್ವೀಟ್ ಮಾಡುವ ಮೂಲಕ ಭವಿಷ್ಯನಿಧಿ ಸಂಸ್ಥೆಯೊಂದಿಗೆ (EPFO) ಸಂಬಂಧ ಹೊಂದಿರುವ 25 ಕೋಟಿ ಗ್ರಾಹಕರು ಶೇಕಡಾ 8.5 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿತ್ತು. ಅನೇಕ ಖಾತೆದಾರರ ಖಾತೆಗಳಿಗೆ ಬಡ್ಡಿ ಹಣ ಬರಲಾರಂಭಿಸಿದೆ. ನಿಮ್ಮ ಪಿಎಫ್ ಖಾತೆಯಲ್ಲಿನ (PF Account) ಬಡ್ಡಿಯ ಮೊತ್ತವನ್ನು ಪರಿಶೀಲಿಸಬೇಕಾದರೆ ಬೇರೆ ಬೇರೆ ರೀತಿಗಳಲ್ಲಿ ಮಾಡಬಹುದು.

ಇದನ್ನೂ ಓದಿ :  ಇನ್ನು ಸಿಗುವುದಿಲ್ಲ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಈ ಸೌಲಭ್ಯ, ತಿಳಿದುಕೊಂಡಿರದಿದ್ದರೆ ನಷ್ಟ ಖಂಡಿತಾ

SMS ಮೂಲಕ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು ?
SMS ಮೂಲಕ ಬ್ಯಾಲೆನ್ಸ್ ಪರಿಶೀಲಿಸಲು ಬಯಸಿದರೆ, 7738299899 ಈ ಸಂಖ್ಯೆಯ ಮೂಲಕ ಬ್ಯಾಲೆನ್ಸ್ ಅನ್ನು ಕಂಡುಹಿಡಿಯಬಹುದು.  EPFOHO UAN ENG ಎಂದು ಟೈಪ್ ಮಾಡಬೇಕು. ಇಲ್ಲಿ UAN ಬದಲಿಗೆ  UAN ಸಂಖ್ಯೆಯನ್ನು ನಮೂದಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News