ನವದೆಹಲಿ: Ethanol As Standalone Fuel - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆಯಿಂದ ನಾಗರಿಕರಿಗೆ ಇದೀಗ ಭಾರಿ ನೆಮ್ಮದಿ ಸಿಗಲಿದೆ. ಏಕೆಂದರೆ ಸರ್ಕಾರ Ethanol ಅನ್ನು ಸ್ಟಾಂಡ್ Standalone Fuel ರೂಪದಲ್ಲಿ ಬಳಸಲು ಅನುಮತಿ ನೀಡಿದೆ. ಹೀಗಾಗಿ ಇನ್ಮುಂದೆ ತೈಲ ಕಂಪನಿಗಳು ನೇರವಾಗಿ E-100 ತೈಲವನ್ನು ಮಾರಾಟ ಮಾಡಬಹುದು. ವರದಿಂಗಳ ಪ್ರಕಾರ ಈ ಕುರಿತು ಪೆಟ್ರೋಲಿಯಂ ಸಚಿವಾಲಯ ಈ ಕುರಿತು ಆದೇಶ ಕೂಡ ಹೊರಡಿಸಿದೆ. ಆದರೆ, ಕೇವಲ E-100 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳಲ್ಲಿ ಮಾತ್ರ ಈ ಇಂಧನವನ್ನು ಬಳಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಪೆಟ್ರೋಲ್ ಹಾಗೂ ಡಿಸೇಲ್ ರೀತಿಯೇ E-100 ಇಂಧನಕ್ಕೆ ಅನುಮತಿ
ಈ ಕುರಿತು ಆದೇಶ ಜಾರಿ ಮಾಡಿರುವ ಪೆಟ್ರೋಲಿಯಂ ಸಚಿವಾಲಯ. ಇಥೆನಾಲ್ ಅನ್ನು ಸ್ಟಾಂಡ್ ಅಲೋನ್ ಇಂಧನವನ್ನಾಗಿ ಘೋಷಿಸಿದೆ. ಅಂದರೆ ಇನ್ಮುಂದೆ ನೀವು E-100 ಇಂಧನವನ್ನು ಪೆಟ್ರೋಲ್ ಹಾಗೂ ಡಿಸೇಲ್ ರೀತಿಯೇ ಬಳಸಬಹುದು. ಇದಕ್ಕಾಗಿ ಮೋಟರ್ ಸ್ಪೀರಿಟ್ ಹಾಗೂ ಹೈ ಸ್ಪೀಡ್ ಡಿಸೇಲ್ ಆದೇಶ 2005ಕ್ಕೆ (Motor Spirit and high-speed diesel order 2005) ತಿದ್ದುಪಡಿ ತರಲಾಗಿದೆ .


ಸಕ್ಕರೆ ಕಾರ್ಖಾನೆಗಳಿಗೆ ಇದರಿಂದ ನೇರ ಲಾಭ
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಶುಗರ್ ಕಂಪನಿಗಳು, OMCs ಗಳಿಗೆ ಅತಿ ಹೆಚ್ಚಿನ ಲಾಭವಾಗಲಿದೆ. ಸರ್ಪ್ಲಸ್ ಸ್ಟಾಕ್ ಜೊತೆಗೆ ಇಥೆನಾಲ್ ಉತ್ಪಾದನೆ ವೃದ್ಧಿಯ ಲಾಭ ಅವು ಪಡೆಯಬಹುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ತಜ್ಞರು ಹೇಳುವ ಪ್ರಕಾರ ಭಾರತದಲ್ಲಿ ಡಿಸ್ಟಿಲರಿ ಹಾಗೂ ಜಲ ಸಂಪನ್ಮೂಲಗಳ ಕೊರತೆಯ ಕಾರಣ ಇಥೆನಾಲ್ ಅನ್ನು ಬೇಕಾಗುವ ಮಟ್ಟಕ್ಕೆ ಉತ್ಪಾದಿಸುವುದು ಒಂದು ಸವಾಲಾಗಿದೆ. ಇದಕ್ಕಾಗಿ ಸರ್ಕಾರ ಮೂಲಭೂತ ಸೌಕರ್ಯ, ಸಕ್ಕರೆ ಹಾಗೂ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ತಯಾರಿಸಬೇಕಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ-Petrol-Diesel: 'ಬಡ, ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಸಿಗಲಿದೆ ಶೀಘ್ರದಲ್ಲಿ ಪೆಟ್ರೋಲ್'


ಇಥೆನಾಲ್ ಹೇಗೆ ತಯಾರಿಸುತ್ತಾರೆ.
ಇಥೆನಾಲ್ (Ethanol) ಒಂದು ರೀತಿಯ ಅಲ್ಕೋಹಾಲ್ ಆಗಿದೆ. ಇದನ್ನು ಪೆಟ್ರೋಲ್ ನಲ್ಲಿ ಬೆರೆಸಿ ವಾಹನಗಳಲ್ಲಿ ಇಂಧನದ ರೂಪದಲ್ಲಿ ಬಳಸಬಹುದು. ಇಥೆನಾಲ ಅನ್ನು ಪ್ರಮುಖವಾಗಿ ಕಬ್ಬಿನ ಬೆಳೆಯಿಂದ ಉತ್ಪಾದಿಸಲಾಗುತ್ತದೆ. ಆದರೆ ಶರ್ಕರವನ್ನು ಒಳಗೊಂಡ ಇತರೆ ಬೆಳೆಗಳಿಂದ ಕೂಡ ಇದನ್ನು ತಯಾರಿಸಬಹುದು. ಇದರಿಂದ ಕೃಷಿ ಹಾಗೂ ನಿಸರ್ಗ ಎರಡಕ್ಕೂ ಕೂಡ ಲಾಭ ಸಿಗಲಿದೆ. ಭಾರತದ ದೃಷ್ಟಿಯಿಂದ ಹೇಳುವುದಾದರೆ, ನಮ್ಮ ದೇಶ ಇಥೆನಾಲ್ ಉತ್ಪಾದನೆಯ ಅಕ್ಷಯ ಆಗರವಾಗಿದೆ. ಏಕೆಂದರೆ ದೇಶದಲ್ಲಿ ಕಬ್ಬಿನ ಬೆಲೆಗೆ ಎಂದಿಗೂ ಕೊರತೆ ಎದುರಾಗುವುದಿಲ್ಲ.


ಇದನ್ನೂ ಓದಿ- ಮೂರು ದಿನಗಳ ನಂತರ ಮತ್ತೆ Petrol ದರ ಏರಿಕೆ, ಹೊಸ ದಾಖಲೆ ನಿರ್ಮಿಸಿದ Petrol-Diesel


ಇಥೆನಾಲ್ ಇಂಧನ ಬಳಕೆಯ ಲಾಭಗಳೇನು?
2014ಕ್ಕೂ ಮೊದಲು ಪೆಟ್ರೋಲ್ (Petrol) ನಲ್ಲಿ ಶೇ.1 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಥೆನಾಲ್ ಬ್ಲೆಂಡ್ ಮಾಡಲಾಗುತ್ತಿತ್ತು ಅಂದರೆ ಬೇರೆಸಲಾಗುತ್ತಿತ್ತು. ಬಳಿಕ ಇದನ್ನು ಶೇ.8.5 ರಷ್ಟು ಹೆಚ್ಚಿಸಲಾಯಿತು. ಇದೀಗ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಬೆರೆಸುವ ಗುರಿ ಹೊಂದಲಾಗಿದೆ. ಪೆಟ್ರೋಲ್ ನಲ್ಲಿ ಇಥೆನಾಲ್ ಸೇರಿಸುವ ಹಲವು ಲಾಭಗಳಿವೆ.


- ಮೊದಲನೆಯದಾಗಿ ಪೆಟ್ರೋಲಿಯಂ ಮೇಲೆ ಭಾರತದ ಅವಲಂಬನೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಪ್ರಸ್ತುತ ಭಾರತ ತನಗೆ ಅವಶ್ಯವಿರುವ ಶೇ.83 ರಷ್ಟು ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.
- ಕಾರ್ಬನ್ ಡೈಆಕ್ಸೈಡ್ ಕಡಿಮೆ ಹೊರಸೂಸುವಿಕೆಯಿಂದ ವಾತಾವರಣ ದೃಷ್ಟಿಯಿಂದಲೂ ಕೂಡ ಇದು ಉಪಯುಕ್ತವಾಗಿದೆ.
- ಎಥೆನಾಲ್ ಬಳಕೆಯಿಂದ ರೈತರಿಗೂ ಕೂಡ ಲಾಭವಾಗಲಿದೆ. ಅವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಏಕೆಂದರೆ ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ ಹಾಗೂ ಇತರ ಬೆಳೆಗಳಿಂದ ತಯಾರಿಸಲಾಗುತ್ತದೆ.
- ಸಕ್ಕರೆ ಕಾರ್ಖಾನೆಗಳಿಗೆ ಹಣ ಗಳಿಕೆಗೆ ಮತ್ತೊಂದು ಪರ್ಯಾಯ ದೊರೆಯಲಿದೆ. ಇದರಿಂದ ಅವರು ತಮ್ಮ ಬಾಕಿ ಸಾಲದ ಹಣವನ್ನು ಬೇಗ ಪಾವತಿಸಬಹುದು.
- ಇದು ತುಂಬಾ ಅಗ್ಗದ ಬೆಲೆಯಲ್ಲಿ ದೊರೆಯುವ ಕಾರಣ ದಿನದಿಂದ ದಿನಕ್ಕೆ ಗಗನ ಮುಖಿಯಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ (Petrol-Disel Price)ಏರಿಕೆಯಿಂದಲೂ ಕೂಡ ಗ್ರಾಹಕರಿಗೆ ನೆಮ್ಮದಿ ಸಿಗಲಿದೆ.


ಇದನ್ನೂ ಓದಿ-RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.